Category Archives: ಜ್ಯೋತಿಷ್ಯ

ಜ್ಯೋತಿಷ್ಯ

ಹಿಂದೂ ಧರ್ಮದಲ್ಲಿ ಮಾಡುವ ಶಾಂತಿಯ ವಿಧಗಳು ಮತ್ತು ಮಹತ್ವ

ಪ್ರತ್ಯೇಕ ವ್ಯಕ್ತಿಗಾಗಿ ಮಾಡುವ ವೈದಿಕ ಪೂಜಾ ವಿಧಾನಕ್ಕೆ ಶಾಂತಿ ಎನ್ನುತ್ತಾರೆ. ಯಾವ ಕಾರಣಕ್ಕಾಗಿ ಯಾವ ಶಾಂತಿಯನ್ನು ಮಾಡಬೇಕು? ಮಗುವಿನ ಜನನ ಕಾಲದಲ್ಲಿ ನಾನಾ ವಿಧ ದೋಷಾದಿಗಳು ಬರುತ್ತವೆ. ಇದನ್ನು ಗುರುಗಳ ಮುಖೇನ ತಿಳಿದು ಬಂದಿರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಕೊಳ್ಳಬೇಕು.

  1. ಕೃಷ್ಣ ಚತುರ್ದಶಿ ಜನನ ಶಾಂತಿ: ಮಗು ಕೃಷ್ಣ ಪಕ್ಷದ ಚತುರ್ದಶಿಯ ದಿನ ಜನನವಾದಲ್ಲಿ ಅನೇಕವಾದ ಅನಿಷ್ಠ ಫಲಗಳು ಬರುತ್ತದೆ. ಚತುರ್ದಶಿ ತಿಥಿಯ ಕಾಲವನ್ನು ಆರು ಭಾಗ ಮಾಡಿ; ಒಂದನೇಯ ಭಾಗವನ್ನು ಶುಭ ಎಂತಲೂ, ಎರಡನೇಯ ಭಾಗವನ್ನು ತಂದೆಗೆ ಅನಿಷ್ಠ ಎಂತಲೂ, ಮೂರನೇಯ ಭಾಗವನ್ನು ತಾಯಿಗೆ ಅನಿಷ್ಠ ಎಂತಲೂ, ನಾಲ್ಕನೇಯ ಭಾಗವನ್ನು ಮಾವನಿಗೆ ಅನಿಷ್ಠ ಎಂದೂ, ಐದನೇಯ ಭಾಗವನ್ನು ವಂಶನಾಶ ಎಂತಲೂ, ಆರನೇಯ ಭಾಗವನ್ನು ಧನಹಾನಿ ಎಂದೂ ಶಾಸ್ತ್ರದಲ್ಲಿ ಹೇಳಿದೆ.
  2. ಸಿನೀವಾಲೀ-ಕುಹೂ ಜನನ ಶಾಂತಿ: ಮಗುವು ಅಮಾವಾಸ್ಯೆಯ ದಿನದಂದು ಜನಿಸಿದಲ್ಲಿ, ಅಮಾವಾಸ್ಯೆಯ ಪರಮ ಘಟಿಯನ್ನು 8 ಭಾಗವನ್ನು ಮಾಡಿ ಪ್ರಥಮ ಭಾಗ ಜನನಕ್ಕೆ ಸಿನೀವಾಲೀ, ಅಷ್ಟಮ ಭಾಗಕ್ಕೆ ಕುಹೂ ಜನನ ಎಂದೂ ಕರೆಯುತ್ತಾರೆ. ಈ ಜನನದಲ್ಲಿ ಬರುವ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು.
  3. ದರ್ಶ ಜನನ ಶಾಂತಿ: ಅಮಾವಾಸ್ಯೆ ತಿಥಿಯ ಪರಮ ಘಟಿಯನ್ನು ಭಾಗವನ್ನಾಗಿ ಮಾಡಿದಾಗ 2ನೇಯ ಭಾಗದಿಂದ 6ನೇ ಭಾಗದವರೆಗೆ ಹುಟ್ಟಿದ ಮಗುವಿಗೆ ಬರುವ ದೋಷ ನಿವಾರಣೆಗೆ ದರ್ಶ ಜನನ ಶಾಂತಿ ಅಥವಾ ಅಮಾವಾಸ್ಯೆ ಜನನ ಶಾಂತಿ ಮಾಡಿಸಿಕೊಳ್ಳಬೇಕು.
  4. ಸೂರ್ಯ ಸಂಕ್ರಾಂತಿ ಜನನ ಶಾಂತಿ ಮತ್ತು ವ್ಯತಿಪಾತ, ವೈದ್ರತಿ, ಅತೀಗಂಡ, ಗಂಡಯೋಗ ಜನನ ಶಾಂತಿ.
  5. ಆಶ್ಲೇಷಾ ಜನನ ಶಾಂತಿ: ಮಗುವು ಆಶ್ಲೇಷಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ಮೊದಲನೇ ಪಾದ ಜನನಕ್ಕೆ ಶುಭ ಫಲ, ದ್ವಿತೀಯ ಪಾದ ಜನನಕ್ಕೆ ಧನನಾಶ, ತೃತೀಯ ಪಾದ ಜನನಕ್ಕೆ ತಾಯಿಗೆ ಅನಿಷ್ಠ.
  6. ಜ್ಯೇಷ್ಠ ನಕ್ಷತ್ರ ಜನನ ಶಾಂತಿ: ಮಗುವು ಜ್ಯೇಷ್ಠ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ ದೋಷಾದಿಗಳ ನಿವಾರಣೆಗೆ ಶಾಂತಿಗಳನ್ನು ಮಾಡಿಸಿಕೊಳ್ಳಬೇಕು. ವಿಶೇಷತಃ 4ನೇ ಪಾದದಲ್ಲಿ ಜನಿಸಿದರೆ ತಂದೆ- ತಾಯಿಗೆ ಅನಿಷ್ಠ.
  7. ಮೂಲಾ ನಕ್ಷತ್ರ ಜನನ ಶಾಂತಿ: ಮಗುವು ಮೂಲಾ ನಕ್ಷತ್ರ ಇರುವ ಸಮಯದಲ್ಲಿ ಜನಿಸಿದರೆ 1ನೇ ಪಾದಕ್ಕೆ ಅತೀ ಅನಿಷ್ಠ. 2ನೇ ಪಾದಕ್ಕೆ ತಾಯಿಗೆ ಅನಿಷ್ಠ. 3ನೇ ಪಾದಕ್ಕೆ ಧನನಾಶ. 4ನೇ ಪಾದಕ್ಕೆ ಕುಲನಾಶ. ಹೆಣ್ಣು ಮಗು ಈ ನಕ್ಷತ್ರದಲ್ಲಿ ಜನಿಸಿದರೆ ಗಂಡನ ತಂದೆಗೆ ಅತೀ ಅನಿಷ್ಠ.
  8. ಗ್ರಹಣ ಜನನ ಶಾಂತಿ: ಮಗುವು ಸೂರ್ಯ ಅಥವಾ ಚಂದ್ರ ಗ್ರಹಣ ಕಾಲದಲ್ಲಿ ಜನಿಸಿದರೆ ದೋಷ ನಿವಾರಣೆಗೆ ಶಾಂತ್ಯಾದಿಗಳನ್ನು ಮಾಡಿಸಿಕೊಳ್ಳಬೇಕು.
  9. ಏಕ ನಕ್ಷತ್ರ ಜನನ ಶಾಂತಿ: ತಾಯಿ, ತಂದೆ, ಅಣ್ಣ-ತಮ್ಮ ಎಲ್ಲರ ನಕ್ಷತ್ರ ಒಂದೇ ಆದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  10. ವಿಷ ಘಟಿ ಜನನ ಶಾಂತಿ: ಮಗುವು ವಿಷ ನಾಡಿಯಲ್ಲಿ ಜನಿಸಿದರೆ ಸರ್ವರಿಷ್ಠ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  11. ತ್ರಿಕ ಪ್ರಸವ ಶಾಂತಿ: ತಾಯಿಗೆ ಏಕ ಕಾಲದಲ್ಲಿ ಮೂರು ಮಗುವಿನ ಜನನವಾದರೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  12. ಭದ್ರಾ ಜನನ ಶಾಂತಿ: ಭದ್ರಾ ಯೋಗದಲ್ಲಿ ಜನಿಸಿದ ಮಗುವಿಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  13. ಅಧೋಮುಖ ಜನನ ಶಾಂತಿ: ಮಗು ಜನಿಸಿವಾಗ ಕೆಳಮುಖವಾಗಿ ಜನಿಸಿದರೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  14. ಸದಂತ ಜನನ ಶಾಂತಿ: ಮಗು ಹುಟ್ಟಿದಾಗಲೇ ಹಲ್ಲು ಇದ್ದರೆ ಬರುವ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  15. ಯಮಳ ಜನನ ಶಾಂತಿ: ಏಕ ಕಾಲದಲ್ಲಿ ಎರಡು ಮಗುವಿನ ಜನನವಾದಲ್ಲಿ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  16. ಪ್ರಸವ ವೈಕ್ರತಿ ಜನನ ಶಾಂತಿ: ಮಗು ಜನಿಸುವಾಗ ಅಂಗ ವಿಕಲವಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  17. ದಿನ ಕ್ಷಯ, ವ್ಯತಿಪಾತ ಯೋಗಾದಿ ಜನನ ಶಾಂತಿ.
  18. ಬಾಲಾರಿಷ್ಠ ಜನನ ಶಾಂತಿ: ಮಗು ಜನಿಸಿದಾಗ ಜನ್ಮದಲ್ಲಿ ರವಿ, ಕುಜ, ಶನಿ, ರಾಹು, ಕೇತುಗಳು ವಿಷಮ ಸ್ಥಿತವಾದಲ್ಲಿ ವಿಪರೀತ ಕಷ್ಟಗಳನ್ನು ಕೊಡುತ್ತದೆ. ಈ ಕಷ್ಟಗಳ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಈ ಶಾಂತಿಯನ್ನು ಮಗುವಿನ ಜನ್ಮದ ನಂತರದ 12ನೆ ದಿನದ ಮೇಲೆ ಮಗು ಚಿಕ್ಕದಿದ್ದಾಗಲೆ ಮಾಡಿಸಿಕೊಳ್ಳುವುದು ಒಳ್ಳೆಯದು.
  19. ಬಾಲಗ್ರಹ ಶಾಂತಿ: ಮಗುವು ಪೂರ್ವ ಜನ್ಮಂತರದಲ್ಲಿ ಮಾಡಿದ ದೇವರ, ವೇದಗಳ, ಶಾಸ್ತ್ರಗಳ ಮತ್ತು ಗುರು ಹಿರಿಯರ ನಿಂದನಾದಿ ಸರ್ವ ಪಾತಕಗಳಿಂದ ಬರುವ ಪೀಡಾ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  20. ಬಾಲ ಮಾರ್ಕಾಂಡೇಯ ಶಾಂತಿ: ಮಗುವಿಗೆ ಮಹತ್ ಬಾಲಾರಿಷ್ಟ ವಶದಿಂದ ಆಯುಷ್ಯಕ್ಕೆ ಕಂಟಕ ಸೂಚಿಸಿದಲ್ಲಿ ಅನಿಷ್ಟ ಪರಿಹಾರಕ್ಕಾಗಿ ಈ ಶಾಂತಿಯನ್ನು ಮಾಡಿಸಬೇಕು.
  21. ರೋಹಿಣಿ ನಕ್ಷತ್ರ ಜನನ ಶಾಂತಿ: ಮಗುವು ರೋಹಿಣಿ ನಕ್ಷತ್ರದಲ್ಲಿ ಜನಿಸಿದರೆ ಮಾವನಿಗೆ ಅರಿಷ್ಟ ಸೂಚನೆ ಆಗುವುದರಿಂದ ಈ ಶಾಂತಿಯನ್ನು ಮಾಡಿಸಬೇಕು.
  22. ಕುಜ-ರಾಹು ಸಂಧಿ ಶಾಂತಿ: ನವಗ್ರಹದಲ್ಲಿ ಒಂದೊಂದು ಗ್ರಹಕ್ಕೆ ಇಷ್ಟು ವರ್ಷಗಳು ಮನುಷ್ಯನ ಜೀವನದಲ್ಲಿ ಅಧಿಪತ್ಯ (ಅಧಿಕಾರ) ಎಂದಿರುತ್ತದೆ. ಆದರೆ ಪರಸ್ಪರ ಶತ್ರು ಗ್ರಹಗಳ ಅಧಿಕಾರ ಅವಧಿ ಮುಗಿದು ಇನ್ನೊಂದು ಶತ್ರು ಗ್ರಹದ ಅಧಿಕಾರ ಆರಂಭ ಕಾಲದಲ್ಲಿ 6 ತಿಂಗಳು ಮುಂಚಿತವಾಗಿ ಸಂಧಿ ಶಾಂತಿ ಮಾಡಿಸುತ್ತಾರೆ. ಇಲ್ಲಿ ಕುಜ ದಶಾ 7 ವರ್ಷಗಳು ಮುಗಿದು ರಾಹು ದಶಾ 18 ವರ್ಷಗಳು ಆರಂಭವಾಗುವ ಸಮಯಕ್ಕೆ ಈ ಶಾಂತಿಯನ್ನು ಮಾಡಿಸಬೇಕು. ಈ ಸಂಧಿ ಕಾಲದ ವಿಶೇಷವಾಗಿ ಗಂಡಸರಿಗಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ. ಆಯುಷ್ಯದಲ್ಲಿ ಒಂದು ಕಂಟಕ ಎನ್ನಬಹುದು.
  23. ರಾಹು- ಬೃಹಸ್ಪತಿ ಸಂಧಿ ಶಾಂತಿ: ರಾಹುವಿನ ಅಧಿಕಾರ ಅವಧಿ 18 ವರ್ಷಗಳು ಕಳೆದು ಗುರುವಿನ 16 ವರ್ಷದ ಅಧಿಕಾರದ ಅವಧಿ ಆರಂಭವಾಗುವ 6 ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿಕೊಳ್ಳಬೇಕು. ಈ ಸಂಧಿಕಾಲವು ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಹಾನಿಕಾರಕ ಆಗಿರುತ್ತದೆ.
  24. ಶುಕ್ರಾದಿತ್ಯ ಸಂಧಿ ಶಾಂತಿ: ಶುಕ್ರ ಅಧಿಕಾರ ಅವಧಿ 20 ವರ್ಷಗಳು ಕಳೆದು ಸೂರ್ಯನ 6 ವರ್ಷದ ಅಧಿಕಾರದ ಅವಧಿ ಆರಂಭವಾಗುವ 6 ತಿಂಗಳು ಮೊದಲು ಈ ಶಾಂತಿಯನ್ನು ಅಗತ್ಯವಾಗಿ ಮಾಡಿಸಿಕೊಳ್ಳಬೇಕು. ಈ ಸಂಧಿಕಾಲವು ಪುರುಷ ಮತ್ತು ಮಹಿಳೆ ಇಬ್ಬರಿಗೂ ಹಾನಿಕಾರಕ ಆಗಿರುತ್ತದೆ.
  25. ಷಷ್ಟ್ಯಬ್ಧ ಅಥವಾ ಉಗ್ರರಥ ಶಾಂತಿ: ಮನುಷ್ಯನು ತನ್ನ ಜೀವನದ ಕಷ್ಟ-ಸುಖಗಳನ್ನು ಅನುಭವಿಸುತ್ತ ಸಕಾಲದಲ್ಲಿ ವಿವಾಹವಾಗಿ ಪತ್ನಿಯನ್ನು ಒಡಗೂಡಿ ಮಕ್ಕಳ ಆಗು ಹೋಗುಗಳನ್ನು ಪೂರೈಸುತ್ತ ತನ್ನ ಜೀವನದ 60ನೇ ಸಂವತ್ಸರವನ್ನು ಪ್ರವೇಶಿಸಿದಾಗ ಜನ್ಮ, ನಕ್ಷತ್ರದಲ್ಲಿ ಈ ಶಾಂತಿಯನ್ನು ಮಾಡ ಬೇಕು.
    ಇದನ್ನು ಏಕೆ ಮಾಡ ಬೇಕು?
    ಇದನ್ನು ಮುಂದಿನ ಜೀವನದಲ್ಲಿ ಬರುವಂತಹ ಅಪಮೃತ್ಯು, ದುಃಸ್ವಪ್ನ ದರ್ಶನ, ಗೃಹಪೀಡೆ, ವಿವಿಧ ರೋಗಬಾಧೆ, ಛಾಯಾ ವಿಕೃತಿ. ಭೂತ-ಪ್ರೇತಾದಿ ಪೀಡಾ ರೂಪಕವಾದಂತಹ ನಾನಾ ವಿಧ ಅರಿಷ್ಟ ನಿವಾರಣೆಗಾಗಿ ಮಾಡುವಂತಹ ಶಾಂತಿಯನ್ನು ಉಗ್ರರಥ ಶಾಂತಿ ಎನ್ನುತ್ತೇವೆ. ಈ ವಿಧಿಯಲ್ಲಿ ಗಣಪತಿ, ನವಗ್ರಹ ದೇವತೆಗಳನ್ನು, ಪೀಡಾ ಪರಿಹಾರಕನಾದ ಮೃತುಂಜಯನನ್ನು ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು, ಮೃತ್ಯುವನ್ನೇ ಜಯಿಸಿದ ಮಾರ್ಕೆಂಡೆಯನನ್ನು, ಆಯುರ್ದೇವತೆ ನಕ್ಷತ್ರ ದೇವತೆಗಳನ್ನು ಆರಾಧಿಸಬೇಕು. ಜಪ, ಹೋಮ, ತರ್ಪಣ, ಮಾರ್ಜನ, ಬ್ರಾಹ್ಮಣ ಭೋಜನವನ್ನಾಚರಿಸಿ ಗುರು-ಹಿರಿಯರ ಆಶೀರ್ವಾದವನ್ನು ಪಡೆಯಬೇಕು. ಈ ವಿಧಿಯಲ್ಲಿ ಉಗ್ರನೆಂಬ ಹೆಸರಿನ ಮೃತ್ಯುಂಜಯನು ಪ್ರಧಾನ ದೇವತೆಯಾದ್ದರಿಂದ ಉಗ್ರರಥ ಶಾಂತಿ ಎಂಬ ಹೆಸರು ಬಂತು. ಈ ವಿಧಿಯ ಅಂತ್ಯದಲ್ಲಿ ಕಲಶ ತೀರ್ಥಸ್ನಾನ ಮತ್ತು ಮಂಗಳ ದ್ರವ್ಯ ದರ್ಶನ ಅಲ್ಲದೇ ಪುನಃ ಮಂಗಳಸೂತ್ರ ಕಟ್ಟುವುದು ಮುಖ್ಯವಾಗಿರುತ್ತದೆ.
  26. ಗ್ರಹ ಶಾಂತಿ: ಮನೆಯಲ್ಲಿ ಸಾಲದ ಬಾಧೆ, ಅಶಾಂತಿ, ಕೆಟ್ಟ ಕನಸು ಮತ್ತು ರೋಗ-ರುಜಿನಗಳಿಂದ ತೊಂದರೆ ಅನುಭವಿಸುತ್ತಿದ್ದಲ್ಲಿ ಗ್ರಹ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  27. ವಾಸ್ತು ಶಾಂತಿ: ಹೊಸದಾಗಿ ತೆಗೆದು ಕೊಂಡ ಮನೆ ಅಥವಾ ವಸತಿ ಸಮುಚ್ಛಯ ನಿರ್ಮಿಸುವಾಗ ಸ್ಥಳದಲ್ಲಿ ಇರುವಂತಹ ನೂನ್ಯತೆಯನ್ನು ಹೊಗಲಾಡಿಸಿ ಸುಖ ಶಾಂತಿ, ಸಮೃದ್ಧಿಯಿಂದ ನೆಲೆಸುವುದಕ್ಕಾಗಿ ವಾಸ್ತು ಶಾಂತಿಯನ್ನು ಮಾಡುವುದು ಅಗತ್ಯ.
  28. ರಾಕ್ಷೋಘ್ನ ಶಾಂತಿ: ಹೊಸ ಮನೆಯನ್ನು ನಿರ್ಮಿಸುವಾಗ ಸ್ಥಳದಲ್ಲಿ ಉಪಯೋಗಿಸಿರುವ ಮರದ ಸಲಕರಣೆಗಳಲ್ಲಿ ಇರುವ ಭೂತ, ಪ್ರೇತ, ಪಿಶಾಚಿ ಬಾಧೆ ನಿವಾರಣೆಗಾಗಿ ವಾಸ್ತು ಹೋಮದ ಪೂರ್ವದಲ್ಲಿ ಈ ಹೋಮವನ್ನು ರಾತ್ರಿಯಲ್ಲಿ ಮಾಡಬೇಕು.
  29. ಗೇಹಾಭಿವೃದ್ಧಿ ಶಾಂತಿ: ದೇವಸ್ಥಾನದಲ್ಲಿ ಸ್ಥಾಪಿಸಿರುವ ವಿಗ್ರಹಕ್ಕೆ ದೇವರ ಸಾನಿಧ್ಯ ಪ್ರಾಪ್ತಿಗಾಗಿ, ದೇವಾಲಯದ ಅಭಿವೃದ್ಧಿಗಾಗಿ ಈ ಶಾಂತಿಯನ್ನು ಮಾಡಬೇಕು.
  30. ಸರ್ವಾದ್ಭುತ ಶಾಂತಿ: ಮನೆಯಲ್ಲಿ ಅಮಂಗಲವಾದ ಘಟನೆಗಳು ನಡೆದಾಗ; ಉದಾಹರಣೆಗೆ ಮನೆಗೆ ಬೆಂಕಿ ತಗಲುವುದು, ಮನೆಗೆ ಕಾಗೆ ಪ್ರವೇಶಿಸುವುದು, ಮನೆಯಲ್ಲಿ ಜೇನುಗೂಡು ಕಟ್ಟುವುದು ಮನೆಯ ಒಂದು ಭಾಗ ಕುಸಿಯುವುದು ಇಂತಹ ಅನಿಷ್ಠಗಳಿದ್ದಲ್ಲಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  31. ಗ್ರಾಮೊತ್ಪಾತ ಶಾಂತಿ: ಗ್ರಾಮದಲ್ಲಿ ಉತ್ಪನ್ನವಾಗಿರುವ ನಾನಾವಿಧ ಭಾದೆ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  32. ರಕ್ತ ವಲ್ಮೀಕ ಶಾಂತಿ: ದೇವಾಲಯದಲ್ಲಿ, ಮನೆಯಲ್ಲಿ ಅಥವಾ ಸಭಾಸ್ಥಾನದಲ್ಲಿ ಉತ್ಪತ್ತಿಯಾಗಿರುವ ಹುತ್ತವು ಅಶುಭ ಸೂಚಕ ಆಗಿರುವುದರಿಂದ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  33. ವಾನರ ಪ್ರವೇಶ ಶಾಂತಿ: ಮನೆಯೊಳಗೆ ವಾನರ ಪ್ರವೇಶವಾದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
  34. ಮರ್ಕಟ ಪ್ರವೇಶ ಶಾಂತಿ: ಮನೆಯೊಳಗೆ ಕೃಷ್ಣಮುಖ ವಾನರ ಪ್ರವೇಶ ಆದಲ್ಲಿ ಬರುವ ಅಪಮೃತ್ಯು, ಮಹಾರೋಗಾದಿ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
  35. ಮಹಿಷಿ ಪ್ರವೇಶ ಶಾಂತಿ: ಮನೆಯೊಳಗೆ ಎಮ್ಮೆ ಅಥವಾ ಕೋಣ ಪ್ರವೇಶಿಸಿದರೆ ಸೂಚಿತ ಅಪಮೃತ್ಯು ಹಾಗೂ ಸರ್ವ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
  36. ದೀಪ ಪತನ ಶಾಂತಿ: ಮನೆಯಲ್ಲಿ ಪೂಜೆ ಮಾಡುತ್ತಿರುವಾಗ ಉರಿಯುತ್ತಿರುವ ದೀಪ ಆರಿ ಹೋದಲ್ಲಿ ಅಮಂಗಲ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
  37. ಭೀತಿಹರ ದಕ್ಷಾಕರ ದುರ್ಗಾ ಶಾಂತಿ: ಗ್ರಹ ಪೀಡೆಗಳಿಂದ ಪುನಃ ಪುನಃ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  38. ಅನಾವೃಷ್ಟಾದಿ ಶಾಂತಿ: ಇದನ್ನು ಸಾಮೂಹಿಕವಾಗಿ ಉತ್ಪತ್ತಿಯಾಗಿರುವ ಮಹಾಮಾರಿ, ಪಶುರೋಗಾದಿ ನಿವಾರಣೆಗೆ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  39. ಕೃತ್ಯಾದ್ರೋಹ ಶಾಂತಿ: ವಿರೋಧಿಗಳ ಯಾವುದೇ ಕುಟುಂಬ, ಉದ್ಯಮ, ಕೋಷ್ಠಗಳ ಮೇಲೆ ಮಾಡಿದ ಕೃತ್ರಿಮ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಬೇಕು.
  40. ದುಃಸ್ವಪ್ನ ಶಾಂತಿ: ಕೆಲವೊಂದು ಸ್ವಪ್ನಗಳು ಅಮಂಗಲತೆಯ ಮುನ್ಸೂಚನೆ ಆಗಿರುವುದರಿಂದ ಈ ದೋಷ ನಿವಾರಣೆಗಾಗಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  41. ಪರ್ಜನ್ಯ ಶಾಂತಿ: ದೇಶದ ಅಥವಾ ಯಾವುದೇ ಪ್ರಾಂತದಲ್ಲಿ ಸಕಾಲದಲ್ಲಿ ಮಳೆ ಆಗದಿದ್ದಲ್ಲಿ ಜೀವಿಗಳಿಗೆ ಅತಿ ಆತಂಕ ಆಗುವುದು. ಆ ಪರಿಸ್ಥಿತಿ ನಿವಾರಣೆಗೆ ಪ್ರಕೃತಿ ದೇವಿಯನ್ನು ಶಾಂತಿಗೊಳಿಸಿ ಮಳೆ ಪಡೆಯುವುದಕ್ಕೆ ಈ ಶಾಂತಿ ಹೆಸರಿದೆ.
  42. ಸರ್ವ ವ್ಯಾಧಿಹರ ನಾಮತ್ರಯೀ ಶಾಂತಿ: ಜನ್ಮ ಜನ್ಮಾಂತರಗಳಿಂದ ಸಂಚಿತ ಪ್ರಾರಾಬ್ಧ ರೂಪ, ಪಾಪ, ನಿವೃತ್ತಿ ಮತ್ತು ವ್ಯಾಧಿ ಬಾಧೆ ನಿವಾರಣೆಗಾಗಿ ಮತ್ತು ಆಯುಃ ಆರೋಗ್ಯ ಪ್ರಾಪ್ತಿಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  43. ನಾಳವೇಷ್ಟನ ಶಾಂತಿ: ಮಗುವಿನ ಜನನ ಸಮಯದಲ್ಲಿ ತಾಯಿಯಿಂದ ಮಗುವಿಗೆ ಆಹಾರಾದಿಗಳನ್ನು ಕೊಡುವ ನಾಳವು ಕಂಠ, ಕೈ, ಕಾಲುಗಳಿಗೆ ಸುತ್ತಿಕೊಂಡು ಜನಿಸಿದರೆ ತಂದೆ, ತಾಯಿಗೆ ಅನಿಷ್ಟ, ಸಂಪತ್ತು ನಾಶ, ಸರ್ವ ನಾಶ ಎಂದಿರುತ್ತದೆ. ಆದ್ದರಿಂದ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡಬೇಕು.
  44. ವಿಶಾಖಾ ನಕ್ಷತ್ರ ಜನನ ಶಾಂತಿ: ವಿಶೇಷವಾಗಿ ಮಗುವು ವಿಶಾಖಾ ನಕ್ಷತ್ರದ 4ನೇ ಚರಣದಲ್ಲಿ ಜನಿಸಿದರೆ ತಂದೆ, ತಾಯಿ, ಬಂಧುಗಳಿಗೆ ವಿವಾಹದ ನಂತರ ವರನ ಸಹೋದರರಿಗೂ ಅನಿಷ್ಟ ಆದ್ದರಿಂದ ಶಾಂತಿಯ ಅಗತ್ಯವಿದೆ. 1, 2, 3 ಚರಣಗಳಿಗೆ ಅಗತ್ಯವಿಲ್ಲ.
  45. ಯೋನಿ ವೈಕೃತಿ ಶಾಂತಿ: ಒಂದು ಹೆಣ್ಣು ಮಗಳು ಮೊದಲನೇ ಬಾರಿಗೆ ರಜೋ ದರ್ಶನವಾಗಿ (ಮಾಸಿಕ ರಜೆ) ನಂತರ 6 ತಿಂಗಳವರೆಗೆ ರಜೋ ದರ್ಶನ ಆಗದಿದ್ದಲ್ಲಿ ಮುಂದೆ ಮದುವೆಯಾದ ಮೇಲೆ ಬರುವಂತಹ ದೋಷ ನಿವಾರಣೆಗಾಗಿ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  46. ಪ್ರಪೌತ್ರ ದರ್ಶನ ಶಾಂತಿ: ಒಂದು ವೇಳೆ ನಮ್ಮ ಮಗನಿಗೆ ಮಗನು ಜನಿಸಿ, ಅವನಿಗೆ ಮಗನು ಜನಿಸಿದಾಗ ನಾವು ಪ್ರಪೌತ್ರವನ್ನು ಪಡೆದಂತೆ. ಈ ಪ್ರಪೌತ್ರ ದರ್ಶನವು ಮುತ್ತಜ್ಜನಿಗೆ ಒಳ್ಳೆಯದಲ್ಲ. ಆದ್ದರಿಂದ ಈ ಶಾಂತಿಯನ್ನು ಮಾಡಿಸಿಕೊಳ್ಳಬೇಕು.
  47. ಕುಂಭ ವಿವಾಹ ಶಾಂತಿ: ಒಂದು ವೇಳೆ ಯುವತಿಯ ಕುಂಡಲಿಯಲ್ಲಿ ವೈಧವ್ಯ ಯೋಗವಿದ್ದಾಗ ಅಥವಾ ಎರಡು ಇಲ್ಲವೇ ಮೂರು ವಿವಾಹ ಯೋಗವಿದ್ದಲ್ಲಿ ದೋಷ ನಿವಾರಣೆಗೆ ಈ ಶಾಂತಿಯನ್ನು ಮಾಡಿಸುವುದು ಉತ್ತಮ.
  48. ಕದಳಿ ವಿವಾಹ ಶಾಂತಿ: ಈ ವಿಧಿಯನ್ನು ಸಹ ಮೇಲೆ ಕಾಣಿಸಿದ ದೋಷ ನಿವಾರಣೆಗೆ ಮಾಡಿಸಲಾಗುತ್ತದೆ.
  49. ಅರ್ಕ ವಿವಾಹ ಶಾಂತಿ: ಒಂದು ವೇಳೆ ಯುವಕನ ಜಾತಕದಲ್ಲಿ ಮೊದಲನೇಯ ವಿವಾಹವಾಗಿ ಆತನ ಪತ್ನಿಯು ಪತಿಯನ್ನು ತ್ಯಜಿಸಿದಾಗ ಇಲ್ಲವೇ ಮರಣ ಹೊಂದಿದಾಗ ಅದೇ ರೀತಿ ಎರಡನೇಯ ವಿವಾಹವು ಇದೇ ರೀತಿಯಾದಲ್ಲಿ ಮೂರನೇಯ ವಿವಾಹವಾಗುವ ಮುನ್ನ ಈ ಶಾಂತಿಯನ್ನು ಮಾಡಿಸಿಕೊಂಡು ವಿವಾಹವಾಗಬೇಕು.

ಹೀಗೆ ಅನೇಕ ವಿಧವಾದ ಶಾಂತಿ, ಹೋಮ,ಯಜ್ಞಾದಿಗಳು ಇರುತ್ತಿದ್ದು ಅವುಗಳನ್ನು ಮಾಡಿಸಲು ಜ್ಯೋತಿಷಿಗಳ ಅಥವಾ ಪುರೋಹಿತರ ಸಲಹೆ ಅಗತ್ಯ.

27 ನಕ್ಷತ್ರಗಳು ಮತ್ತು ಅದರ ಗಾಯತ್ರೀ ಮಂತ್ರಗಳು

27 ನಕ್ಷತ್ರಗಳು ಮತ್ತು ಅದರ ಗಾಯತ್ರೀ ಮಂತ್ರಗಳು ಜಾತಕದಲ್ಲಿ ನಿಮ್ಮ ನಕ್ಷತ್ರ ಯಾವುದೆಂದು ತಿಳಿದು ಅದರ ಗಾಯತ್ರಿ ಮಂತ್ರವನ್ನು ತ್ರಿಕರಣ ಪೂರ್ವಕವಾಗಿ ಶುದ್ಧರಾಗಿ ಪೂರ್ವಾಭಿಮುಖವಾಗಿ ಸೂರ್ಯನ ನೋಡುತ್ತಾ ೯ ರಿಂದ ೧೦೮ ಮಂತ್ರ ಜಪಿಸುವುದರಿಂದ ವಿಶೇಷ ನಕ್ಷತ್ರ ಸಂಬಂಧವಾದ ಶಕ್ತಿ ದೊರೆಯುತ್ತದೆ.

1.ಅಶ್ವಿನಿ:

ಓಂ ಶ್ವೇತವರ್ಣೈ ವಿದ್ಮಹೇl
ಸುಧಾಕರಾಯೈ ಧೀಮಹಿl
ತನ್ನೋ ಅಶ್ವಿನೇನ ಪ್ರಚೋದಯಾತ್ ll

2. ಭರಣಿ:

ಓಂ ಕೃಷ್ಣವರ್ಣೈ ವಿದ್ಮಹೇl
ದಂಡಧರಾಯೈ ಧೀಮಹಿl
ತನ್ನೋ ಭರಣೀ ಪ್ರಚೋದಯಾತ್ll

3. ಕೃತ್ತಿಕಾ:

ಓಂ ವಣ್ಣಿದೇಹಾಯೈ ವಿದ್ಮಹೇl
ಮಹಾತಪಾಯೈ ಧೀಮಹಿl
ತನ್ನೋ ಕೃತ್ತಿಕಾ ಪ್ರಚೋದಯಾತ್ll

4.ರೋಹಿಣಿ:

ಓಂ ಪ್ರಜಾವಿರುದ್ಧೈ ಚ ವಿದ್ಮಹೇl
ವಿಶ್ವರೂಪಾಯೈ ಧೀಮಹಿl
ತನ್ನೋ ರೋಹಿಣೀ ಪ್ರಚೋದಯಾತ್ll

5. ಮಗಶಿರಾ:

ಓಂ ಶಶಿಶೇಖರಾಯ ವಿದ್ಮಹೇl
ಮಹಾರಾಜಾಯ ಧೀಮಹಿl
ತನ್ನೋ ಮಗಶೀರ್ಷಾಃ ಪ್ರಚೋದಯಾತ್ll

6. ಆರ್ದ್ರಾ:

ಓಂ ಮಹಾಶ್ರೇಷ್ಠಾಯ ವಿದ್ಮಹೇl
ಪಶುಂ ತನಾಯ ಧೀಮಹಿl
ತನ್ನೋ ಆರ್ದ್ರಾ ಪ್ರಚೋದಯಾತ್ll

7. ಪುನರ್ವಸು:

ಓಂ ಪ್ರಜಾವರುಧ್ಯೈ ಚ ವಿದ್ಮಹೇl
ಅದಿತಿ ಪುತ್ರಾಯ ಧೀಮಹಿl
ತನ್ನೋ ಪುನರ್ವಸು ಪ್ರಚೋದಯಾತ್ll

8. ಪುಷ್ಯಾ:

ಓಂ ಬ್ರಹ್ಮವರ್ಚಸಾಯ ವಿದ್ಮಹೇl
ಮಹಾದಿಶಾಯಾಯ ಧೀಮಹಿl
ತನ್ನೋ ಪುಷ್ಯಃ ಪ್ರಚೋದಯಾತ್ll

9. ಆಶ್ಲೇಷಾ:

ಓಂ ಸರ್ಪರಾಜಾಯ ವಿದ್ಮಹೇl
ಮಹಾರೋಚನಾಯ ಧೀಮಹಿl
ತನ್ನೋ ಆಶ್ಲೇಷಃ ಪ್ರಚೋದಯಾತ್ll

10. ಮಖಾ:

ಓಂ ಮಹಾ ಅನಗಾಯ ವಿದ್ಮಹೇl
ಪಿತ್ರಿಯಾದೇವಾಯ ಧೀಮಹಿl
ತನ್ನೋ ಮಖಃ ಪ್ರಚೋದಯಾತ್ll

11. ಪುಬ್ಬಾ:

ಓಂ ಅರಿಯಂನಾಯ ವಿದ್ಮಹೇl
ಪಶುದೇಹಾಯ ಧೀಮಹಿl
ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll

12. ಉತ್ತರಾ:

ಓಂ ಮಹಾಬಕಾಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಧೀಮಹಿl
ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ll

13. ಹಸ್ತಾ:

ಓಂ ಪ್ರಯಚ್ಚತಾಯೈ ವಿದ್ಮಹೇl
ಪ್ರಕೃಪ್ರಣೀತಾಯೈ ಧೀಮಹಿl
ತನ್ನೋ ಹಸ್ತಾ ಪ್ರಚೋದಯಾತ್ll

14. ಚಿತ್ತಾ:

ಓಂ ಮಹಾದೃಷ್ಟಾಯೈ ವಿದ್ಮಹೇl
ಪ್ರಜಾರಪಾಯೈ ಧೀಮಹಿl
ತನ್ನೋ ಚೈತ್ರಾಃ ಪ್ರಚೋದಯಾತ್ll

15. ಸ್ವಾತಿ:

ಓಂ ಕಾಮಸಾರಾಯೈ ವಿದ್ಮಹೇl
ಮಹಾನಿಷ್ಠಾಯೈ ಧೀಮಹಿl
ತನ್ನೋ ಸ್ವಾತಿ ಪ್ರಚೋದಯಾತ್ll

16. ವಿಶಾಖಾ:

ಓಂ ಇಂದ್ರಾಗ್ನೇಸ್ಯೈ ವಿದ್ಮಹೇl
ಮಹಾಶ್ರೇಷ್ಠಾಯೈ ಚ ಧೀಮಹಿl
ತನ್ನೋ ವಿಶಾಖಾ ಪ್ರಚೋದಯಾತ್ll

17. ಅನೂರಾಧಾ:

ಓಂ ಮಿತ್ರದೇಯಾಯೈ ವಿದ್ಮಹೇl
ಮಹಾಮಿತ್ರಾಯ ಧೀಮಹಿl
ತನ್ನೋ ಅನೂರಾಧಾ ಪ್ರಚೋದಯಾತ್ll

18. ಜ್ಯೇಷ್ಠಾ:

ಓಂ ಜ್ಯೇಷ್ಠಾಯೈ ವಿದ್ಮಹೇl
ಮಹಾಜ್ಯೇಷ್ಠಾಯೈ ಧೀಮಹಿl
ತನ್ನೋ ಜ್ಯೇಷ್ಠಾ ಪ್ರಚೋದಯಾತ್ll

19 ಮೂಲಾ:

ಓಂ ಪ್ರಜಾಧಿಪಾಯೈ ವಿದ್ಮಹೇl
ಮಹಾಪ್ರಜಾಧಿಪಾಯೈ ಧೀಮಹಿl
ತನ್ನೋ ಮೂಲಾ ಪ್ರಚೋದಯಾತ್ll

20. ಪೂರ್ವಾಷಾಢಾ:

ಓಂ ಸಮುದ್ರಕಾಮಾಯೈ ವಿದ್ಮಹೇl
ಮಹಾಬೀಜಿತಾಯೈ ಧೀಮಹಿl
ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll

21. ಉತ್ತರಾಷಾಢಾ:

ಓಂ ವಿಶ್ವೇದೇವಾಯ ವಿದ್ಮಹೇl
ಮಹಾಷಾಢಾಯ ಧೀಮಹಿl
ತನ್ನೋ ಉತ್ತರಾಷಾಢಾ ಪ್ರಚೋದಯಾತ್ll

22. ಶ್ರವಣಾ:

ಓಂ ಮಹಾಶ್ರೇಷ್ಠಾಯೈ ವಿದ್ಮಹೇl
ಪುಣ್ಯಶ್ಲೋಕಾಯ ಧೀಮಹಿl
ತನ್ನೋ ಶ್ರವಣ ಪ್ರಚೋದಯಾತ್ll

23. ಧನಿಷ್ಠಾ:

ಓಂ ಅಗ್ರನಾಥಾಯ ವಿದ್ಮಹೇl
ವಸೂಪ್ರೀತಾಯ ಧೀಮಹಿl
ತನ್ನೋ ಶರ್ವಿಷ್ಠಾ ಪ್ರಚೋದಯಾತ್ll

24. ಶತಭಿಷಾ:

ಓಂ ಭೇಷಜಾಯ ವಿದ್ಮಹೇl
ವರುಣದೇಹಾಯ ಧೀಮಹಿl
ತನ್ನೋ ಶತಭಿಷಾ ಪ್ರಚೋದಯಾತ್ll

25. ಪೂರ್ವಾಭಾದ್ರ:

ಓಂ ತೇಜಸ್ಕರಾಯ ವಿದ್ಮಹೇl
ಅಜರಕ ಪಾದಾಯ ಧೀಮಹಿl
ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ll

26. ಉತ್ತರಾಭಾದ್ರ:

ಓಂ ಅಹಿರಬುಧ್ನಾಯ ವಿದ್ಮಹೇl
ಪ್ರತಿಷ್ಠಾಪನಾಯ ಧೀಮಹಿl
ತನ್ನೋ ಉತ್ತರಪ್ರೋಷ್ಟಪತ ಪ್ರಚೋದಯಾತ್ll

27. ರೇವತಿ:

ಓಂ ವಿಶ್ವರೂಪಾಯ ವಿದ್ಮಹೇl
ಪೂಷ್ಣ ದೇಹಾಯ ಧೀಮಹಿl
ತನ್ನೋ ರೇವತಿ ಪ್ರಚೋದಯಾತ್ll

ನಕ್ಷತ್ರ ಮತ್ತು ಅದರ ಮಾಹಿತಿ

ನಕ್ಷತ್ರಗಳು ಗ್ರಹಗಳಂತೆ ಸೂರ್ಯ ಮಂಡಲದಲ್ಲಿ ಇಲ್ಲ. ಅಥವಾ ಪ್ರಭಾವ ಬೀರುವಷ್ಟು ಹತ್ತಿರದಲ್ಲೂ ಇಲ್ಲ. ಅನೇಕ ಕೋಟಿ ಕೋಟಿ ಮೈಲಿಗಳ ದೂರದಲ್ಲಿವೆ. ಅವುಗಳಿಂದ ಹೊರಟ ಬೆಳಕು ಭೂಮಿಯನ್ನು ತಲುಪಲು ಅನೇಕ ಕೋಟಿ ವರ್ಷಗಳೇ ಬೇಕು. ಮೂಲಾ ನಕ್ಷತ್ರದಿಂದ ಹೊರಟ ಬೆಳಕು ಭೂಮಿಗೆ ತಲುಪಲು ೩೦ ಕೋಟಿ ವರ್ಷ ಬೇಕು. ಅವು (ಈ ನಕ್ಷತ್ರಗಳು) ಮಾನವನ ಜೀವಿತದ ಮೇಲೆ ಪರಿಣಾಮ ಬೀರುವ ಸಾದ್ಯತೆ ಇಲ್ಲ. ಇಂದಿನ ವಿಜ್ಞಾನದ ಪ್ರಕಾರ ಅವು (ನಕ್ಷತ್ರಗಳು) ನಿರ್ಜೀವ, ಅಗಾಧ ಗಾತ್ರದ ಬೆಂಕಿಯ ಉಂಡೆಗಳು.

ಈ ನಕ್ಷ ತ್ರಗಳು ಒಂದೇ ದೂರದಲ್ಲೂ ಇಲ್ಲ. . ಅವು ಭೂಮಿಯಿಂದ ಕೋಟಿ ಕೋಟಿ ಮೈಲಿ ಗಳ ದೂರದಲ್ಲಿವೆ, ಬೇರೆ ಬೇರೆ ಅಂತರದಲ್ಲಿವೆ. ಈಗ ನೂರೈವತ್ತು ವರ್ಷಗಳ ಹಿಂದೆ ಈ ನಕ್ಷತ್ರಗಳ ವಿವರ, ದೂರ ತಿಳಿಯುವ ಸಾಧನಗಳಿರಲಿಲ್ಲ. ಹಳೆಯ ನಂಬುಗೆಯ ಮೇಲೇ ಫಲ ಜ್ಯೋತಿಷ್ಯ ಭವಿಷ್ಯ ಹೇಳುತ್ತಾರೆ. ಜ್ಯೋತಿಷ್ಯ ಶಾಸ್ರಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರಗಳ ಮಾತ್ರ ವಿವರ ಮತ್ತು ಮಾಹಿತಿ ಯನ್ನು ನಾವು ಇಲ್ಲಿ ನಿಮಗೆ ನೀಡಿದ್ದೇವೆ.

ಈ ಕೆಳಗಿನ ನಕ್ಷತ್ರ ಗಳು ಬಹಳಷ್ಟು ಸ್ತ್ರೀ ಲಿಂಗ ಪದಗಳು ; ಅವು ಧೀರ್ಘಾಕ್ಷರ ದಿಂದ ಕೊನೆಗೊಳ್ಳಬೇಕು

ಜ್ಯೋತಿಷ್ಯ ಶಾಸ್ತ್ರದ ನಕ್ಷತ್ರಗಳು

  1. ಅಶ್ವಿನಿ
  2. ಭರಣಿ
  3. ಕೃತ್ತಿಕಾ
  4. ರೋಹಿಣಿ
  5. ಮಗಶಿರಾ
  6. ಆರ್ದ್ರಾ
  7. ಪುನರ್ವಸು
  8. ಪುಷ್ಯಾ
  9. ಆಶ್ಲೇಷಾ
  10. ಮಖಾ
  11. ಪುಬ್ಬಾ
  12. ಉತ್ತರಾ
  13. ಹಸ್ತಾ
  14. ಚಿತ್ತಾ
  15. ಸ್ವಾತಿ
  16. ವಿಶಾಖಾ
  17. ಅನೂರಾಧಾ
  18. ಜ್ಯೇಷ್ಠಾ
  19. ಮೂಲಾ
  20. ಪೂರ್ವಾಷಾಢಾ
  21. ಉತ್ತರಾಷಾಢಾ
  22. ಶ್ರವಣಾ
  23. ಧನಿಷ್ಠಾ
  24. ಶತಭಿಷಾ
  25. ಪೂರ್ವಾಭಾದ್ರ
  26. ಉತ್ತರಾಭಾದ್ರ
  27. ರೇವತಿ

ಈ ಜ್ಯೋತಿಷ್ಯಕ್ಕೆ ಗಣನೆಗೆ ತೆಗೆದುಕೊಳ್ಳುವ ೨೭ ನಕ್ಷತ್ರ ಗಳು ಬ್ರಹ್ಮನ ಮಗ ದಕ್ಷನ ಹೆಣ್ಣುಮಕ್ಕಳು. ಅವರನ್ನು ಚಂದ್ರನಿಗೆ ಕೊಟ್ಟು ವಿವಾಹ ಮಾಡಿದ್ದನು. ಚಂದ್ರನು ದಿನಕ್ಕೆ ಒಬ್ಬರಂತೆ ಅಶ್ವಿನಿ ಮೊದಲಾದ ಸತಿ-ನಕ್ಷತ್ರಗಳ ಜೊತೆ ಇರುತ್ತಾನೆ. (ಅವೇ ಚಂದ್ರ ನಕ್ಷತ್ರ.)

ಜ್ಯೋತಿಷ್ಯ ನಕ್ಷತ್ರಗಳ ಅರ್ಥ:

ಆಕಾಶದಲ್ಲಿ ಮಕರ ಮತ್ತು ಕರ್ಕಾಟಕ ಸಂಕ್ರಾತಿ ಮಧ್ಯ ಅವಕ್ಕೆ ಎರಡು ಕಡೆ ಸ್ಪರ್ಶಿಸುವಂತೆ ವೃತ್ತವನ್ನು ರಚಿಸಿದರೆ , ಅದು ಕ್ರಾಂತಿವೃತ್ತ ವೆನಿಸುವುದು. ಅದು ಆಕಾಶದಲ್ಲಿ ೩೬೦ ಡಿಗ್ರಿಯ ಊಹಾ ವೃತ್ತವಾಗುವುದು. ಆ ೩೬೦ ಡಿಗ್ರಿಗಳನ್ನು ೨೭ ಭಾಗ ಮಾಡಿದರೆ ೨೭ ನಕ್ಷತ್ರದ ಸ್ಥಾನಗಳಾಗುತ್ತವೆ. ಅವೇ ಅಶ್ವಿನಿ, ಭರಣಿ, ಮೊದಲಾದ ೨೭ ನಕ್ಷತ್ರ ಸ್ಥಾನಗಳು. ಆ ಹೆಸರಿನ ಒಂದು ನಕ್ಷತ್ರಕ್ಕೆ ಆಕಾಶದಲ್ಲಿ ೧೩.೧/೩ ಡಿಗ್ರಿ ಯಷ್ಟು ಸ್ಥಾನ (ಸ್ಥಳ -ಆ ಸ್ಥಳ ಕ್ಕೆ ನಕ್ಷತ್ರದ ಹೆಸರು). ಆಕಾಶದಲ್ಲಿ ಈ ಹೆಸರಿನ ನಕ್ಷತ್ರಗಳು ಅಳತೆಗೆ ಸರಿಯಾಗಿ ಇಲ್ಲ; ೧೩.೧/೩ ಡಿಗ್ರಿ ಸ್ಥಳ- ಮಧ್ಯದಲ್ಲಿ ಎಲ್ಲಿಯೋ ಒಂದು ಕಡೆ ಬರುವುದು. ಚಂದ್ರನು ಸುಮಾರು ಪ್ರತಿದಿನ ಒಂದು ನಕ್ಷತ್ರ ದಂತೆ ಒಂದು ತಿಂಗಳಲ್ಲಿ (೨೮/೨೯.೫ ದಿನ) ಈ೨೭ ನಕ್ಷತ್ರ ಗಳಲ್ಲಿ ಸಂಚರಿಸುತ್ತಾನೆ. ವ್ಯಕ್ತಿಯ ಜನನ ಕಾಲದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೋ ಅದು ಆ ವ್ಯಕ್ತಿಯ ನಕ್ಷತ್ರವಾಗುತ್ತದೆ (ಚಂದ್ರ ನಕ್ಷತ್ರ- ನಿತ್ಯ ನಕ್ಷತ್ರ -ಎಂದು ಹೆಸರು)

ನಕ್ಷತ್ರ ಪಾದ:

ಈ ೧೩.೧/೩ ಡಿಗ್ರಿಗಳನ್ನು ಪುನಃ ೪ ಭಾಗ (೪ ಪಾದ) ಮಾಡಿದರೆ ಪ್ರತಿ ಭಾಗಕ್ಕೆ ೩.೧/೩ ಡಿಗ್ರಿಯಷ್ಟು(೩ಅಂಶ ೨೦ಕಲೆ) ಸ್ಥಳ (ಆಕಾಶದಲ್ಲಿ) ಬರುವುದು. ಅದು ನಕ್ಷತ್ರದ ಒಂದು ಪಾದ (೩ ೧/೩ಡಿಗ್ರಿ ಸ್ಥಳ) ಪ್ರತಿ ನಕ್ಷತ್ರಕ್ಕೂ ನಾಲ್ಕು ಪಾದಗಳಂತೆ ಅಶ್ವಿನ್ಯಾದಿ ೨೭ ನಕ್ಷತ್ರಗಳನ್ನು (೩೬೦ ಡಿಗ್ರಿಗಳನ್ನು) ೧೦೮ ಭಾಗಮಾಡಿ ಪ್ರತಿ ಭಾಗದಲ್ಲಿ ಜನನ ಕಾಲದಲ್ಲಿದ್ದ ಗ್ರಹಗಳನ್ನು ಗುರುತಿಸಿದರೆ, ಅದು ನವಾಂಶ ಕುಂಡಲಿ. ನಕ್ಷತ್ರದ ಒಂದು ಪಾದಕ್ಕೆ ೩ಅಂಶ ೨೦ಕಲೆಯಾದರೆ , ಚಂದ್ರನು ಒಂದು ಪಾದದಲ್ಲಿ ಸುಮಾರು ೬ ರಿಂದ ೬.೧/೪ ಗಂಟೆಗಳ ಕಾಲ ಇರುತ್ತಾನೆ. ಉದಾಹರಣೆಗೆ ಅಶ್ವಿನಿ ನಕ್ಷತ್ರದ ಮೊದಲ ಪಾದದಲ್ಲಿ ಈ ಆರೂಕಾಲು ಗಂಟೆಗಳ ಮಧ್ಯದಲ್ಲಿ ಒಂದೇ ರೇಖಾಂಶದಲ್ಲಿ ಹುಟ್ಟಿದ ವ್ಯಕ್ತಿಗಳೆಲ್ಲರಿಗೂ ಅಶ್ವಿನಿ ನಕ್ಷತ್ರದ ಒಂದನೇ ಪಾದ.

ಮಳೆಯ ನಕ್ಷತ್ರಗಳು ಅದರ ಮೇಲಿರುವ ಗಾದೆಗಳು:

ಮಳೆಗಾಲವಿರಲಿ, ಚಳಿಗಾಲವಿರಲಿ, ಬೇಸಿಗೆಕಾಲವಾಗಲಿ ಪೂರ್ವಜರು ಆಯಾ ಹವಾಗುಣಕ್ಕೆ ತಕ್ಕಂತೆ ಗಾದೆಗಳನ್ನು ಕಟ್ಟುತ್ತಿದ್ದರು. ಅಷ್ಟೇ ಅಲ್ಲ, ಈಗಲೂ ಸಹ ಹಳ್ಳಿಗಳಲ್ಲಿ ಅಜ್ಜ, ತಾತಂದಿರಿಗೆ ಒಮ್ಮೆ ಮಾತನಾಡಿಸಿದರೆ ಸಾಕು, ತಮ್ಮ ಅನುಭವದ ಬುತ್ತಿಯನ್ನು ತೆರೆದಿಟ್ಟು  ವಿಜ್ಞಾನಿಗಳಂತೆ ಪಟಪಟನೇ ಅವರ ಬಾಯಿಂದ ಮುತ್ತಿನ ಮಣಿಗಳು ಉದುರುತ್ತವೆ.  ತಮ್ಮ ಅನುಭವವೇ ಅವರಿಗೆ ಪಾಠವಾಗಿತ್ತು.. ಅವು ಅಕ್ಷರಶಃ ಸತ್ಯವಾಗಿದೆ. ವಿಜ್ಞಾನಿಗಳನ್ನು ಮೀರಿ ತಮ್ಮ ಅನುಭವದ ಮೇಲೆ ಹಲವಾರು ಗಾದೆ ಮಾತುಗಳನ್ನು ಹೇಳಿದ್ದಾರೆ. ರೈತ ಬಾಂಧವರಿಗೆ ಮೆಲಕು ಹಾಕುವುದಕ್ಕಾಗಿ ಇಲ್ಲಿ ಕೆಲವನ್ನು ತಿಳಿಸಲಾಗಿದೆ.

ಪಾರಂಪರಿಕ ಇಂಥ ಜ್ಞಾನ ಋತು ನಿಯಮಕ್ಕನುಸಾರ ಬೆಳೆದು ಬಂದಿತ್ತು. ಗತಿಸಿದ ವರ್ಷಗಳ ಅನುಭವವೇ ಇದಕ್ಕೆ ಆಧಾರ. ಇಂತಿಂಥ ಮಳೆ ಇಂಥ ದಿನಗಳಲ್ಲಿ ಬರುತ್ತದೆ ಎಂದು ಗುರುತಿಸಿ ನಮೂದಿಸಿದ ಪಂಚಾಂಗವೇ ರೈತನ ಕೃಷಿ ಕಾರ್ಯದ ವೇಳಾಪಟ್ಟಿಗೆ ಆಧಾರವಾಗಿತ್ತು. ಅದರಂತೆಯೇ ರೈತ ತನ್ನ ಕೃಷಿಕಾರ್ಯ ಮುಂದುವರಿಸುತ್ತಿದ್ದನು. ನಂತರ ರೈತರೇ ತಮ್ಮ ಅನುಭವದ ಮೇಲೆ ಹಲವಾರು ಗಾದೆಮಾತುಗಳನ್ನು ಕಟ್ಟಿದ್ದಾರೆ.

ಮಳೆಯ ನಕ್ಷತ್ರಗಳು (Rain stars):

ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖ, ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ ಹಾಗೂ ವಿಶಾಖ ನಕ್ಷತ್ರಗಳನ್ನು ಮಳೆಯ ನಕ್ಷತ್ರಗಳೆಂದು ಕರೆಯಲಾಗುತ್ತದೆ.ಉಳಿದ ನಕ್ಷತ್ರಗಳಲ್ಲಿ ಮಳೆ ಬರುವ ಸಾಧ್ಯತೆ ತೀರಾ ಕಡಿಮೆ.

ಮಳೆಯ ನಕ್ಷತ್ರಗಳ ಮೇಲಿರುವ ಗಾದೆಗಳು( Rain proverbs):

ಯಾವ ಅಕ್ಷರವೂ ಕಲಿಯದ ಪೂರ್ವಜರ ನೆನಪಿನ ಶಕ್ತಿ, ಮಳೆ ಮುನ್ಸೂಚನೆಗೆ ಕಟ್ಟಿದ ಗಾದೆಗಳು ಇಂದಿಗೂ ಚಿರಪರಿಚಿತ. ಈ ಗಾದೆಗಳನ್ನು ಯಾರು ಬರೆದರೋ ಗೊತ್ತಿಲ್ಲ, ಆದರೂ ಇಂದಿಗೂ ಹಳ್ಳಿಯಲ್ಲಿ ಮಳೆಗಾಲ ಬಂತೆಂದರೆ ಸಾಕು, ತಾವಾಗಿಯೇ ಬಾಯಿಂದ ಹೊರಬರುತ್ತವೆ. ಈಗಲೂ ರೈತಬಾಂಧವರ ಬಾಯಲ್ಲಿ ಈ ಗಾದೆಗಳು ಕೇಳಿಬರುತ್ತದೆ. ತಮ್ಮ ನೆನಪಿಗೋಸ್ಕರ ಕೆಲವು ಗಾದೆಗಳನ್ನು ಇಲ್ಲಿ ನೀಡಲಾಗಿದೆ.

ಅಶ್ವಿನಿ – ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,

ಭರಣಿ – ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು

ಕೃತಿಕಾ – ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

ರೋಹಿಣಿ – ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

ಮೃಗಶಿರ – ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು

ಆರ್ದ್ರಾ – ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

ಆಶ್ಲೇಷ – ತುಂತುರು ಮಳೆಯಿಂದ ತೂಬು ಒಡೆದೀತೆ? ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು.

ಮಘ – ಮಗೆ ಮಳೆ ಮಗೆ ಗಾತ್ರ ಬೀಳ್ತದೆ, ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

ಹುಬ್ಬ – ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ

ಉತ್ತರಾ ಫಲ್ಗುಣಿ – ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.

ಹಸ್ತ – ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.

ಸ್ವಾತಿ –  ಸ್ವಾತಿ ಮಳೆ ಮುತ್ತಿನ ಬೆಳೆ

ವಿಶಾಖ – ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

ಅನುರಾಧ – ಅನುರಾಧ ಬಂದರೆ ನಮ್ಮ ರಾಗಿ ನಮ್ಮದು

ಚಿತ್ರಾ – ಚಿತ್ತಾ ಮಳೆ ವಿಚಿತ್ರ ಬೆಳೆ!

ಪೂರ್ವಾಷಾಢ-ಉತ್ತರಾಷಾಢ – ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.