ನಿಮಗೆ ಹನುಮಚಾಲಿಸಗೊತ್ತಿದೆಯೇ ?

0Shares

ಹನುಮಚಾಲಿಸದಲ್ಲಿನ ಒಂದು ಶ್ಲೋಕದಲ್ಲಿ ಹೀಗೆ ಹೇಳಲಾಗಿದೆ,

युग सहस्र योजना पर भानु |

ल्लेल्यो ताहि मधु फल जानु ||
ಈ ಶ್ಲೋಕದಲ್ಲಿ , 1 ಯುಗ = 12000 ವರ್ಷಗಳು
1 ಸಹಸ್ರ = 1000
1 ಯೋಜನಾ = 8 ಮೈಲುಗಳು
युग x सहस्र x योजना = पर भानु (भानु = ಭೂಮಿ)
12,000 x 1,000 x 8 ಮೈಲುಗಳು = 9,6೦,೦೦,೦೦೦ ಮೈಲುಗಳು
1 ಮೈಲುಗಳು = 1.6 ಕಿಲೋಮೀಟರ್, 9,6೦,೦೦,೦೦೦ ಮೈಲುಗಳು = 9,6೦,೦೦,೦೦೦ x 1.6 ಕಿಲೋಮೀಟರ್ = 1,53,6೦,೦೦,೦೦೦ ಕಿಲೋಮೀಟರ್ ಹಾಗೆಯೇ ಅಮೇರಿಕಾದ “ನಾಸಾ” ವಿಜ್ಞಾನಿಗಳ ಪ್ರಕಾರ ಭೂಮಿಯಿಂದ ಸೂರ್ಯನಿಗೆ 1,53,6೦,೦೦,೦೦೦ ಕಿಲೋಮೀಟರ್ .

ಹಿಂದೆ ಹನುಮಂತನು (ಚಿಕ್ಕವನಿದ್ದಾಗ) ಆತನ ತಾಯಿ (ಅಂಜನಾ) ಹನುಮಂತನಿಗೆ ತಿನ್ನಲು ಹಣ್ಣನ್ನು ತರುವುದಕ್ಕಾಗಿ ಕಾಡಿಗೆ ಹೋಗಿರುತ್ತಾಳೆ, ಆ ಸಮಯದಲ್ಲಿ ಮಲಗಿದ್ದ ಹನುಮಂತನಿಗೆ ಎಚ್ಚರವಾಗಿ ಹೊರಬಂದು ಸಂಜೆಯ ಸೂರ್ಯನನ್ನು ನೋಡಿ ಸಿಹಿ ಹಣ್ಣು (मधु फल) ಎಂದು ತಿಳಿದು ಅದನ್ನು ತಿನ್ನಲು ಆಕಾಶಕ್ಕೆ ಜಿಗಿಯುತ್ತಾನೆ , ಆದ್ದರಿಂದ ಹನುಮಂತನ ಮೂತಿಯು ಕೆಂಪಾಗುತ್ತದೆ. ಇದನ್ನು ನಮ್ಮ ಪ್ರಾಚೀನ ಸಾಧು ಸಂತರು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಶ್ಲೋಕದ ರೀತಿಯಲ್ಲಿ ಹನುಮ ಚಾಲಿಸದಲ್ಲಿ ವಿವರಿಸಿದ್ದಾರೆ . ಹನುಮ ಚಾಲಿಸದಲ್ಲಿರುವ ಒಟ್ಟು 4೦ ಶ್ಲೋಕಗಳು ಹನುಮನ ಬಗ್ಗೆ ಇರುವುದರಿಂದ ಇದನ್ನು ಹನುಮ ಚಾಲಿಸಾ ಎಂದು ಕರೆಯಲಾಗಿದೆ.

ಹನುಮಚಾಲಿಸ

ನಮ್ಮ ಪ್ರಾಚೀನ ಗ್ರಂಥಗಳು, ಮೂಡನಂಬಿಕೆಗಳಿಲ್ಲದ ಸಂಪ್ರದಾಯಗಳು ಎಷ್ಟು ಸುಂದರವು, ನಿರ್ಧಿಷ್ಟವಾಗಿದ್ದವೆಂದರೆ ಸೂರ್ಯ ಮತ್ತು ಭೂಮಿ (भानु) ಯ ನಡುವೆ ಇರುವ ಅಂತರವನ್ನು ನಿಖರವಾಗಿ ಆಗಿನ ಕಾಲದಲ್ಲಿಯೇ (ರಾಮಾಯಣದ ಕಾಲ) ಹೇಳಲಾಗಿತ್ತು , ಆದೂ ಯಾವುದೇ ಉಪಕರಣಗಳ ಸಹಾಯವಿಲ್ಲದೆ ಹೇಳಲಾಗಿತ್ತು , ದುರಾದೃಷ್ಟವಶಾತ್ ನಮ್ಮ ಈ ಪ್ರಾಚೀನ ಭಾರತೀಯರ ಸಾಧನೆಯನ್ನು ತುಂಬಾ ಅಪರೂಪವಾಗಿ ಗುರುತಿಸಲಾಗುತ್ತಿದೆ, ನಮ್ಮ ಈಗಿನ ವಿಜ್ಞಾನ ಪುಸ್ತಕದಲ್ಲಿ ಸೂರ್ಯ ಮತ್ತು ಭೂಮಿಯ ನಡುವೆ ಇರುವ ಅಂತರವನ್ನು ಅಥವಾ ಅದಕ್ಕೆ ಸಂಬಂದಪಟ್ಟ ಯಾವುದೇ ವಿಷಯವನ್ನು ಕೂಡ ಪ್ರಸ್ತಾವನೆಯೇ ಮಾಡಿಲ್ಲ . (ಇದೆಂತಹ ಅಹಿತಕರ).

ಈಗಿನ ಇತಿಹಾಸ ಪುಸ್ತಕ ತೆಗೆದು ನೋಡಿದಾಗ (ಪ್ರಾಚೀನ ಇತಿಹಾಸ), ಆ ಕಾಲದಲ್ಲಿ, ಅಂದರೆ ಕಲ್ಲಿನ ಯುಗದಲ್ಲಿ ಆಗಿನ ಕಾಲದ ಭಾರತ(ಅಖಂಡ ಭಾರತ)ವು ಕಲ್ಲಿನ ಯುಗಕ್ಕಿಂತ ಮುಂದುವರೆದ ಪ್ರಪಂಚದ ಏಕೈಕ ಭೂಭಾಗವಾಗಿತ್ತು (ಅಂದರೆ ಬೇರೆ ಭೂಭಾಗಗಳಿಗಿಂತ ಮುಂದುವರೆದಿತ್ತು), ಇದೆ ನಮ್ಮ ಪ್ರಾಚೀನ ಭಾರತೀಯರ ಅಭೂತಪೂರ್ವ ಸಾಧನೆಗಳ ಕೈಗನ್ನಡಿ , ಹೀಗೆ ಪ್ರಾಚೀನ ಭಾರತೀಯರ ಸಾಧನೆಗಳನ್ನು ಹುಡುಕುತ್ತಾ ಹೋದರೆ ಅದು ನಿಲುಕದಸ್ಟಿದೆ .

0Shares

Leave a Reply

error: Content is protected !!