ಕುಚ್ಚಲಕ್ಕಿ ಪುಂಡಿಗಟ್ಟಿ – ಕುಚ್ಚಲಕ್ಕಿ ಪುಂಡಿ (ಪುಡಿಗಟ್ಟಿ)

0Shares

ಕುಚ್ಚಲಕ್ಕಿ ಪುಂಡಿಗಟ್ಟಿ ಕಡಿಮೆ ಖರ್ಚಿನಲ್ಲಿ ಕುಚ್ಚಲಕ್ಕಿಯಲ್ಲಿ ಮಾಡಬಹುದಾದ ಒಂದು ರುಚಿಕರವಾದ ತಿಂಡಿ. ಈ ಕುಚ್ಚಲಕ್ಕಿ ಕರಾವಳಿ ಭಾಗದಲ್ಲಿ ಹೆಚ್ಚಾಗಿ ಬಳಸಲ್ಪಡುವ ಪೌಷ್ಠಿಕವಾದ ಆಹಾರವಾಗಿದೆ. ಕುಚ್ಚಲಕ್ಕಿಯು ಆರೋಗ್ಯದ ಹಿತದೃಷ್ಟಿಯಿಂದ ಬಿಳಿ ಅಕ್ಕಿಗಿಂತ ಅಧಿಕವಾದ ಪೌಷ್ಠಿಕವಾದ ಅಂಶಗಳನ್ನು ಒಳಗೊಂಡಿದೆ. ಈ ಕುಚ್ಚಲಕ್ಕಿಯು ಬೆಳೆಯುವ ಮಕ್ಕಳಿಗೆ ಜ್ಞಾಪಕ ಶಕಿಯನ್ನು ಹೆಚ್ಚಿಸುವಲ್ಲಿ ತುಂಬಾ ಉಪಕಾರಿಯಾಗಿದೆ. ಅಂತಹ ಪೌಷ್ಟಿಕ ಅಂಶಗಳನ್ನೊಳಗೊಂಡ ಕುಚ್ಚಲಕ್ಕಿಯಿಂದ ಮಾಡಬಹುದಾದ ಒಂದು ಅಡುಗೆ ಕುಚ್ಚಲಕ್ಕಿ ಪುಂಡಿ. ಕರಾವಳಿ ಪ್ರದೇಶದಲ್ಲಿನ ಜನರು ಹೆಚ್ಚಾಗಿ ಮಾಡುವ ತಿಂಡಿಗಳಲ್ಲಿ ಇದು ಕೂಡ ಒಂದು.

Wishes Post Style Ekadashi

ಬೇಕಾಗುವ ಸಾಮಗ್ರಿಗಳು:

  1. ಕುಚ್ಚಲಕ್ಕಿ – 1  12 ಕಪ್
  2. ತೆಂಗಿನಕಾಯಿ – 12 ಹೋಳು (1 ತೆಂಗಿನಕಾಯಿ 1⁄4 ಭಾಗ)
  3. ಉಪ್ಪು – 1  1⁄4 ಚಮಚ
  4. ಜೀರಿಗೆ – 12 ಚಮಚ

ಕುಚ್ಚಲಕ್ಕಿ ಪುಂಡಿಗಟ್ಟಿ ಮಾಡುವ ವಿಧಾನ:

  • ಹಿಂದಿನ ದಿನ ರಾತ್ರಿ ಕುಚ್ಚಲಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆ ಹಾಕಬೇಕು.
  • ಮರುದಿನ ಬೆಳಗ್ಗೆ ನೀರನ್ನು ಬಸಿದು ಅದಕ್ಕೆ ಕುದಿಯುವ ನೀರನ್ನು ಹಾಕಿ 1/2 ಅಥವಾ 3/4 ಗಂಟೆಗಳ ಕಾಲ ಮುಚ್ಚಿಡಬೇಕು.
  • ನಂತರ ನೀರನ್ನು ಹಾಕದೆ ಸಣ್ಣ ಸಣ್ಣ ಸರಿಯಾಗಿ ರುಬ್ಬಬೇಕು. (ಪುಡಿ ಮಾಡಬೇಕು)
  • ನಂತರ ತೆಂಗಿನಕಾಯಿಯನ್ನು ಪುಡಿ ಮಾಡಬೇಕು, ಪುಡಿ ಮಾಡಿದ ಅಕ್ಕಿ ಮತ್ತು ತೆಂಗಿನಕಾಯಿ ಹಾಗೂ ಉಪ್ಪು ಮತ್ತು ಜೀರಿಗೆ ಸೇರಿಸಿ ಮಿಶ್ರಣ ಮಾಡಿ ಮಧ್ಯಗಾತ್ರದ ಉಂಡೆಯನ್ನು ಮಾಡಿ ಹಬೆಯಲ್ಲಿ ಬೇಯಿಸಿ.
  • ಚಟ್ನಿ, ಸಾಂಬಾರ್ ಅಥವಾ ತೆಂಗಿನಎಣ್ಣೆ ಮತ್ತು ಮಿಡಿ ಉಪ್ಪಿನಕಾಯಿಯೊಂದಿಗೆ ಸವಿಯಿರಿ.

ಸಲಹೆಗಳು (ಟಿಪ್ಸ್):

  • ಖಾರಕ್ಕೆ 1 ರಿಂದ 2 ಹಸಿ ಮೆಣಸನ್ನು ತೆಂಗಿನಕಾಯಿಯೊಂದಿಗೆ ರುಬ್ಬುವಾಗ ಹಾಕಬಹುದು.
  • ಈರುಳ್ಳಿಯನ್ನು ಹಾಕಲಿಚ್ಛಿಸುವವರು ಈರುಳ್ಳಿಯನ್ನು ಸಣ್ಣವಾಗಿ ಹೆಚ್ಚಿ ರುಬ್ಬಿದ ಮಿಶ್ರಣಕ್ಕೆ ಬೆರೆಸಿ.

ಕೃಪೆ: ರಮ

0Shares

Leave a Reply

error: Content is protected !!