ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿದಿಯ ನಂಬಲೇಬೆಕಾದ 11 ಸತ್ಯಗಳು

0Shares

ತಿರುಪತಿ ಶ್ರೀ ವೆಂಟೇಶ್ವರ ಸ್ವಾಮಿ

1) ದೇವಸ್ಥಾನದ ಪ್ರಾರಂಭದಲ್ಲಿ ಮಹಾದ್ವಾರದ ಬಲಗಡೆ ಶ್ರೀ ವೆಂಕಟೇಶ್ವರ ಸ್ವಾಮಿಯವರ ತಲೆಯ ಮೇಲೆ ಅನಂತಾಳ್ವಾರ್ ಹೊಡೆದ ಗಾಯ ಇರುತ್ತದೆ. ಚಿಕ್ಕಮಗುವಿನ ರೂಪದಲ್ಲಿ ಇದ್ದ ಸ್ವಾಮಿಯವರನ್ನು ಆ ರಾಡಿನಲ್ಲಿ ಹೊಡೆದಿದ್ದರಿಂದ ಸ್ವಾಮಿಯವರ ಗಡ್ಡದ ಮೇಲೆ ಗಾಯವಾಗಿ ರಕ್ತ ಬರುತ್ತದೆ, ಆಗಲಿಂದ ಸ್ವಾಮಿಯವರ ಗಡ್ಡದ ಮೇಲೆ ಗಂಧವನ್ನು ಹಚ್ಚುವುದು ಸಂಪ್ರದಾಯವಾಗಿದೆ.

2) ಶ್ರೀ ವೆಂಕಟೇಶ್ವರ ಸ್ವಾಮಿ ವಿಗ್ರಹದಲ್ಲಿ ತಲೆ ಕೂದಲು ಜುಟ್ಟು (ನಿಜವಾದ ಕೂದಲು) ಇರುತ್ತದೆ. ಈ ಕೂದಲು ಯಾವಾಗಲೂ ಚಿಕ್ಕೆ ಹಿಡಿಯುವುದಿಲ್ಲ ಅಂತಾರೆ.

3) ತಿರುಮಲ ದೇವಸ್ಥಾನದಿಂದ 23 ಕಿ.ಮೀ ದೂರದಲ್ಲಿ ಒಂದು ಗ್ರಾಮ ಇರುತ್ತದೆ. ಆ ಗ್ರಾಮಸ್ಥರಿಗೆ ಬಿಟ್ಟು ಬೇರೆಯವರಿಗೆ ಆ ಗ್ರಾಮದ ಒಳಗಡೆ ಪ್ರವೇಶವಿಲ್ಲ. ಆ ಗ್ರಾಮಸ್ಥರು ತುಂಬಾ ಪದ್ಧತಿಯಿಂದ ಇರುತ್ತಾರೆ. ಅಲ್ಲಿಂದಲೇ ಸ್ವಾಮಿಯವರಿಗೆ ಹೂವು ತರುತ್ತಾರೆ. ಅಲ್ಲೇ ಇರುವ ತೋಟದಿಂದ ಆ ಹೂವುಗಳನ್ನು ತರುತ್ತಾರೆ. ಗರ್ಭಗುಡಿಯಲ್ಲಿ ಇರುವ ಪ್ರತಿಯೊಂದು ಆ ಗ್ರಾಮದಿಂದಲೇ ಬರುತ್ತದೆ.(ಹಾಲು,ತುಪ್ಪ,ಹೂವು,ಇತ್ಯಾದಿ..,)

4) ಸ್ವಾಮಿಯವರು ಗರ್ಭ ಗುಡಿಯ ಮದ್ಯ ಭಾಗದಲ್ಲಿ ಇರುವಂತೆ ಕಾಣಿಸುತ್ತಾರೆ. ಆದರೆ ನಿಜವಾಗಿ ಸ್ವಾಮಿಯು ಗರ್ಭಗುಡಿಯ ಬಲಗಡೆಯ ಕಾರ್ನರ್ ನಲ್ಲಿ ಇರುತ್ತಾರೆ. ಆಚೆಕಡೆಯಿಂದ ಗಮನಿಸಿದರೆ ಈ ವಿಷಯ ನಮಗೆ ತಿಳಿಯತ್ತದೆ.

5) ಸ್ವಾಮಿಯವರಿಗೆ ಪ್ರತಿದಿನ ಕೆಳಗೆ ಪಂಚೆ, ಮೇಲೆ ಸೀರೆಯಿಂದ ಅಲಂಕರಿಸುತ್ತಾರೆ. ಸುಮಾರು 50 ಸಾವಿರ ಖರೀದಿ ಮಾಡುವ ಸೇವೆ ಇರುತ್ತದೆ. ಆ ಸೇವೆಯಲ್ಲಿ ಪಾಲ್ಗೊಂಡ ದಂಪತಿಗಳಿಗೆ ಸೀರೆಯನ್ನು ಸ್ತ್ರೀಯರಿಗೆ, ಪಂಚೆಯನ್ನು ಪುರುಷರಿಗೆ ಕೊಡುತ್ತಾರೆ. ಈ ಸೇವೆಗೆ ತುಂಬಾ ಕಡಿಮೆ ಟಿಕೆಟ್ಟುಗಳನ್ನು ಮಾರುತ್ತಾರೆ.

6) ಗರ್ಭಗುಡಿಯ ಸ್ವಾಮಿಯಿಂದ ತೆಗೆದ ಹೂವು ಎಂದಿಗೂ ಆಚೆಕಡೆ ತರುವುದಿಲ್ಲ. ಸ್ವಾಮಿಯವರ ಹಿಂದೆ ಜಲಪಾತ ಇರುತ್ತದೆ. ಅರ್ಚಕರು ಹಿಂದೆ ನೋಡದೆ ಹೂಗಳನ್ನು ಜಲಪಾತದಲ್ಲಿ ಎಸೆಯುತ್ತಾರೆ.

7) ಸ್ವಾಮಿಯವರ ಬೆನ್ನಿನ ಮೇಲಿನ ನೀರನ್ನು ಎಷ್ಟು ಸಾರಿ ಒರೆಸಿದರೂ ಆ ನೀರು ಹಾಗೆ ಇರುತ್ತದೆ. ಹಾಗೆ ಅಲ್ಲಿ ಕಿವಿ ಇಟ್ಟು ಕೇಳಿದರೆ ಸಮುದ್ರದ ಅಲೆಗಳ ಶಬ್ದ ಕೇಳಿಸುತ್ತದೆ.

8) ಸ್ವಾಮಿಯವರ ಎದೆಯ ಮೇಲೆ ಲಷ್ಕ್ಮಿದೇವಿ ಇರುತ್ತಾರೆ, ಪ್ರತೀ ಗುರುವಾರ ನಿಜರೂಪ ದರ್ಶನದ ವೇಳೆಯಲ್ಲಿ ಸ್ವಾಮಿಯವರಿಗೆ ಛಂಧನದಿಂದ ಅಲಂಕರಿಸುತ್ತರೆ. ಅದು ತೆಗೆದುಹಾಕುವಾಗ ಲಷ್ಕ್ಮಿದೇವಿಯ ಅಚ್ಚು ಹಾಗೆ ಬರುತ್ತದೆ. ಅದನ್ನು ಮಾರುತ್ತಾರೆ.

9) ಸತ್ತ ಮೇಲೆ ಹಿಂದೆ ನೋಡದೆ ಹೇಗೆ ಸುಡುತ್ತಾರೊ, ಹಾಗೆ ಸ್ವಾಮಿಯವರಿಂದ ತೆಗೆದುಹಾಕಿದ.ಹೂಗಳನ್ನು ಮತ್ತು ಎಲ್ಲಾ ಪದಾರ್ಥಗಳನ್ನು ಅದೇ ತರಹ ಹಿಂದೆ ತಿರುಗಿ ನೋಡದೆ ಸ್ವಾಮಿಯವರ ಹಿಂದೆ ಎಸೆಯುತ್ತಾರೆ, ಆ ದಿನವೆಲ್ಲಾ ಸ್ವಾಮಿಯವರ ಹಿಂದಗಡೆ ನೋಡುವುದಿಲ್ಲ ಎನ್ನುತ್ತಾರೆ. ಆ ಹೂಗಳು ಮತ್ತು ಪದಾರ್ಥಗಳು ಎಲ್ಲಾ ಕೂಡ ತಿರುಪತಿಯಿಂದ 20 ಕಿ.ಮೀ ದೂರದಲ್ಲಿರುವ ವೆರ್ಚೆಡು (ಕಾಲಹಸ್ತಿಗೆ ಹೋಗುವ ದಾರಿಯಲ್ಲಿ) ಹತ್ತಿರ ತೇಲುತ್ತದೆ.

10) ಸ್ವಾಮಿಯವರ ಮುಂದೆ ಬೆಳಗುವ ದೀಪಗಳು ಅವು ಎಷ್ಟು ವರ್ಷಗಳಿಂದ ಬೆಳಗುತ್ತಿವೆಯೋ ಕೂಡ ಯಾರಿಗೂ ಗೊತ್ತಿಲ್ಲ.

11) 1800 ರಲ್ಲಿ ದೇವಸ್ಥಾನವನ್ನು ಹನ್ನೆರಡು ವರ್ಷಗಳ ಕಾಲ ಮುಚ್ಚಲಾಗಿತ್ತಂತೆ. *ಯಾರೋ ಒಂದು ದಿನ 12 ಮಂದಿಯನ್ನು ದೇವಸ್ಥಾನದ ಹತ್ತಿರ ತಪ್ಪು ಮಾಡಿದರೆಂದು ಬುದ್ಧಿ ಹೇಳಿ ಹೊಡೆದು ಗೋಡೆಗೆ ನೇತಾಡಿಸಿದರಂತೆ ಆ ಸಮಯದಲ್ಲಿ ವಿಮಾನ ವೆಂಕಟೇಶ್ವರ ಸ್ವಾಮಿ ನೆಲೆಸಿದ್ದಾರೆಂದು ಹೇಳುತ್ತಾರೆ.

0Shares

Leave a Reply

error: Content is protected !!