ಸದಾ ಎನ್ನ ಹೃದಯದಲ್ಲಿ – Sadaa Enna Hrudayadalli Lyrics

0Shares

Lyrics In Kannada:

ರಚನೆ: ಪುರಂದರದಾಸರು

ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿ ||ಪ||
ನಾದಮೂರ್ತಿ ನಿನ್ನ ಚರಣ ಮೋದದಿಂದ ಭಜಿಸುವೆನೋ ||ಅ.ಪ||

ಜ್ಞಾನವೆಂಬೋ ನವರತ್ನದ ಮಂಟಪದ ಮಧ್ಯದಲ್ಲಿ
ಗಾನಲೋಲನ ಕುಳ್ಳಿರಿಸಿ ಧ್ಯಾನದಿಂದ ಭಜಿಸುವೆನೋ ||೧||

ಭಕ್ತಿರಸವೆಂಬೋ ಮುತ್ತು ಮಾಣಿಕ್ಯದ ಹರಿವಾಣದಿ
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೇನೊ ||೨||

ನಿನ್ನ ನಾನು ಬಿಡುವನಲ್ಲಾ ಎನ್ನ ನೀನು ಬಿಡಲು ಸಲ್ಲಾ
ಘನ್ನಮಹಿಮ ವಿಜಯ ವಿಠಲ ನಿನ್ನ ಭಕ್ತರ ಕೇಳೋ ಸೊಲ್ಲ ||೩||


Lyrics In English:

Composer: Purandara Dasaru

Sadaa enna hr̥dayadalli vasa mado shrihari ||pa||
nadamoorthi ninna charana modadinda bhajisuveno ||a.Pa||

Jnanavembo navaratnada mantapada madhyadalli
ganalolana kullirisi dhyanadinda bhajisuveno ||1||

Bhaktirasavembo muttu manikyada harivanadi
muktanagabeku endu muttinarati ettuveno ||2||

Ninna nanu biduvanalla enna ninu bidalu salla
ghannamahima vijaya vithala ninna bhaktara kelo solla ||3||

0Shares
See also  ಗಜವದನ ಬೇಡುವೆ - Gajavadana Beduve Lyrics

Leave a Reply

error: Content is protected !!