ತರಕಾರಿ ಕೊಳ್ಳುವಾಗ ಗಮನಿಸಬೇಕಾದ ಅಂಶಗಳು ಮತ್ತು ಹಾಳಾಗದಂತೆ ಫ್ರಶ್ ಆಗಿ ಇಡುವ ಸುಲಭ ಉಪಾಯ

0Shares

ತರಕಾರಿ ಕೊಳ್ಳಲು ಮತ್ತು ಅದನ್ನು ಸಂಗ್ರಹಿಸಲು ಹೆಚ್ಚು ಮಹತ್ವ ಕೊಡಬೇಕು. ಇಲ್ಲಿ ಕೆಲವು ಅಂಶಗಳನ್ನು ತಿಳಿಸಿರುವೆ.
ತರಕಾರಿಗಳನ್ನು ಕೊಳ್ಳುವಾಗ ಯಾವಾಗಲೂ ಗಮನ ಹರಿಸಬೇಕು, ತುಂಬಾ ಬಲಿತಿರುವ ತರಕಾರಿಗಳನ್ನು ಕೊಂಡುಕೊಳ್ಳಬೇಡಿ, ಅದರಲ್ಲಿರಬೇಕಾದ ವಿಟಮಿನ್ಸ್,ಪ್ರೋಟಿನ್ಸ್ ಮತ್ತು ಇತರೆ ಸತ್ವಗಳು ಬಲಿತ ಕಾಯಿಯಲ್ಲಿ ಕಡಿಮೆ ಇರುತ್ತದೆ, ಕೆಲವೊಂದರಲ್ಲಿ ಇರುವುದೇ ಇಲ್ಲ. ಆದ್ದರಿಂದ ಅದನ್ನು ತಿಂದು ಪ್ರಯೋಜನವೂ ಆಗುವುದಿಲ್ಲ. ಬೇಯಿಸುವುದು ಕಷ್ಟ ಮತ್ತು ಬೇಯಲು ಬಹಳ ಸಮಯ ಕೂಡ ತೆಗೆದುಕೊಳ್ಳುತ್ತದೆ. ಆಗಾಗಿ ಎಳೆಯ ಮತ್ತು ಮಧ್ಯಮ ರೀತಿಯ ಹಾಗೂ ತಾಜಾ ಆಗಿರುವ ತರಕಾರಿಗಳನ್ನು ಮಾತ್ರ ತೆಗೆದುಕೊಂಡು ಉಪಯೋಗಿಸಿ, ಕೆಲವು ತರಕಾರಿಗಳು ಅಂಗಡಿಯಿಂದ ತಂದ ಎರಡು-ಮೂರು ದಿನಗಳ ಹಂತರದಲ್ಲಿ ಉಪಯೋಗಿಸಿ, ಕೆಲವು ಸುಮಾರು ದಿನ ತಾಜಾ ಆಗಿರುತ್ತದೆ, ಕೆಲವು ತಂದಾಗ ಎಷ್ಟೇ ಫ್ರೆಶ್ ಇದ್ದರೂ ಸಹ ಬೇಗ ಬಲಿಯುತ್ತವೆ ಮತ್ತು ಒಣಗಿದಂತಾಗುತ್ತದೆ. ಫ್ರಿಡ್ಜ್ ನಲ್ಲಿ ಇಟ್ಟರು ಸಹ ಕೆಲವೊಂದು ಬೇಗ ಹಾಳಾಗುತ್ತವೆ.

ತರಕಾರಿ ಟಿಪ್ಸ್

ತರಕಾರಿಗಳನ್ನು ಪೇಪರ್ ನಲ್ಲಿ ಸುತ್ತಿಟ್ಟು ಕವರ್ ನಲ್ಲಿ ಇಡಿ, ಕವರ್ ನಲ್ಲಿ ಇಟ್ಟಾಗ ನೀರಿನ ಅಂಶ ಹೀರಿಕೊಂಡು ಬಹಳ ದಿನ ತರಕಾರಿ ಇರುತ್ತದೆ, ಬೇಗ ಹಾಳಾಗುವುದಿಲ್ಲ. ಪ್ಲಾಸ್ಟಿಕ್ ಕವರ್ ಗಿಂತ, ಪೇಪರ್ ಕವರ್ ನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ತರಕಾರಿ ಚೆನ್ನಾಗಿರುತ್ತದೆ.

0Shares

Leave a Reply

error: Content is protected !!