ನಂಬಿದೆ ನಿನ್ನ ನಾಗಾಭರಣ – Nambide Ninna Nagabharana Lyrics

41Shares

Lyrics In Kannada:

ನಂಬಿದೆ ನಿನ್ನ ನಾಗಾಭರಣ ಕಾಯೋ ಕರುಣಾಮಯ ನನ್ನ |
ನಿನ್ನ ನಾಮವು ಒಂದೇ ನೀಗಿಸಬಲ್ಲದು ಬಾಧೆ ||
ತನುಮನ ಜೀವನ ಪಾವನವಯ್ಯ |
ಶಂಭೋ ಎನ್ನಲು ಇಲ್ಲ ಭಯ || ಪ ||

ಬಾಡದ ಹೂವಿನ ಮಾಲೆ ಬಾಗಿತು ಪಾದದ ಮೇಲೆ |
ಪ್ರೇಮಮಯ ನಿನಗೆ ಜಯ |
ನನ್ನ ಜೀವನ ನಿನ್ನಲೆ ತನ್ಮಯ ||
ಬಾಳಿನ ಹಾದಿಯ ಬೆಳಗಯ್ಯ || ೧ ||

ಲೋಕವ ಕಾಯುವ ಸ್ವಾಮಿ ಭಿಕ್ಷೆಯ ಬೇಡಿದ ಪ್ರೇಮಿ |
ಭಸ್ಮಮಯ ಬಿಲ್ವಪ್ರಿಯ |
ನನ್ನೀ ದೇಹವೇ ನಿನ್ನಯ ಆಲಯ ||
ಸೇವಾ ಭಾಗ್ಯವ ನೀಡಯ್ಯ || ೨ ||


Lyrics In English:

Nambide ninna nagabharana kayo karunamaya nanna |
ninna namavu onde neegisaballadu badhe ||
tanumana jeevana pavanavayya |
shambho ennalu illa bhaya || pa ||

Badada hoovina male bagitu padada mele |
premamaya ninage jaya |
nanna jeevana ninnale tanmaya ||
balina hadiya belagayya || 1 ||

Lokava kayuva swami bhikseya bedida premi |
bhasmamaya bilvapriya |
nanni dehave ninnaya alaya ||
seva bhagyava needayya || 2 ||

41Shares
See also  ಉಡಿಯ ತುಂಬಿರೆ ನಮ್ಮ - Udiya Tumbire Namma Lyrics

Leave a Reply

error: Content is protected !!