ಪುಷ್ಯ ಮಾಸದ ಶುಕ್ಲಪಕ್ಷ ಹುಣ್ಣಿಮೆಯನ್ನು ಬನದ ಹುಣ್ಣಿಮೆ ಅಥವಾ ಬನಶಂಕರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಅಷ್ಟಮಿಯಿಂದ ಹುಣ್ಣಿಮೆಯವರೆಗೂ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಬನದ ಹುಣ್ಣಿಮೆಯಂದು ರಾಜ್ಯದ ಎಲ್ಲಾ ಬನಶಂಕರಿ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಸೇರಿದಂತೆ ಬನಶಂಕರಿ ರಥೋತ್ಸವವೂ ನಡೆಯುತ್ತದೆ. ಈ ತಿಂಗಳಲ್ಲಿ ಕೆಲವೆಡೆ ಪುಷ್ಯ ಮಾಸದ ಶುಕ್ಲಪಕ್ಷದ ಅಷ್ಟಮೀ ದಿನದಿಂದ ಬನದ ಹುಣ್ಣಿಮೆಯ ನವರಾತ್ರಿಯನ್ನು ಆಚರಿಸುತ್ತಾರೆ. ಬನದ ಹುಣ್ಣಿಮೆಯಂದು ಪೂರ್ಣಾನಂದ ಸ್ವರೂಪಳಾದ ಬನಶಂಕರಿ ದೇವಿಯನ್ನು ಪೂಜಿಸಿದರೆ ಸಕಲ ಕಾರ್ಯಗಳು ಈಡೇರುವುದೆಂದೇ ನಂಬಿಕೆ.
ಬನಶಂಕರಿ ಅಥವಾ ಶಾಕಾಂಬರಿ – ಇದು ದುರ್ಗಾ ಮಾತೆಯ ಮತ್ತೊಂದು ಹೆಸರು. ಪುಷ್ಯಮಾಸದ ಶುದ್ಧ ಚತುರ್ದಶಿ ಮತ್ತು ಪೂರ್ಣಿಮೆಯಂದು ಬನಶಂಕರಿ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಈ ಪೂಜೆಯು 7 ದಿನಗಳ ಪರ್ಯಂತ ವಿಶೇಷವಾಗಿ ನಡೆಯುತ್ತದೆ – ಅಂದರೆ ಪುಷ್ಯ ಶುದ್ಧ ಅಷ್ಟಮಿಯಿಂದ ಹುಣ್ಣಿಮೆ ಪರ್ಯಂತ ಜರುಗುತ್ತದೆ. ಈ ಸಂದರ್ಭದಲ್ಲಿ ಪ್ರತಿಯೊಂದು ದಿನವೂ ನಿಷಿದ್ದವಲ್ಲದ ಒಂದೊಂದು ತರಕಾರಿ ಪಲ್ಯವನ್ನು ದುರ್ಗಾಮಾತೆಗೆ ನಿವೇದಿಸಲಾಗುತ್ತದೆ. ಆದ್ದರಿಂದಲೇ ಈ ವ್ರತಕ್ಕೆ ಶಾಕಾಂಬರಿ ವ್ರತವೆಂದು ಹೆಸರು. ಶಾಕ + ಅಂಬರಿ = ಶಾಕಾಂಬರಿ – ಯಾರು ಧರಿಸುತ್ತಾರೋ ಅವರೇ ಶಾಕಾಂಬರಿ. ಚತುರ್ದಶಿ – ಸರ್ವ ತರಕಾರಿಗಳನ್ನು ಸಮರ್ಪಿಸಲಾಗುತ್ತದೆ.
ಬನದ ಹುಣ್ಣಿಮೆ, ಜಾತ್ರೆ ವಿಶೇಷವಾಗಿ ನಡೆಸಲಾಗುತ್ತದೆ. ಈ ಉತ್ಸವವನ್ನು ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಮತ್ತು ರಾಜಾಸ್ಥಾನಗಳಲ್ಲಿ ಆಚರಿಸಲಾಗುತ್ತದೆ. ಪ್ರಮುಖ ಪ್ರಾಚೀನ ಶಾಕಾಂಬರಿ ದೇವಸ್ಥಾನಗಳು ಕರ್ನಾಟಕದ ಬಾದಾಮಿ ಮತ್ತು ಬೆಂಗಳೂರಿನಲ್ಲೂ, ಮಹಾರಾಷ್ಟ್ರದ ನಾಗೇವಾಡಿ, ಪುಣೆಯಲ್ಲೂ, ಉತ್ತರಪ್ರದೇಶದ ಶಹ್ರಾನ್ಪುರದಲ್ಲೂ, ರಾಜಸ್ಥಾನದ ಸಂಭಾರಿನಲ್ಲೂ, ಮತ್ತೂ ಜಾರ್ಖಂಡಿನಲ್ಲೂ ಕಾಣಬಹುದು. ಚತುರ್ದಶಿ ಮತ್ತು ಹುಣ್ಣಿಮೆಯಂದು 108 ತರಕಾರಿಗಳನ್ನು ಸಮರ್ಪಿಸುವ ಸಂಪ್ರದಾಯವಿದೆ. ಈದಿನ ಶಾಕಾಂಬರಿ ಹುಟ್ಟಿದ ದಿನ. ಸಾವಿರಾರು ವರ್ಷಗಳ ಹಿಂದೆ ದುರ್ಗಾಮಾಸುರನೆಂಬ ದೈತ್ಯನನ್ನು ಸಂಹರಿಸಲು, ಯಜ್ಞದಲ್ಲಿ ಉತ್ಪನ್ನಳಾದ ಶಕ್ತಿ ದೇವತೆಯೇ ಶಾಕಾಂಬರಿ. ಆ ಕಾಲದಲ್ಲಿ ಬಹಳ ದುರ್ಭಿಕ್ಷೆಯಿದ್ದರಿಂದ ತಾನು ಬರುವಾಗ ಹಲವಾರು ತರಕಾರಿಗಳನ್ನು ತಂದು ಜನರನ್ನು ಉದ್ಧರಿಸಿದ್ದಳು. ಆದ್ದರಿಂದ ಶಾಕಾಂಬರಿಯಾದಳು. ಈ ಹುಣ್ಣಿಮೆಯಂದು ದೀಪೋತ್ಸವ, ದೀಪದಾನಕ್ಕೆ ವಿಶೇಷ ಪ್ರಾಶಸ್ತ್ಯವನ್ನು ನೀಡಲಾಗಿದೆ.
ಪುಷ್ಯ ಮಾಸದ ಶುಕ್ಲಪಕ್ಷ ಹುಣ್ಣಿಮೆ ಸಮಯದಲ್ಲಿ ದೇವಿಯ ಪ್ರಾತಃ ಸ್ತವ ಸ್ತೋತ್ರ ಪಠಣಿ ಶ್ರೇಯಸ್ಕರ.
ಶ್ರೀ ಶಾಕಾಂಭರೀ ಸ್ತೋತ್ರಂ
ಧ್ಯಾನಂ:
ಶ್ರೀಂ ಶಾಕಂಭರೀ ನೀಲವರ್ಣಾ ನೀಲೋತ್ಪಲವಿಲೋಚನಾ|
ಗಂಭೀರನಾಭಿಸ್ತ್ರಿವಲೀ ವಿಭೂಷಿತ ತನೂದರೀ||
ಸುಕರ್ಕಶಸಮೋತ್ತುಂಗವೃತ್ತ ಘನಸ್ತನೀ|
ಮುಷ್ಟಿಂ ಶಿಲೀಮುಖೈಃ ಪೂರ್ಣಂ ಕಮಲಂ ಕಮಲಾಲಯಾ||
ಪುಷ್ಪ ಪಲ್ಲವ ಮೂಲಾದಿ ಫಲಾಢ್ಯಂ ಶಾಕಸಂಚಯಂ|
ಕಾಮ್ಯಾ ಅನಂತ ರಸೈರ್ಯುಕ್ತಂ ಕ್ಷುತ್ ತೃಷ್ಣ ಮೃತ್ಯುಜರಾಪಹಂ||
ಯಾ ಮಾಯಾ ಮಧುಕೈಟಭ ಪ್ರಶಮನೀ ಯಾ ಮಹಿಷೋನ್ಮೂಲಿನೀ
ಯಾ ಧೂಮ್ರೇಕ್ಷಣ ಚಂಡ-ಮುಂಡ ಮಥಿನೀ ಯಾ ರಕ್ತಬೀಜಾಶಿನೀ
ಶಕ್ತಿಃ ಶುಂಭ-ನಿಶುಂಭ ದರ್ಪದಮನೀ ಯಾ ಸಿದ್ಧಲಕ್ಷ್ಮೀ ಪರಾ
ಸಾ ಚಂಡೀ ನವಕೋಟಿ ಮೂರ್ತಿಸಹಿತಾ ಮಾಂ ಪಾಹಿ ವಿಶ್ವೇಶ್ವರೀ
ಬನಶಂಕರೀ ಪ್ರಾತಃಸ್ಮರಣ ಸ್ತೋತ್ರಂ:
ಪ್ರಾತಃ ಸ್ಮರಾಮಿ ತವ ಶಂಕರಿ ವಕ್ತ್ರಪದ್ಮಂ ಕಾಂತಾಲಕಂ ಮಧುರ ಮಂದಹಾಸಂ ಪ್ರಸನ್ನಂ
ಕಾಶ್ಮೀರ ದರ್ಪ ಮೃಗನಾಭೀ ಲಸಲ್ಲಲಾಟಂಲೋಕತ್ರಯಾ ಅಭಯದಾ ಚಾರು ವಿಲೋಚನಾಢ್ಯಂ
ಪ್ರಾತರ್ಭಜಾಮಿ ತವ ಶಂಕರಿ ಹಸ್ತವೃಂದಂಮಾಣಿಕ್ಯ ಹೇಮವಲಯಾದಿ ವಿಭೂಷಣಾಢ್ಯಂ
ಘಂಟಾ ತ್ರಿಶೂಲ ಕರವಾಲ ಸುಪುಸ್ತಖೇಟಪಾತ್ರೋತ್ತಮಾಂಗ ಡಮರು ಲಸಿತಂ ಮನೋಜ್ಞಂ
ಪ್ರಾತರ್ನಮಾಮಿ ತವ ಶಂಕರಿ ಪಾದಪದ್ಮಂ|
ಪದ್ಮೋದ್ಭವಾದಿ ಸುಮನೋಗಣ ಸೇವ್ಯಮಾನಂ||
ಮಂಜುಕ್ವಣಿತ ಕನಕ ನೂಪುರ ರಾಜಮಾನಂ|
ವಂದಾರು ವೃಂದ ಸುಖೀರುದಮಾರ್ಯ ಹೃದ್ಯಂ||
ಪ್ರಾತಃ ಸ್ತುವೇಚ ತವ ಶಂಕರೀ ದಿವ್ಯ ಮೂರ್ತಿಮ್|
ಕಾದಂಬಕಾನನಗತಾಂ ಕರುಣಾರಸಾರ್ದ್ರಂ||
ಕಲ್ಯಾಣಧಾಮ ನವನೀರದ ನೀಲಭಾಸಂ|
ಪಂಚಾಸ್ಯ ಅನಲಸಿತಾಂ ಪರಮಾರ್ತ್ರೀಹಂತ್ರೀಂ||
ಪ್ರಾತರ್ವದಾಮಿ ತವ ಶಂಕರೀ ದಿವ್ಯನಾಮಂ|
ಶಾಕಂಭರೀತಿ ಲಲಿತೇತಿ ಶತೇಕ್ಷಣೇತಿ||
ದುರ್ಗೇತಿ ದುರ್ಗಮಾಸುರನಾಶಿನೀತಿ|
ಶ್ರೀಃ ಮಂಗಲೇತಿ ಕಮಲೇತಿ ಮಹೇಶ್ವರೇತಿ||
ಯಃ ಶ್ಲೋಕ ಪಂಚಕಮಿದಂ ಪಠತಿ ಪ್ರಭಾತೇ |
ಶಾಕಂಭರೀ ಪ್ರಿಯಕರಂ ದುರಿತೌಘನಾಶನಂ||
ತಸ್ಮೈ ದದಾತಿ ಶಿವದಾ ವನಶಂಕರೀ ಸಾ|
ವಿದ್ಯಾಂ ಪ್ರಜಾಂ ಶ್ರಿಯಂ ಉದಾರಮತಿಂ ಸುಕೀರ್ತಿಮ್||