ಪಾರಿಜಾತವು ಪಂಚ ವೃಕ್ಷಗಳಲ್ಲಿ ಒಂದು, ಮಂದಾರ, ಸಂತಾನ, ಕಲ್ಪವೃಕ್ಷ, ಹರಿಚಂದನಗಳೇ ಉಳಿದ ನಾಲ್ಕು ಪಂಚ ವೃಕ್ಷಗಳು. ಪಾರಿಜಾತದ ಕೆಂಪು ತೊಟ್ಟಿನಿಂದ ಪೂರ್ವಜರು ಬಟ್ಟೆಗೆ ಹಾಕುವ ಕಾವಿ ಬಣ್ಣವನ್ನು ತಯಾರಿಸುತ್ತಿದ್ದರು. ಪಾರಿಜಾತವನ್ನು ತಿಳುವಳಿಕೆ ಮತ್ತು ಜ್ಞಾನದ ಸಂಕೇತವೆಂದು ಭಾವಿಸುತ್ತಿದ್ದರು. ನೆಲದ ಮೇಲೆ ಉದುರಿದ ಹೂವನ್ನು ದೇವರಿಗೆ ಸಮರ್ಪಿಸುವುದಿಲ್ಲ. ಆದರೆ ಪಾರಿಜಾತ ಮತ್ತು ಬಕುಳದ ಹೂವುಗಳಿಗೆ ಮಾತ್ರ ಇದರಿಂದ ವಿನಾಯಿತಿ ಉಂಟು. ನಮ್ಮ ದೇಶದ ಸುಗಂಧಿತ ಪುಷ್ಪಗಳಲ್ಲಿ ‘ಪಾರಿಜಾತವು’ ಒಂದು ವಿಶಿಷ್ಟ ಸ್ಥಾನವನ್ನು ಪಡೆದಿದೆ. ಕನ್ನಡದ ಆದಿಕವಿ ಪಂಪ, ತನ್ನ ಕಾವ್ಯಗಳಲ್ಲಿ ಪಾರಿಜಾತದ ಹೂವಿನ ವರ್ಣನೆಯನ್ನು ಬಹಳವಾಗಿ ಮಾಡಿದ್ದಾನೆ. ಪಾರಿಜಾತದ ಕಂಪು ಮೂಗಿಗೆ ಹಿತ. ಹೆಚ್ಚಿನ ತೀಕ್ಷ್ಣತೆಯಿಲ್ಲದ ಕೋಮಲವಾದ ಹೂವನ್ನು ಎಲ್ಲರೂ ಪ್ರೀತಿಸುತ್ತಾರೆ. ಪಾರಿಜಾತ, ‘ನೈಕ್ಟಾಂಟ್ಸ್ ಆರ್ಬರ್-ಟ್ರಿಸ್ಟಿಸ್’, ಎಂಬ ಸಸ್ಯಶಾಸ್ತ್ರೀಯವರ್ಗಕ್ಕೆ ಸೇರುತ್ತದೆ. ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ.
ಹೂಗಳಿಂದ ಸುಗಂಧ ದ್ರವ್ಯ ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳ ಬಣ್ಣ ಕಟ್ಟಲು ಉಪಯೋಗಕ್ಕೆ ಬರುತ್ತದೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ. ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮರದ ತೊಗಟೆಯಿಂದ ಟ್ಯಾನಿನ್ ಅನ್ನು ತಯಾರಿಸುತ್ತಾರೆ. ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು; ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ.
ಪಾರಿಜಾತದ ಪುರಾಣ ಕಥೆ:
ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರ ಬಗ್ಗೆ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವ ಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿ ಅರಳುವ ಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ.
ಔಷಧಿ ಗುಣಗಳು:
- ಜೀರ್ಣಾಂಗಗಳ ತೊಂದರೆಗೆ ಪಾರಿಜಾತ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ, ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ.
- ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ.
- ಮಂಡಿ ನೋವಿಗೆ ಜಾಸ್ತಿ ಖರ್ಚು ಮಾಡೋದು ಬೇಡ ಈ ಪಾರಿಜಾತ ಗಿಡ ಇದ್ರೆ ವಾಸಿ ಮಾಡ್ಕೋಬಹುದು.
- ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತಿಚಿಗೆ 30, 40 ವರ್ಷದವರಿಗೆ ಸಾಮಾನ್ಯವಾಗಿದೆ, ಅದಕ್ಕಾಗಿ ಸಾವಿರಾರು ರೂ. ಖರ್ಚು ಮಾಡವುದು ಬೇಡ, ಈ ಮನೆಮದ್ದನ್ನು ಬಳಸಿದರೆ ಕೀಲು ಹಾಗೂ ಮೂಳೆಗಳು ಕಬ್ಬಿಣದಷ್ಟು ಬಲಿಷ್ಠವಾಗುವುದಲ್ಲದೆ, ನೀವು ಕ್ಷೇಮವಾಗಿರುತ್ತೀರಿ.
ಪಾರಿಜಾತ ಎಲೆಗಳ ಕಷಾಯ:
ಇದರ ಎಲೆಗಳನ್ನು 6, 7 ರಷ್ಟು ಫೇಸ್ಟ್ ಮಾಡಿಕೊಳ್ಳಬೇಕು, ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು. ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಮಾಡಿಕೊಳ್ಳಬೇಕು ಆ ಕಷಾಯ ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗೆ ಹಾಗೆ ಬಿಸಿ ಮಾಡದೇ ಕುಡಿಯಬೇಕು. ಪಾರಿಜಾತ ಎಲೆಗಳ ಕಷಾಯ ಮೂಳೆಗಳ ಸವೆದು ಹೋಗಿರುವ ಕಾರ್ಟಿಲೆಜ್ ಎಂಬ ಅಂಶ ಮತ್ತೆ ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ. ಜೊತೆಗೆ ಈ ಔಷಧವು ಡೆಂಗ್ಯೋ ಜ್ವರಕ್ಕೂ ಸಹ ಉಪಯುಕ್ತವಾಗುತ್ತದೆ.