ಶ್ರೀರಾಮ ನವಮಿ ಹಬ್ಬದ ಮಹತ್ವ ಮತ್ತು ಆಚರಣೆ

15Shares

ಶ್ರೀರಾಮ ನವಮಿ ಶ್ರೀರಾಮನ ಜನ್ಮ ದಿನ. ಮಹಾವಿಷ್ಣುವಿನ ಏಳನೇಯ ಅವತಾರವಾದ ಶ್ರೀರಾಮನು ಜನಿಸಿದ ನವಮಿಯಂದು ಈ ಹಬ್ಬ ಆಚರಿಸಲಾಗುತ್ತದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ದಿನ ಪುಷ್ಯಾ ನಕ್ಷತ್ರದಲ್ಲಿ ಮಧ್ಯಾಹ್ನದ ವೇಳೆಯಲ್ಲಿ ಕರ್ಕಾಟಕ ಲಗ್ನದಲ್ಲಿ ಅಯೋಧ್ಯೆಯಲ್ಲಿ ರಾಮನು ಜನಿಸಿದನೆಂಬ ನಂಬಿಕೆ ಇದೆ.

ಶ್ರೀರಾಮ ನವಮಿ ಆಚರಣೆ ದಿನ:

 ಮಾರ್ಚ್ 3೦ 2023, ಗುರುವಾರ

ಧರ್ಮ ಶಾಸ್ತ್ರಗಳ ಪ್ರಕಾರ, ಅಯೋಧ್ಯೆಯ ರಾಜನಾದ ದಶರಥನಿಗೆ ಕೌಸಲ್ಯಾ, ಕೈಕೇಯೀ ಹಾಗೂ ಸುಮಿತ್ರೆ ಮೂರು ಜನ ಪತ್ನಿಯರಿದ್ದರು. ಆದರೆ ಯಾರಿಗೂ ಪುತ್ರ ಸಂತಾನವಾಗಿರಲಿಲ್ಲ. ನಂತರ ದಶರಥನು ಋಷಿಮುನಿಗಳ ಸಲಹೆಯಂತೆ ಪುತ್ರಕಾಮೇಷ್ಠಿ ಯಾಗವನ್ನು ಮಾಡಿಸಿದ. ಈ ಯಜ್ಞದಿಂದ ಸಂತುಷ್ಟನಾದ ಪ್ರಜಾಪತಿಯು ದಶರಥನಿಗೆ ದಿವ್ಯಪಾಯಸವನ್ನು ನೀಡುತ್ತಾನೆ. ಈ ದಿವ್ಯ ಪಾಯಸವನ್ನು ದಶರಥನು ತನ್ನ ಮೂವರು ಪತ್ನಿಯರಿಗೂ ಹಂಚುತ್ತಾನೆ. ಇದರಂತೆ ಚೈತ್ರ ಮಾಸದ ಶುಕ್ಲಪಕ್ಷದ ನವಮಿ ತಿಥಿಯಂದು ಮಧ್ಯಾಹ್ನ ಪುನರ್ವಸು ನಕ್ಷತ್ರದಲ್ಲಿ ಕೌಸಲ್ಯೆಗೆ ರಾಮನೂ, ಪುಷ್ಯನಕ್ಷತ್ರದ ದಶಮಿಯಂದು ಸೂರ್ಯೋದಯಕ್ಕೆ ಮುನ್ನ ಕೈಕೇಯಿಗೆ ಭರತನೂ, ಅದೇ ದಿನ ಆಶ್ಲೇಷಾ ನಕ್ಷತ್ರದಲ್ಲಿ ಮಧ್ಯಾಹ್ನ ಲಕ್ಷ್ಮಣ, ಶತ್ರುಘ್ನರೂ ಜನಿಸುತ್ತಾರೆ. ಹೀಗೆ ರಾಮನು ಜನಿಸಿದ ನವಮಿಯಂದು ರಾಮನವಮಿಯನ್ನಾಗಿ ಆಚರಿಸುತ್ತಾರೆ.

ಶ್ರೀರಾಮ ನವಮಿ

ಶ್ರೀರಾಮ ನವಮಿ ಆಚರಣೆ:

ಈ ದಿನವನ್ನು ರಾಮನ ಕಥಾ ವಾಚನಗೋಷ್ಠಿಗಳು, ಹಿಂದೂ ಪವಿತ್ರ ಮಹಾಕಾವ್ಯವಾದ ರಾಮಾಯಣ ಸೇರಿದಂತೆ ರಾಮನ ಕಥೆಗಳನ್ನು ಓದಿ ಅನುಸರಿಸಲಾಗಿದೆ. ಈ ದಿನದಂದು ಕೆಲವು ವೈಷ್ಣವ ಹಿಂದೂಗಳು ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಇತರರು ತಮ್ಮ ಮನೆಯಲ್ಲಿಯೇ ಪ್ರಾರ್ಥಿಸುತ್ತಾರೆ ಮತ್ತು ಕೆಲವರು ಪೂಜೆ ಮತ್ತು ಆರತಿಯ ಭಾಗವಾಗಿ ಸಂಗೀತದೊಂದಿಗೆ ಭಜನೆ ಅಥವಾ ಕೀರ್ತನೆಯಲ್ಲಿ ಭಾಗವಹಿಸುತ್ತಾರೆ. ಕೆಲವು ಭಕ್ತರು ಶಿಶು ರಾಮನ ಸಣ್ಣ ಪ್ರತಿಮೆಗಳನ್ನು ತೆಗೆದುಕೊಂಡು ಅದಕ್ಕೆ ಅಭಿಷೇಕವನ್ನು ಮಾಡಿ, ವಸ್ತ್ರವನ್ನು ತೊಡಿಸಿ ನಂತರ ಅದನ್ನು ತೊಟ್ಟಿಲಲ್ಲಿ ಇರಿಸುವ ಮೂಲಕ ಪೂಜಿಸುತ್ತಾರೆ. ದತ್ತಿ ಕಾರ್ಯಕ್ರಮಗಳು ಮತ್ತು ಹಲವು ಸಮುದಾಯಗಳಲ್ಲಿ ಭೋಜವನ್ನೂ ಆಯೋಜಿಸಲಾಗುತ್ತದೆ. ಈ ಹಬ್ಬವು ಅನೇಕ ಹಿಂದೂಗಳಿಗೆ ನೈತಿಕ ಪ್ರತಿಬಿಂಬದ ಒಂದು ಸಂದರ್ಭವಾಗಿದೆ. ಕೆಲವರು ಈ ದಿನದಂದು ವ್ರತ (ಉಪವಾಸ) ಮಾಡುತ್ತಾರೆ.

ಈ ದಿನದ ಪ್ರಮುಖ ಆಚರಣೆಗಳು ಅಯೋಧ್ಯೆ ಮತ್ತು ಸೀತಾ ಸಮಾಹಿತ್ ಸ್ಥಲ್ (ಉತ್ತರ ಪ್ರದೇಶ), ಸೀತಮಾರ್ಹಿ (ಬಿಹಾರ), ಜನಕ್ಪುರ್ಧಮ್ (ನೇಪಾಳ), ಭದ್ರಾಚಲಂ (ತೆಲಂಗಾಣ), ಕೋದಂಡರಾಮ ದೇವಸ್ಥಾನ, ವೊಂಟಿಮಿಟ್ಟಾ (ಆಂಧ್ರಪ್ರದೇಶ) ಮತ್ತು ರಾಮೇಶ್ವರಂ(ತಮಿಳುನಾಡು)ನಲ್ಲಿ ಕಾಣಬಹುದು. ರಥಯಾತ್ರೆಗಳು, ರಥದ ಶೋಭಯಾತ್ರೆ ಎಂದೂ ಕರೆಯಲ್ಪಡುವ ರಥದ ಮೆರವಣಿಗೆಗಳಲ್ಲಿ ಸೀತೆ, ಅವರ ಸಹೋದರ ಲಕ್ಷ್ಮಣ ಮತ್ತು ಹನುಮಾನ್ ಇವರನ್ನು ಹಲವಾರು ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಅಯೋಧ್ಯೆಯಲ್ಲಿ, ಅನೇಕರು ಪವಿತ್ರವಾದ ಸರಯು ನದಿಯಲ್ಲಿ ಸ್ನಾನ ಮಾಡಿ ನಂತರ ರಾಮನ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.

See also  ವಿಭೀಷಣನ ದೇಗುಲ - ರಾಮೇಶ್ವರಂ

ಉತ್ತರ ಭಾರತದಲ್ಲಿ ರಾಮ ನವಮಿಯನ್ನು ರಾಮದೇವರ ಹುಟ್ಟುಹಬ್ಬವೆಂದು ಆಚರಣೆ ಮಾಡುತ್ತಾರೆ. ಆದರೆ ದಕ್ಷಿಣ ಭಾರತದಲ್ಲಿ ರಾಮ ಸೀತೆಯರ ವಿವಾಹದ ದಿನವಾಗಿ ರಾಮ ನವಮಿಯನ್ನು ಆಚರಣೆ ಮಾಡುತ್ತಾರೆ. ಮಹಿಮಾನ್ವಿತ ದೇವತೆಗಳ ದೈವಿಕ ಬಂಧವಾಗಿ ರಾಮನವಮಿಯನ್ನು ಅವರು ಆಚರಿಸುತ್ತಾರೆ. ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ನವಮಿವರೆಗೆ ರಾಮಾಯಣ ಪಾರಾಯಣ ಮಾಡಿ, ನವಮಿ ದಿನ ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಹಬ್ಬವನ್ನು ಮುಗಿಸುತ್ತಾರೆ. ಹೀಗೆ 9 ದಿನದ ರಾಮೋತ್ಸವ ಮಾಡುತ್ತಾರೆ. ರಾಮ ಮನೆದೇವರು ಇರುವವರು ಒಂಭತ್ತು ದಿನದ ಹಬ್ಬ ಮಾಡುತ್ತಾರೆ. ರಾಮನವಮಿ ಹಬ್ಬ ಆಚರಿಸಲು ತುಂಬ ಪರಿಕರಣೆ ಯಾವುದು ಇಲ್ಲ, ಇದು ಸರಳವಾದ ಹಬ್ಬ.

ಶ್ರೀರಾಮನವಮಿಯ ಮಹತ್ವ:

ಹಿಂದೂ ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ನಾಲ್ಕು ಯುಗಗಳಲ್ಲಿ ಒಂದಾದ ತ್ರೇತಾಯುಗದಲ್ಲಿ ರಾಮನು ಜನಿಸಿದನು. ಈ ದಿನ ಶ್ರೀರಾಮನನ್ನು ಪೂಜಿಸಿದರೆ ಕೆಟ್ಟ ಶಕ್ತಿಗಳು ನಿವಾರಣೆಯಾಗಿ, ಭೂಮಿಯ ಮೇಲೆ ದೈವೀಕ ಶಕ್ತಿಯು ನೆಲೆಸುತ್ತದೆ. ಈ ಹಬ್ಬದ ಮಹತ್ವವು ದುಷ್ಟರ ಮೇಲೆ ಒಳ್ಳೆಯತನದ ವಿಜಯ, ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ.

ಧಾರ್ಮಿಕ ನಂಬಿಕೆಯ ಪ್ರಕಾರ ದೇವತೆಗಳು ಹಾಗೂ ದೇವರುಗಳು ಅವತಾರ ತಾಳಿದ ದಿನದಂದು ಭೂಮಿಯ ಮೇಲೆ ಅವರ ದೈವೀ ತತ್ವಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ. ಶ್ರೀರಾಮ ನವಮಿಯಂದು ಶ್ರೀರಾಮತತ್ವವು ಎಂದಿಗಿಂತಲೂ ಸಾವಿರಪಟ್ಟು ಹೆಚ್ಚು ಭೂಮಿಯಲ್ಲಿ ಕಾರ್ಯನಿರತವಾಗಿರುತ್ತದೆ. ಹೀಗಾಗಿ ಈ ದಿನ ರಾಮನಾಮ ಜಪ, ಶ್ರೀರಾಮನ ಉಪಾಸನೆಗಳನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.

ಶ್ರೀರಾಮ ನವಮಿಗೆ ಮಾಡುವ ವಿಶೇಷ ಆಹಾರ ಪದಾರ್ಥಗಳು:

  • ಪಾನಕ
  • ತಮಿಳುನಾಡಿನಲ್ಲಿ ನೀರ್ ಮೋರ್ (ಮಜ್ಜಿಗೆ)
  • ಕೋಸಂಬರಿ
  • ಫಲಾಹಾರ
  • ತೆಂಗಿನಕಾಯಿಯ ಲಡ್ಡು
  • ಕಾಜು ಬರ್ಫಿ
  • ತೊಗರಿಬೇಳೆಯ ಹಲ್ವಾ
  • ಪಂಚಾಮೃತಂ
  • ಸಬ್ಬಕ್ಕಿಯ ಪಾಯಸ
  • ಎಳ್ಳುಂಡೆ
  • ಅಪ್ಪ
15Shares

Leave a Reply

error: Content is protected !!