ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(11). ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಈ ದಿನವನ್ನು ‘ಹರಿದಿನ’ ಎಂತಲೂ ಕರೆಯುವರು. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಅಮವಾಸ್ಯೆಯ ನಂತರ ಬರುವ ಏಕಾದಶಿಯನ್ನು ಶುಕ್ಲ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಹಾಗೆಯೇ ಹುಣ್ಣಿಮೆ ಬರುವ ಏಕಾದಶಿಯನ್ನು ಕೃಷ್ಣ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನ ಆಹಾರವನ್ನು ತ್ಯಜಿಸಿ ದೇವರ ಧ್ಯಾನದಲ್ಲಿ ತೊಡಗಿದರೆ ವಿಶೇಷ ಫಲ ದೊರೆಯುತ್ತದೆ ಎಂಬುದು ನಿಯಮ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ 9 ಘಂಟೆಯೊಳಗಾಗಿ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.  ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.

2023 – 2024ರ ಏಕಾದಶಿ ತಿಥಿಗಳು:

ಚೈತ್ರ ಮಾಸ

ದಿನಾಂಕ

ವಾರ

ಪಕ್ಷ

ಏಕಾದಶಿ ತಿಥಿ

 01 ಏಪ್ರಿಲ್ 2023 ಶನಿವಾರ ಶುಕ್ಲ ಪಕ್ಷ ಕಾಮದಾ
16 ಏಪ್ರಿಲ್ 2023 ಆದಿತ್ಯವಾರ ಕೃಷ್ಣಪಕ್ಷ ವರೂಥಿನಿ 

ವೈಶಾಖ ಮಾಸ

01 ಮೇ 2023 ಸೋಮವಾರ  ಶುಕ್ಲ ಪಕ್ಷ ಮೋಹಿನೀ
15 ಮೇ 2023 ಸೋಮವಾರ  ಕೃಷ್ಣಪಕ್ಷ ಅಪರಾ

ಜ್ಯೇಷ್ಠ ಮಾಸ

31 ಮೇ 2023 ಬುಧವಾರ ಶುಕ್ಲ ಪಕ್ಷ ನಿರ್ಜಲಾ
14 ಜೂನ್ 2023 ಬುಧವಾರ ಕೃಷ್ಣಪಕ್ಷ ಯೋಗಿನೀ

ಆಷಾಢ ಮಾಸ

29 ಜೂನ್ 2023 ಗುರುವಾರ ಶುಕ್ಲ ಪಕ್ಷ ಶಯನೀ
13 ಜುಲೈ 2023 ಗುರುವಾರ ಕೃಷ್ಣಪಕ್ಷ ಕಾಮಿಕಾ

ಅಧಿಕ ಶ್ರಾವಣ ಮಾಸ

29 ಜುಲೈ2023 ಶನಿವಾರ ಶುಕ್ಲ ಪಕ್ಷ  ಕಮಲಾ
12 ಆಗಸ್ಟ್ 2023 ಶನಿವಾರ ಕೃಷ್ಣಪಕ್ಷ  ಪದ್ಮಾ

ನಿಜ ಶ್ರಾವಣ ಮಾಸ

27 ಆಗಸ್ಟ್ 2023 ಆದಿತ್ಯವಾರ ಶುಕ್ಲ ಪಕ್ಷ ಪವಿತ್ರಾ
10 ಸೆಪ್ಟೆಂಬರ್ 2023 ಆದಿತ್ಯವಾರ ಕೃಷ್ಣಪಕ್ಷ ಅಜಾ

ಭಾದ್ರಪದ ಮಾಸ

26 ಸೆಪ್ಟೆಂಬರ್ 2023 ಮಂಗಳವಾರ ಶುಕ್ಲ ಪಕ್ಷ ಪಾರ್ಶ್ವಪರಿವರ್ತಿನೀ
10 ಅಕ್ಟೋಬರ್ 2023 ಮಂಗಳವಾರ ಕೃಷ್ಣಪಕ್ಷ ಇಂದಿರಾ

ಆಶ್ವಯುಜ ಮಾಸ

25 ಅಕ್ಟೋಬರ್ 2023 ಬುಧವಾರ ಶುಕ್ಲ ಪಕ್ಷ ಪಾಶಾಂಕುಶಾ
09 ನವಂಬರ್ 2023 ಗುರುವಾರ ಕೃಷ್ಣಪಕ್ಷ ರಮಾ

ಕಾರ್ತೀಕ ಮಾಸ

23 ನವಂಬರ್ 2023 ಗುರುವಾರ ಶುಕ್ಲ ಪಕ್ಷ ದೇವಪ್ರಬೋಧಿನೀ
09 ಡಿಸೆಂಬರ್ 2023 ಶನಿವಾರ ಕೃಷ್ಣಪಕ್ಷ ಉತ್ಪತ್ತಿಕಾ

ಮಾರ್ಗಶಿರ ಮಾಸ

23 ಡಿಸೆಂಬರ್ 2023 ಶನಿವಾರ ಶುಕ್ಲ ಪಕ್ಷ ಮೋಕ್ಷದಾ
07 ಜನವರಿ 2024 ಆದಿತ್ಯವಾರ ಕೃಷ್ಣಪಕ್ಷ ಸಫಲಾ

ಪುಷ್ಯ(ಪೌಷ) ಮಾಸ

21 ಜನವರಿ 2024 ಆದಿತ್ಯವಾರ ಶುಕ್ಲ ಪಕ್ಷ ಪುತ್ರದಾ
06 ಫೆಬ್ರವರಿ 2024 ಮಂಗಳವಾರ ಕೃಷ್ಣಪಕ್ಷ ಷಟ್ತಿಲಾ

ಮಾಘ ಮಾಸ

20 ಫೆಬ್ರವರಿ 2024 ಮಂಗಳವಾರ ಶುಕ್ಲ ಪಕ್ಷ ಜಯಾ
07 ಮಾರ್ಚ್ 2024 ಗುರುವಾರ ಕೃಷ್ಣಪಕ್ಷ ವಿಜಯಾ

ಫಾಲ್ಗುಣ ಮಾಸ

20 ಮಾರ್ಚ್ 2024 ಬುಧವಾರ ಶುಕ್ಲ ಪಕ್ಷ ಆಮಲಕೀ
05 ಏಪ್ರಿಲ್ 2024 ಶುಕ್ರವಾರ ಕೃಷ್ಣಪಕ್ಷ ಪಾಪಮೋಚನೀ

ಚೈತ್ರ ಮಾಸ

19 ಏಪ್ರಿಲ್ 2024 ಶುಕ್ರವಾರ ಶುಕ್ಲ ಪಕ್ಷ ಕಾಮದಾ