ಕೊಣಾಜೆ ಕಲ್ಲು – ಮೂಡುಬಿದಿರೆ

0Shares

ಮೂಡುಬಿದಿರೆಗೆ ಆಗಮಿಸುವವರಿಗೆ ಇಲ್ಲಿನ ಯಾವ ದಿಕ್ಕಿನಲ್ಲಿ ಬಂದರೂ ಎರಡು ಬೃಹದಾಕಾರದ ಬಂಡೆಗಳು ಕಾಣಸಿಗುತ್ತದೆ, ಇದು ಕೊಣಾಜೆ ಕಲ್ಲು ಎಂದೇ ಪ್ರಸಿದ್ಧಿಯನ್ನು ಪಡೆದಿದ್ದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಮೂಡುಬಿದಿರೆಯಿಂದ ಶಿರ್ತಾಡಿ ರಸ್ತೆಯಲ್ಲಿ ಸುಮಾರು 5 ಕಿ.ಮೀ ಕ್ರಮಿಸಿದಾಗ ಹೌದಲ್ ಸಿಗುತ್ತದೆ ಇಲ್ಲಿಂದ 1 ಕಿ.ಮೀ ಮುಂದೆ ಪ್ರಾಯಾಣ ಮಾಡಿದಾಗ ಎರಡು ಬೃಹದಾಕಾರದ ಕಲ್ಲುಗಳು ಕಂಡುಬರುತ್ತದೆ. ಕೊಣಾಜೆಯ ಅವಳಿ ಶಿಖರಗಳು ಅಂತಲೂ ಕರೆಯಬಹುದು ಮತ್ತು ಈ ಅವಳಿ ಶಿಖರಗಳನ್ನು ಶಿವ ಪಾರ್ವತಿ ಅಂತಲೂ ವರ್ಣಿಸುತ್ತಾರೆ.

ಕೊಣಾಜೆ ಕಲ್ಲು

ಇದೊಂದು ಬೆಟ್ಟವಾದ ಕಾರಣ 3 ಕಿ. ಮೀ ಕಾಲ್ನಡಿಗೆ ಮೂಲಕ ತಲುಪಿದಾಗ ಮುಂದೆ ಸಿಗುವ ಬೃಹದಾಕಾರದ ಗ್ರಾನೈಟ್ ಕಲ್ಲುಗಳ ಅಡಿಪಾಯದಲ್ಲಿ ತಲೆ ಎತ್ತಿ ಎತ್ತಿ ನಿಂತಿರುವ ಗುರು ಸಾನಿಧ್ಯ ಪೀಠವೇ ಕೊಣಾಜೆ ಕಲ್ಲು ಸಿದ್ದಾಶ್ರಮ.ಗುಹೆಗಳು ಮೊದಲಿನಿಂದಲೂ ಮನುಷ್ಯನಿಗೆ ಕುತೂಹಲ ಕೆರಳಿಸುವ ರಚನೆಗಳಾಗಿವೆ ಕೆಲ ಗುಹೆಗಳನ್ನು ಮಾನವ ವಾಸಕ್ಕೆಂದು ನಿರ್ಮಿಸಿಕೊಂಡಿದ್ದಾರೆ ಇನ್ನು ಕೆಲ ಗುಹೆಗಳಂತೂ ದೇವರಿಗೆ ಮುಡಿಪಾಗಿದ್ದವು. ಅದೆಷ್ಟೋ ಗುಹಾ ದೇವಾಲಯಗಳು ಪುರಾತನ ಕಾಲದಲ್ಲಿ ನಿರ್ಮಿಸಲ್ಪಟ್ಟಿವೆ. ಅಂತದರಲ್ಲಿ ಕೊಣಾಜೆ ಕಲ್ಲು ಸಿದ್ದಾಶ್ರಮ ಐತಿಹಾಸಿಕ ಹಿನ್ನೆಲೆಯುಳ್ಳ ಗುಹಾ ದೇವಾಲಯ ಆಗಿದೆ.

ಕೊಣಾಜೆ ಕಲ್ಲು ಗುಹಾ ದೇವಾಲಯ

ಕೊಣಾಜೆ ಕಲ್ಲು ಗುಹಾ ದೇವಾಲಯ ಕೊಣಾಜೆ

ಇಲ್ಲಿಯ ವಿಶೇಷತೆಗಳು ಗುಹಾದಲ್ಲಿರುವ ಬ್ರಿಗೂ ಮಹರ್ಷಿಯ ಸಮಾಧಿ, ಶಾರದಾ ದಾಸ್ ಸ್ವಾಮೀಜಿಯ ಸಮಾಧಿ, ಕೇಶವ ದಾಸ್ ಸ್ವಾಮೀಜಿಯವರ ಸಮಾಧಿ ಉದ್ಭವ ಮೂರ್ತಿ ಶ್ರೀ ವನದುರ್ಗ ದೇವಿಯ ಗುಹಾ ಶ್ರೀ ಭದ್ರಕಾಳಿ ಗುಹಾ,ಭದ್ರಕಾಳಿ ಗುಹಾದೊಳಗೆ ಇರುವ ಭಸ್ಮ ಕೊಳ (ಈ ಕೊಳದಲ್ಲಿ ತನ್ನಿಂತಾನೇ ಉತ್ಪತ್ತಿಯಾಗುವ ಭಸ್ಮ ಮತ್ತು ಉಬ್ಬಸ ಖಾಯಿಲೆ ಇರುವರು ಇದರ ತೀರ್ಥವನ್ನು ತೆಗೆದುಕೊಂಡರೆ ಉಬ್ಬಸ ರೋಗ ವಾಸಿಯಾಗುತ್ತದೆ) ಇದು ಇಲ್ಲಿಯ ಮತ್ತೊಂದು ವಿಶೇಷತೆ. ಕ್ಷೇತ್ರದ ಮಂಗಗಳಿಗೆ ನ್ಯವೇದ್ಯ್ಯ ನೀಡುವುದು ಇಲ್ಲಿಯ ಮೂಲ ಹರಕೆ ಆಗಿದೆ. ಇನ್ನೂ ಹೆಚ್ಚಿನ ಇತಿಹಾಸವನ್ನು ಮತ್ತು ಪ್ರಕೃತಿಯ ಸೌಂದರ್ಯ ತಿಳಿಯಬೇಕಾದರೆ ನೀವು ಒಮ್ಮೆಯಾದರೂ ಕ್ಷೇತ್ರಕ್ಕೆ ಭೇಟಿ ನೀಡಲೇಬೇಕು.

0Shares

Leave a Reply

error: Content is protected !!