ಭೋಜನ ಕಾಲದಲ್ಲಿ ಬಡಿಸುವ ಕ್ರಮಾನುಸಾರವಾಗಿ ಭಗವಂತನ 24 ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.
1). ಉಪ್ಪು (ಸೌಗಂಧಿ ಸಹಿತ ಜನಾರ್ಧನ)
2). ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)
3). ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)
4). ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಶೀಕೇಷ)
5). ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
6). ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)
7). ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)
8). ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)
9). ಹೋಳಿಗೆ (ಕಮಲಾಲಯ ಮಧುಸೂದನ)
10). ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಆಧೊಷಜ)
11). ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12). ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)
13). ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)
14). ತೊವ್ವೆ (ಧಾನ್ಯ ಸಹಿತ ಶ್ರೀಧರ)
15). ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)
16). ಅನ್ನ (ಶ್ರೀಕೇಶವ)
17). ತುಪ್ಪ (ಪದ್ಮಾ ಸಹಿತ ಗೋವಿಂದ)
18). ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)
19). ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)
20). ಮೊಸರು (ವೃಕ್ಷಾಕಪಿ ಸಹಿತ ವಾಮನ)
21). ಕುಡಿಯುವ ನೀರು (ಶ್ರೀಕೃಷ್ಣ)
22). ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)
23). ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ)
24). ವೀಳ್ಯದೆಲೆ (ಶ್ರೀಹರಿ)
25). ಪಾನಕ – ನಿಂಬೆ (ವಿಶ್ವ)
ವಿಷಯಸೂಚಿ :
1). ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
2). ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.
ಗ್ರಂಥಋಣ:
1). ಜಗನ್ನಾಥದಾಸರ ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿಯಿಂದ ಆಯ್ದು, ಶ್ರೀ ಸಂಜೀವ ಮೂರ್ತಿದಾಸರು ಪ್ರಸ್ತುತ ಪಡಿಸಿದ ಪ್ರವಚನ.
2). ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ ಟಿಟಿಡಿ ಪ್ರಕಾಶಿಸಿದ “ಹರಿ ಭಜನೆ ಮಾಡೋ ನಿತಂತರ” ಪುಸ್ತಕ.
3). ಎಂ.ಕೃಷ್ಣರಾಯ “ಶ್ರೀ ಹರಿಕಥಾಮೃತಸಾರ ಸೌರಭ”.
4). ಶ್ರೀ ಮುರುಗೋಡು ದಾಸರ “ಭಜನ ಚಂದ್ರಿಕಾ”.