ಬೇಕಾಗುವ ಸಾಮಗ್ರಿಗಳು:
ಲೋಕಲ್ / ಬಾಂಬೆ ಉಪ್ಪಿಟ್ಟು ರವೇ – 1 ಕಪ್
ಈರುಳ್ಳಿ – 2 ದೊಡ್ಡದು
ಟೊಮೆಟೊ – 2 ದೊಡ್ಡದು
ಹಸಿಬಟಾಣಿ – 1/2 ಕಪ್
ಮಿಕ್ಕಿದ್ದೆಲ್ಲ ನಿಮ್ಮ ರುಚಿಗೆ ತಕ್ಕಷ್ಟು ಬೇಕಿದ್ರೆ ಬೀನ್ಸ್ ಕ್ಯಾರೆಟ್ ಕ್ಯಾಪ್ಸಿಕಂ ಕೂಡಾ ಸೇರ್ಸ್ಕೊಬೋದು(ಎಲ್ಲಾ ಸೇರಿ ಒಂದು ಕಪ್ ಸಾಕು)
ಮಾಡುವ ವಿಧಾನ:
ಮೊದಲು ರವೆಯನ್ನು 3 ಟೀ ಸ್ಪೂನ್ಎಣ್ಣೆ ಹಾಕಿ ಕೆಂಪಗೆ ಹುರ್ದುಕೊಂಡು, ತರಕಾರಿ ಈರುಳ್ಳಿ ಎಲ್ಲ ಹೆಚ್ಚಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವು, ಇಂಗು, ಈರುಳ್ಳಿ ಹುರಿದು ಅರಿಶಿಣ, ಹಸಿ ಶುಂಠಿ, ಸ್ವಲ್ಪ ಹುರಿದು ಟೊಮೆಟೊ, ಬಟಾಣಿ(ತರಕಾರಿ), ಉಪ್ಪು, ಸಾಂಬಾರ್ ಪುಡಿ, ವಾಂಗಿಬಾತ್ ಪುಡಿ(ಪುಡಿಗಳ ಬದಲು ಹಸಿ ಮೆಣಸಿನಕಾಯಿ ಹಾಕಬಹುದು) ಎಲ್ಲ ಹಾಕಿ ಮೆತ್ತಗೆ ಬೆಂದಾಗ, ಒಂದಕ್ಕೆರೆಡರಷ್ಟು ನೀರು ಹಾಕಿ ಕುದಿಯುವಾಗ ಮೆಲ್ಲಗೆ ಕಲಿಸುತ್ತಾ ರವೆಯನ್ನು ಸುರಿದು ಕೊನೆಗೆ ಕಾಯಿತುರಿ ಕೊತ್ತಂಬರಿ ಸೊಪ್ಪು ಹಾಕಿದ್ರೆ ಬಟಾಣಿ ಖಾರಬಾತ್ ಅಥವಾ ತರಕಾರಿ ಉಪೀಟ್ಟು ರೆಡಿ. ಉಪ್ಪಿನ್ಕಾಯಿಲ್ಲದೆ ಕೂಡಾ ಚೆನ್ನಾಗಿರುತ್ತೆ.