ಕಳ ಕಂಬುಳ

0Shares

ತುಳುನಾಡಿನ ಧಾರ್ಮಿಕ ಹಬ್ಬ ಮತ್ತು ಆಟಗಳಲ್ಲಿ ಕಂಬಳಕ್ಕೆ ವಿಶೇಷವಾದ ಮಾನ್ಯತೆ ಇದೆ. ಇದರಲ್ಲಿ ಕಳ ಕಂಬುಳವೂ ಕೂಡ ಒಂದು ವಿಶೇಷವಾದ ಹಬ್ಬ. ಪೂರ್ವ ಹಿರಿಯರ ಕಾಲದಲ್ಲಿ ಕೃಷಿ ಬೇಸಾಯ ತುಳುನಾಡಿನಲ್ಲಿ ಮಹತ್ವದ ಕಾಯಕ. ವರ್ಷವಿಡೀ ವ್ಯವಸಾಯದ ಜೊತೆಗೆ ಒಂಚೂರು ಮನೋರಂಜನೆಗಾಗಿ ಕೆಲವೊಂದು ಹಬ್ಬ ಮತ್ತು ಆಟಗಳಿಗೆ ಒತ್ತು ಕೊಟ್ಟರು. ಆ ಹಬ್ಬಗಳಲ್ಲಿ ಈ ಹಬ್ಬವು ಒಂದು. ಕಂಬಳದ ಕೋಣಗಳು ಎಲ್ಲರ ಮನೆಯಲ್ಲಿಯೂ ಇರುವುದಿಲ್ಲ. ಅನಾದಿ ಕಾಲದಲ್ಲಿ ತುಳುನಾಡಿನ ಮಧ್ಯಮವರ್ಗದ ಜನರು ಮತ್ತು ಕೆಲವೊಂದು ಸಾಮಾನ್ಯ ವರ್ಗದ ಜನರು ೫೦, ೮೦ ಜನರು ಸುತ್ತು ಪಾಗಾರದ ಗುತ್ತು, ಬೂಡು, ಬರ್ಕೆಯ ಮನೆಯಲ್ಲಿ ವಾಸಿಸುವಾಗ ದೊಡ್ಡ ದೊಡ್ಡ ಹಟ್ಟಿಗಳಲ್ಲಿ ಎತ್ತು, ದನ ಕರುಗಳ ಜೊತೆಗೆ ದಷ್ಟ ಪುಷ್ಟವಾದ ಕಂಬಳದ ಕೋಣಗಳು ಬೇರೆಯೆ ಇರುತ್ತಿದ್ದವು.

ಕಳ ಕಂಬುಳ

ಅಲ್ಲದೆ ಇವರುಗಳೆ ಸ್ವತಃ ಸಾಗುವಳಿ ಮಾಡುತ್ತಿದ್ದರು. ಸದಾ ವ್ಯವಸಾಯದ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದ ತುಳುವರು, ಒಂದು ಮನೆಯಲ್ಲಿ ೬೦ ಜನರಲ್ಲಿ ಇಪ್ಪತ್ತು ಜನ ವ್ಯವಸಾಯ ಮಾಡುತ್ತಿದ್ದವರೆ. ಹಾಗೆಯೇ ಕೆಲವೊಂದು ವ್ಯವಸಾಯದ ಹಬ್ಬ, ಆಟಗಳನ್ನು ಮಾಡಿಕೊಂಡು ಬಂದಿದ್ದರು. ಅದರಲ್ಲಿ ಕುಲ್ಕುಂದ ಜಾತ್ರೆ ಪ್ರಮುಖ. ಸಾಗುವಳಿ ಆಟದಲ್ಲಿ ಕಂಬಳ ಪ್ರಮುಖ ಆಟ. ಇದರಲ್ಲೂ ಎರಡು ವಿಧ ಬಾರೆ (ಬಾಳೆ) ಮತ್ತು ಪೂಕರೆ ಕಂಬಳ. ಗದ್ದೆಯನ್ನು ಉತ್ತು ಸಾಂಕೇತಿಕವಾಗಿ ಕೋಣಗಳನ್ನು ಓಡಿಸಿದ ಬಳಿಕ ಬಾಳೆಗಿಡವನ್ನು ಗದ್ದೆಯ ಮಧ್ಯದಲ್ಲಿ ನೆಟ್ಟು ಬಾಳೆ ಕಂಬಳವನ್ನು ಆಚರಿಸುತ್ತಾರೆ. ಬಾಳೆ ಕಂಬಳಕ್ಕಿಂತ ಪೂಕರೆ ಕಂಬಳ ಹೆಚ್ಚು ವೈಭವದಿಂದ ಕೂಡಿದ್ದಾಗಿದೆ. ಬಾಳೆ ಮತ್ತು ಪೂಕರೆ ಕಂಬಳಗಳಲ್ಲಿ ಕೋಣಗಳ ಓಟದ ಸ್ಪರ್ಧೆ ಇರುವುದಿಲ್ಲ. ಪೂಕರೆ ಕಂಬಳದಲ್ಲಿ ಆಚರಣಾತ್ಮಕ ವಿಧಿವಿಧಾನಗಳು ಅಧಿಕವಾಗಿರುತ್ತವೆ.

ತುಳುವರು ಕೇವಲ ನೇಗಿಲು ಹಿಡಿದು ಗದ್ದೆ ಹೂಳುವುದಲ್ಲದೆ, ಜನಪ್ರಿಯ ಆಟ ಕಂಬಳದಲ್ಲಿ ಕೂಡ ತಮ್ಮನು ತಾವೆ ತೊಡಗಿಸಿಕೊಂಡು, ಕೋಣಗಳನ್ನು ತಾವೆ ಓಡಿಸುತ್ತಿದ್ದರು. ಇದರಲ್ಲಿ ಯಾವುದೇ ಬಹುಮಾನ ಇರಲಿಲ್ಲ, ಇದ್ದರೂ ಅದು ಸಹ ಕೋಣದ ಮನೆತನಕ್ಕೆ ಗೌರವ ಮತ್ತು ಕೋಣಗಳಿಗೆ ತಿನ್ನಲು ಮಾತ್ರ. ಹೀಗೆಯೆ ಪ್ರತಿ ಗುತ್ತು ಬರ್ಕೆಗಳ ಮನೆಯ ಎದುರಿನ ಬಾಕ್ಯರ್ ನಲ್ಲಿ ಕಂಬುಳ ನಡೆಯುತ್ತಿತ್ತು. ಪ್ರತಿಯೊಬ್ಬರು ಕೃಷಿಕರು ವ್ಯವಸಾಯಗಾರರಾಗಿದ್ದರಿಂದ ಈ ಆಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲದೆ ತಮ್ಮ ಮನೆಯ ಕೋಣಗಳನ್ನು ಎಷ್ಟೇ ದೂರ ಆದರೂ ಕರೆದುಕೊಂಡು ಹೋಗುತ್ತಿದ್ದರು. ಅವರಿಗೆ ಸೋಲು ಗೆಲುವಿನ ಲೆಕ್ಕಾಚಾರ ಅಲ್ಲ. ಇಂತಹ ಕೃಷಿ ಪ್ರಧಾನ ಆಟದಲ್ಲಿ ಭಾಗವಹಿಸುವುದು ಮುಖ್ಯ. ಅದೆ ರೀತಿ ಪ್ರತಿ ಗುತ್ತು ಬರ್ಕೆಗಳಿಗೆ ಇಂದಿನ ಕಾಲದಲ್ಲಿ ಒಕ್ಕಲುದಾರರು, ದೈವದ ಚಾಕಿರಿಯವರು, ಮೂಲದ ಜನರು, ಹೀಗೆ ಅನೇಕ ವರ್ಗದ ಜನರು ಸಂಬಂಧ ಪಟ್ಟವರು ಇದ್ದರು.

ಆದರೂ ತುಳುನಾಡಿನ ಅಳಿಯ ಕಟ್ಟಿನ ವಿಶೇಷದಿಂದಾಗಿ ಹೆಚ್ಚಿನ ಸಮುದಾಯ ಆಚಾರ ವಿಚಾರದಲ್ಲಿ ಒಂದೆ ರೀತಿಯ ಅಣ್ಣ ತಮ್ಮಂದಿರ ಸಂಬಂಧದ್ದಾಗಿತ್ತು. ನಮ್ಮೂರಿನ ಜಾತ್ರೆ ಬಂದರೆ ನಮಗೆ ಹೇಗೆ ಸಂತೋಷವೊ, ಆವತ್ತಿನ ಕಾಲದಲ್ಲಿ ಅವರಿಗೆ ಸಂಬಂಧಿಸಿದ ಗುತ್ತು ಬರಿಕೆಗಳಲ್ಲಿ ಒಳ್ಳೆಯ ಕಾರ್ಯಕ್ರಮ ಆದರೆ ಅಲ್ಲಿಗೆ ಸಂಬಂಧಿಸಿದ ಎಲ್ಲರಿಗೂ ಸಂತೋಷ ದಿನ. ಆ ದಿನ ಗುತ್ತು ಬರ್ಕೆಯ ಪ್ರಧಾನ ಎಲ್ಲಾ ದೈವಗಳಿಗೆ(ಮೈಸೊಂದಾಯಗೆ ಹೆಚ್ಚಿನ ಆದ್ಯತೆ)ಬೊಂಡ ಇಟ್ಟು, ತಂಬಿಲ, ಮಾಡಿ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದರು. ಕಂಬಳ ನಡೆಯುವ ಮನೆಯ ಒಳಗಿನ ಕೆಲಸಗಳನ್ನು ಕೆಲವು ಕೆಲವೊಂದು ವರ್ಗ ಮಾಡಿದರೆ, ಇನ್ನೂ ಕಂಬಳದ ಗದ್ದೆಯ ಪೂರ್ವ ತಯಾರಿಯನ್ನು ಕೆಲವೊಂದು ಒಕ್ಕಲು ಮತ್ತು ಕೃಷಿಕ ವರ್ಗ ಸೇರಿ ಎಲ್ಲರೂ ಮಾಡುತ್ತಾರೆ. ಅಲ್ಲಿ ಜಾತಿ ಎಂಬ ಅಡ್ಡ ಗೋಡೆ ಇಲ್ಲ. ಯಾಕೆಂದರೆ ಒಕ್ಕಲುದಾರರು ಎಲ್ಲಾ ಜಾತಿಯಲ್ಲೂ ಇದ್ದರು.

See also  ಉತ್ಥಾನ ದ್ವಾದಶಿ - ತುಳಸಿ ಹಬ್ಬ

ಅಲ್ಲದೆ ಅಲ್ಲಿಗೆ ಬರುವ ಎಲ್ಲಾ ಕಡೆಯ ಕೋಣಗಳಿಗೆ ಜನರಿಗೆ ಸ್ವಾಗತವನ್ನು ಇವರುಗಳೆ ಕೋರುತ್ತಿದ್ದರು. ಒಂದು ಲೆಕ್ಕದಲ್ಲಿ ಈಗಿನ ಸ್ವಾಗತ ಸಮಿತಿ ಎಂದರೆ ತಪ್ಪಾಗಲಾರದು. ಅಲ್ಲದೆ ಗದ್ದೆಗೆ ಪೂರ್ವ ಆಚರಣೆಗಳಲ್ಲಿ ಮೊದಲಾಗಿ ಜವಾಬ್ದಾರಿ ವಹಿಸಿಕೊಳ್ಳಲು ಇವರಿಗೆ ಹೆಚ್ಚಿನ ಆದ್ಯತೆ, ಯಾಕೆಂದರೆ ತುಳುವರು ತುಳುನಾಡಿನ ಮಣ್ಣಿನ ಮಕ್ಕಳು ಮತ್ತು ಮೂಲದವರು ಎಂಬ ನಂಬಿಕೆ. ಅಲ್ಲದೆ ಗದ್ದೆಯ ವಿಚಾರದಲ್ಲಿ ಬಾರಿ ಪರಿಣಿತರು.

ಇಂದಿನ ಕಾಲದಲ್ಲಿ ಮೈಕ್, ಸೌಂಡ್ ಇದ್ದರೂ ಅಂದಿನ ಕಾಲದಲ್ಲಿ ಏನೂ ಇರದ ಕಾರಣ ತುಳುನಾಡಿನ ಢೊಲಿಗೆ ವಿಶೇಷ ಆದ್ಯತೆ ಇತ್ತು. ಇದನ್ನು ಬಾರಿಸಿದರೆ ಸುತ್ತಮುತ್ತಿನ ಎಲ್ಲಾ ಊರುಗಳಿಗೆ ಕೇಳಿಸುತ್ತಿತು. ಹೆಚ್ಚಾಗಿ ಹಬ್ಬ ಹರಿದಿನಗಳಲ್ಲಿ ಇದನ್ನೇ ಬಳಸುತ್ತಿದ್ದರು. ಇದನ್ನು ತಯಾರಿಸುತ್ತಿದ್ದವರು ಮತ್ತು ಬಡಿಯುತ್ತಿದ್ದವರು ಕೊರಗರು. ಹಾಗೆಂದು ಮಾತ್ರಕ್ಕೆ ಅವರನ್ನು ಕೀಳಾಗಿ ಕಾಣಿದ್ದಾರೆ ಅನ್ನೋದು ತಪ್ಪು. ಯಾಕೆಂದರೆ ಇವರು ತುಳುನಾಡಿನ ಎಲ್ಲಾ ಅಚರಣೆಗಳಲ್ಲಿ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಕೆಲವೊಂದು ದೇವರ ಕಂಬಳ ನಡೆಯುತ್ತದೆ, ಇದು ಈಗಲೂ ನಡೆಯುತ್ತಿದೆ. ಅರಸು ಕಂಬಳಗಳು ಒಂದೆರಡು ಬಿಟ್ಟರೆ ಹೆಚ್ಚಿನ ಕಡೆಗಳಲ್ಲಿ ನಡೆಯುತ್ತಿದೆ. ಇದು ಸ್ವಲ್ಪ ಪ್ರತಿಷ್ಠಿತರು ಸೇರಿ ಮಾಡುವ ಕಂಬಳ. ಇದು ಸ್ವಲ್ಪ ಪ್ರತಿಷ್ಠೆ ಕಣ ಬಿಟ್ಟರೆ, ಕಂಬಳ ಎಂದಿಗೂ ಶುದ್ದ ಗ್ರಾಮಿಣ ವ್ಯವಸಾಯಗಾರರ ಆಟ ಎಂದರೆ ತಪ್ಪಲ್ಲ.

ಆದರೆ ಇಂದು, ತುಳುನಾಡಿನ ಪ್ರತಿ ಗುತ್ತು ಬರ್ಕೆಗಳ ಬಾಕ್ಯರುಗಳಲ್ಲಿ ನಡೆಯುತ್ತಿದ್ದ ಕಂಬಳ ಈಗ ಹೆಚ್ಚಾಗಿ ಮಾಯ ಅಗಿದೆ. ಯಾಕೆಂದರೆ ತೋಟಗಾರಿಕೆ, ರಬ್ಬರು ಮರದ ಪ್ರಭಾವ. ಹೆಚ್ಚಾಗಿ ಎಲ್ಲಿಯೂ ಬೇಸಾಯ ಕಂಡು ಬರುವುದಿಲ್ಲ. ಅದರ ಬಗ್ಗೆಯೂ ಕೂಡ ಈಗಿನ ಯುಗದ ಯುವಕರಿಗೆ ಉತ್ಸಾಹವೂ ಇಲ್ಲವಾಗಿ ಈಗೀಗ ಕೆಲವೆಡೆ ಮಾತ್ರವೇ ಲೆಕ್ಕಾಚಾರ ದಲ್ಲಿ ದೇವರ ಕಂಬಳ ಮತ್ತು ಅರಸು ಕಂಬಳಗಳು ನಡೆಯುತ್ತಿವೆ.

0Shares

Leave a Reply

error: Content is protected !!