ನಿತ್ಯ ಪಠಿಸಬೇಕಾದ ಮಂತ್ರಗಳು

0Shares

ನಮ್ಮ ಹಿಂದೂ ಸಂಪ್ರದಾಯಕ್ಕೆ ಆಳವಾದ ಬೇರು ಸಾವಿರಾರು ವರ್ಷಗಳ ಹಿಂದಿನಿಂದ ಭದ್ರ ಬುನಾದಿ ಹಾಕಿದೆ. ಇದಕ್ಕೆ ಸಾಕಷ್ಟು ಮಹತ್ವವೂ ಇದೆ. ಇದರ ತಳಹದಿಯಲ್ಲಿ ಬರುವುದೇ ಸ್ತ್ರೋತ್ರ, ಮಂತ್ರ ಪಠಣ, ಪಾರಾಯಣಗಳು.

ಪ್ರತಿನಿತ್ಯ ಬೆಳಗಿನಿಂದ ರಾತ್ರಿ ಮಲಗುವವರೆಗೂ ನಮ್ಮಲ್ಲಿ ಹೊಸ ಶಕ್ತಿ ಚೈತನ್ಯ ತುಂಬಲು, ಮನಸ್ಸು ನಿರಾಳವಾಗಲು, ಆರೋಗ್ಯ ಸುಧಾರಿಸಲು ಹಾಗೂ ಯಾವುದೇ ಅಡೆತಡೆ ಇಲ್ಲದೆ ಕೆಲಸ ಮುಂದೆ ಸಾಗಲು ಹೇಳುವ ಸಾವಿರಾರು ಶ್ಲೋಕಗಳಿವೆ.

ನಿತ್ಯ ಪಠಿಸಬೇಕಾದ ಮಂತ್ರಗಳು

ನಮ್ಮ ಸಂಸ್ಕೃತಿಯಲ್ಲಿರುವ ಹಲವು ನಿತ್ಯ ಪಠನಾ ಮಂತ್ರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇದರಲ್ಲಿ ಹಲವು ನಿಮಗೆ ಗೊತ್ತಿರುವುದೇ ಆಗಿದೆ. ಇದು ನಮ್ಮೆಲ್ಲರಿಗೂ ಬಹಳ ಉಪಯುಕ್ತವಾಗಿದೆ. ಚಿಕ್ಕ ಮಕ್ಕಳಿಗೂ ಸಹ ಚಿಕ್ಕ ವಯಸ್ಸಿನಲ್ಲೇ ಇದನ್ನು ಕಲಿಸುವುದರಿಂದ ನಮ್ಮ ಆಚಾರವನ್ನು ತಿಳಿಸಿದಂತಾಗುತ್ತದೆ.

ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ:

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿ |
ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂ ||

ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:

ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆ |
ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆ ||

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಮಂತ್ರ ಸ್ನಾನ:

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃ ||

ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ |
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇಪದೇ ||

ತ್ವಮೇವ ಮಾತಾಚ |

ಪಿತಾ ತ್ವಮೇವ |

ತ್ವಮೇವ ಬಂಧು|

ಸಖಾ ತ್ವಮೇವ |

ತ್ವಮೇವ ವಿದ್ಯಾಶ್ಚ |

ದ್ರವಿಣಂ ತ್ವಮೇವ |

ತ್ವಮೇವ ಸರ್ವಂ ಮಮ ದೇವ ದೇವ ||

ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ |
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ ||

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇ |
ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃ ||

ಸಂಕಷ್ಟದಲ್ಲಿರುವಾಗ ಪ್ರಾರ್ಥನೆ:

ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ |
ಋತುಪರ್ಣಸ್ಯ ರಾಜರ್ಷೆ ಕೀರ್ತನಂ ಕಲಿ ನಾಶನಂ ||

ಕ್ಷಮಾಪಣೆಗೆ ಹೇಳುವ ಮಂತ್ರ:

ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ |
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ ||

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ |
ತ್ರಾಹಿಮಾಂ ಕೃಪಯಾ ದೇವಶರಣಾಗತ ವತ್ಸಲ ||

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ |
ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ದನಃ ||

ಲೋಕ ಕಲ್ಯಾಣಕ್ಕೆ ಹೇಳುವ ಮಂತ್ರ:

ಸ್ವಸ್ತಿ ಪ್ರಜಾಭ್ಯ ಪರಿಪಾಲಯಂತಾಂ |
ನ್ಯಾಯೇನ ಮಾರ್ಗೆನ ಮಹೀಂ ಮಹೇಶಃ |
ಗೋಬ್ರಾಹ್ಮಣೇಭ್ಯೊ ಶುಭಮಸ್ತು ನಿತ್ಯಂ |
ಲೋಕಾ ಸಮಸ್ತ ಸುಖಿನೋ ಭವಂತು ||

ಆರತಿ ತೆಗೆದು ಕೊಳ್ಳುವಾಗ ಹೇಳುವ ಮಂತ್ರ:

ಶ್ರದ್ಧಾಂ ಮೇಧಾಂ ಯಶಃ ಪ್ರಜ್ಞಾಂ ವಿದ್ಯಾಂ ಬುದ್ಧಿಂ ಶ್ರೀಯಂ ಬಲಂ |

ಆಯುಷ್ಯಂ ತೇಜಃ ಆರೋಗ್ಯಂ ದೇಹಿ ಮೇ ಹವ್ಯವಾಹನ ||

ಜ್ಯೋತಿ ಬೆಳಗುವಾಗ ಹೇಳುವ ಮಂತ್ರ:

ದೀಪಂ ಜ್ಯೋತಿ ಪರಬ್ರಹ್ಮ ದೀಪೇನ ಸರ್ವತಮೋಪಃ |
ದೀಪೇನ ಸಾಧ್ಯತೇ ದೀಪಂ ಸಂಧ್ಯಾ ದೀಪಂ ನಮೋಸ್ತುತೇ ||

ಶುಭ ಪ್ರಯಾಣಕ್ಕೆ ಹೇಳುವ ಮಂತ್ರ:

ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ |
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ ||

ಚಿರಂಜೀವಿಗಳ ಸ್ಮರಿಸುವಿಕೆ:

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ |
ಕೃಪಃ ಪರುಶುರಾಮಚ ಸಪ್ತೈತೆ ಚಿರಜೀವಿನಃ ||

ಮಾತಾ ಪಿತೃಗಳ ಸ್ಮರಣೆ:

ಮಾತೃ ದೇವೊ ಭವಃ |

ಪಿತೃ ದೇವೋ ಭವಃ |

ಆಚಾರ್ಯ ದೇವೋ ಭವಃ |

ಅತಿಥಿ ದೇವೋ ಭವಃ ||

ಸರ್ಪ ಭಯಕ್ಕೆ ಹೇಳುವ ಮಂತ್ರ:

ಅನಂತಂ ವಾಸುಕಿಂ ಶೇಷಂ ಪದ್ಮನಾಭಂ ಚ ಕಂಬಲಂ |
ಶಂಖಪಾಲಂ ದೃತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ

ಅಶ್ವತ್ಥ ಪ್ರದಕ್ಷಿಣೆ ಸ್ತೋತ್ರ:

ಮೂಲತೋ ಬ್ರಹ್ಮರೂಪಾಯ |

ಮಧ್ಯತೋ ವಿಷ್ಣುರೂಪಿಣೇ |

ಅಗ್ರತಃ ಶಿವರೂಪಾಯ |

ಅಶ್ವತ್ಥಾಯ ನಮೋ ನಮಃ ||

ಶಾಂತಿ ಮಂತ್ರಗಳು:

ಓಂ ಅಸತೋಮಾ ಸದ್ಗಮಯ |
ತಮಸೋಮಾ ಜ್ಯೋತಿರ್ಗಮಯ |
ಮೃತ್ಯೋರ್ಮಾ ಅಮೃತಂಗಮಯಾ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಓಂ ಸಹನಾವವತು ಸಹನೌ ಭುನಕ್ತು ಸಹವೀರ್ಯಂ ಕರವಾವಹೈ |
ತೇಜಸ್ವಿನಾವದೀತಮಸ್ತು ಮಾವಿದ್ವಿಶಾವಹೈ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಮಲಗುವಾಗ ಹೇಳುವ ಮಂತ್ರ:

ರಾಮಂ ಸ್ಕಂದಂ ಹನೂಮನ್ತಂ ವೈನತೇಯಂ ವೃಕೋದರಂ |
ಶಯನೇಯಃ ಸ್ಮರೇನಿತ್ಯಂ ದುಸ್ವಪ್ನಂ ತಸ್ಯ ನಸ್ಯತಿಃ ||

ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ ಪಠಿಸಿ, ನಿಮ್ಮ ದಿನಚರಿಯಲ್ಲಿ, ಆರೋಗ್ಯದಲ್ಲಿ ವ್ಯತ್ಯಾಸವನ್ನು ಗಮನಿಸಿ.

0Shares

Leave a Reply

error: Content is protected !!