ಅಷ್ಟ ದಿಕ್ಪಾಲಕರು

0Shares

ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ. ‘ಅಷ್ಟ’ ಎಂಬ ಪದವು ಎಂಟು ಸಂಖ್ಯೆಯನ್ನು ಸೂಚಿಸುತ್ತದೆ, ‘ದಿಕ್’ ಎಂದರೆ ದಿಕ್ಕು ಮತ್ತು ‘ಪಾಲ’ ಅಥವಾ ‘ಪಾಲಕ’ ಪಾಲಕ ಅಥವಾ ಆಡಳಿತಗಾರ. ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ.  ಈ ಎಂಟು ದಿಕ್ಕುಗಳು ಪೂರ್ವ, ಉತ್ತರ, ದಕ್ಷಿಣ, , ಪಶ್ಚಿಮ, ಈಶಾನ್ಯ, ಆಗ್ನೇಯ, ವಾಯುವ್ಯ, ಮತ್ತು ನೈಋತ್ಯ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ.

ಅಷ್ಟ ದಿಕ್ಪಾಲಕರು

ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು:

ಹೆಸರು ದಿಕ್ಕು ಮಂತ್ರ ಆಯುಧ ಒಡನಾಡಿ ಗ್ರಹ ವಾಹನ
ಇಂದ್ರ ಪೂರ್ವ ಓಂ ಲಂ ಇಂದ್ರಾಯ ನಮಃ ವಜ್ರಾಯುಧ ಶಚಿ ಸೂರ್ಯ ಐರಾವತ
ಅಗ್ನಿ ಆಗ್ನೇಯ ಓಂ ರಂ ಅಗ್ನಯೇ ನಮಃ ಶಕ್ತಿ ಸ್ವಾಹ ಮಂಗಳ ಟಗರು
ಯಮ ದಕ್ಷಿಣ ಓಂ ಮಂ ಯಮಾಯ ನಮಃ ದಂಡ ಯಮಿ ಬೃಹಸ್ಪತಿ ಕೋಣ
ನಿಋುತಿ ನೈರೃತ್ಯ ಓಂ ಕ್ಷಂ ರಕ್ಷಸಾಯ ನಮಃ ಖಡ್ಗ ಖಡ್ಗಿ ಬುಧ ಮನುಷ್ಯ
ವರುಣ ಪಶ್ಚಿಮ ಓಂ ವಂ ವರುಣಾಯ ನಮಃ ಪಾಶ ವರುಣಿ ಶುಕ್ರ ಮೊಸಳೆ
ವಾಯು ವಾಯುವ್ಯ ಓಂ ಯಂ ವಾಯವೇ ನಮಃ ಅಂಕುಶ ಭಾರತೀ ದೇವಿ ಶನಿ ಸಾರಂಗ
ಕುಬೇರ ಉತ್ತರ ಓಂ ಶಂ ಕುಬೇರಾಯ ನಮಃ ಗದೆ ಕೌಬೇರಿ ಚಂದ್ರ ಆನೆ
ಈಶಾನ ಈಶಾನ್ಯ ಓಂ ಹಂ ಈಶಾನಾಯ ನಮಃ ತ್ರಿಶೂಲ ಪಾರ್ವತಿ ರಾಹು ನಂದಿ

ಇಂದ್ರ:

ಇಂದ್ರ

ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿದೇವತೆ. ಐರಾವತ ಇವನ ವಾಹನ. ವಿಷ್ಣು ಪುರಾಣದ ಪ್ರಕಾರ, ಈ ಐರಾವತವು 4 ದಂತಗಳು ಮತ್ತು 7 ಸೊಂಡಿಲನ್ನು ಹೊಂದಿದೆ ಮತ್ತು ನಿಷ್ಕಳಂಕ ಬಿಳಿಯಾಗಿದೆ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ.

ಅಗ್ನಿ:

ಅಗ್ನಿ

ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. ಅಗ್ನಿಯು ಪೃಥ್ವಿಗೆ ಅಧಿಪತಿಯಾದ ದೇವತೆ ಎಂದು ಪ್ರಸಿದ್ಧನಾಗಿದ್ದು ದ್ಯಾವಾಪೃಥಿವ್ಯಾದಿ ಸಕಲ ಲೋಕಗಳಲ್ಲೂ ವ್ಯಾಪಿಸಿರುವ ದಿವ್ಯಜ್ಯೋತಿ, ದಿವ್ಯಶಕ್ತಿ.

ಯಮ:

ಯಮ

ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ. ಕಾಲಪುರುಷ ಎಂತಲೂ ಕರೆಯುತ್ತಾರೆ. ಈತ ದಕ್ಷಿಣ ದಿಕ್ಕಿನ ಅಧಿಪತಿ. ಇವನು ಸೂರ್ಯನ ಮಗ. ಶನಿಯ ತಮ್ಮ. ಈತನ ಆಯುಧ ದಂಡ. ಯಮ ಸಾವು ಮತ್ತು ನ್ಯಾಯದ ಹಿಂದೂ ದೇವರು, ಮತ್ತು ಅವನ ವಾಸಸ್ಥಾನವಾದ ಯಮಲೋಕದಲ್ಲಿ ಕಾನೂನು ಮತ್ತು ಪಾಪಿಗಳ ಶಿಕ್ಷೆಗೆ ಜವಾಬ್ದಾರನಾಗಿರುತ್ತಾನೆ.

ನಿಋುತಿ:

ನಿಋುತಿ

ನೈಋುತ್ಯ ದಿಕ್ಕಿನ ಒಡೆಯ. ನಿಋುತಿಯ ಆಯುಧ ಖಡ್ಗ. ದುಷ್ಟ ಶಕ್ತಿಗಳಿಂದ ರಕ್ಷಿಸುತ್ತಾನೆ. ನಿಋುತಿಯ ಆರಾಧನೆಯಿಂದ ದೀರ್ಘಾಯಸ್ಸು ಲಭಿಸುತ್ತದೆ.

ವಾಯು:

ವಾಯು

ವಾಯುವ್ಯ ದಿಕ್ಕಿನ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಇವನ ಆಯುಧ ಅಂಕುಶ. ಹನುಮನ ತಂದೆ. ಈತನನ್ನು ಪವನ, ಪ್ರಾಣ ಎಂತಲೂ ಕರೆಯುತ್ತಾರೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯವಾದ ವಿಭೂತಿಯೋಗದಲ್ಲಿ ಶ್ರೀಕೃಷ್ಣನು ತನ್ನ ಭಾವ ವಾಯುವಿನಂತೆ ಇದೆ ಎಂದು ಹೇಳುತ್ತಾನೆ.  ವೈದಿಕ ಗ್ರಂಥಗಳಲ್ಲಿ , ಅವನು ಪರಮಾತ್ಮನಾದ ವಿಶ್ವಪುರುಷನ ಉಸಿರಾಟದಿಂದ ಜನಿಸಿದನೆಂದು ಮತ್ತು ಸೋಮವನ್ನು ಸೇವಿಸಿದ ಮೊದಲನೆಯವನೆಂದು ಉಲ್ಲೇಖಿಸಲಾಗಿದೆ .

ಕುಬೇರ:

ಕುಬೇರ

ಕುಬೇರ ಮಿಶ್ರವಶುವಿನ ಮಗ. ಅಷ್ಟದಿಕ್ಪಾಲಕರಲ್ಲೊಬ್ಬ. ಉತ್ತರ ದಿಕ್ಕಿನ ಅಧಿಪತಿ. ಈತನ ಆಯುಧ ಗಧೆ. ಕುಬೇರ ಹಿಂದೂ ಪುರಾಣಗಳ ಪ್ರಕಾರ ಯಕ್ಷ ಮತ್ತು ಧನ ದೇವತೆ. ಇವರ ಮುಖ್ಯನಗರ ಅಲಕಾಪುರಿ. ಕುಬೇರ ಮಿಶ್ರವಶುವಿನ ಮಗ. ಮಿಶ್ರವಸು ಬ್ರಹ್ಮಪುತ್ರನಾಗಿದ್ದ ಪುಲಸ್ತ್ಯನ ಮಗ.

ವರುಣ:

ವರುಣ

ಹಿಂದೂ ಪುರಾಣಗಳ ಪ್ರಕಾರ ನೀರಿನ ದೇವತೆ. ಅಷ್ಟದಿಕ್ಪಾಲಕರಲ್ಲೊಬ್ಬ. ಪಶ್ಚಿಮ ದಿಕ್ಕಿನ ಅಧಿಪತಿ. ವರುಣನ ಆಯುಧ ಪಾಶ. ಅವನು ಮಕರ (ಮೊಸಳೆ) ಮೇಲೆ ಆರೋಹಿಸಲ್ಪಟ್ಟಿರುವ ಮತ್ತು ಪಾಶಾ (ಕುಣಿಕೆ, ಹಗ್ಗದ ಕುಣಿಕೆ) ಮತ್ತು ಅವನ ಕೈಯಲ್ಲಿ ಹೂಜಿಯನ್ನು ಹಿಡಿದಿರುವ ಯುವಕನಂತೆ ಚಿತ್ರಿಸಲಾಗಿದೆ.

ಈಶಾನ:

ಈಶಾನ

ಪಶ್ಚಿಮ ದಿಕ್ಕಿನ ಅಧಿಪತಿ. ಅಷ್ಟದಿಕ್ಪಾಲಕರಲ್ಲೊಬ್ಬ. ಇವನ ಆಯುಧ ತ್ರಿಶೂಲ. ಸಂಪತ್ತು, ಆರೋಗ್ಯ ಹಾಗೂ ಯಶಸ್ಸಿನ ದೇವತೆ. ಈತ ಜ್ಞಾನವನ್ನು ಕೊಟ್ಟು, ದುಃಖವನ್ನು ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ.

0Shares

Leave a Reply

error: Content is protected !!