ಬಂದಾಳು ನಮ್ಮ ಮನೆಗೆ – ಸಾಹಿತ್ಯ

0Shares

ರಚನೆ: ಪುರಂದರದಾಸರು

ಬಂದಾಳು ನಮ್ಮ ಮನೆಗೆ |
ಶ್ರೀ ಮಹಾಲಕ್ಷ್ಮಿ ಸಂಜೆಯ ಹೊತ್ತಿನಲ್ಲಿ || ಪ ||

ಬಂದಾಳು ನಮ್ಮ ಮನೆಗೆ ನಿಂದಾಳು ಗೃಹದಲ್ಲಿ |
ನಂದ ಕಂದನ ರಾಣಿ ಇಂದಿರೇಶನ ಸಹಿತ || ಅ.ಪ ||

ಹೆಜ್ಜೆಯ ಮೇಲೆ ಹೆಜ್ಜೆ ನಿಕ್ಕುತ
ಗೆಜ್ಜೆಯ ಕಾಲ ಘಲ್ ಘಲ್ ಘಲುರೆನುತ |
ಮೂರ್ಜಗವ ಮೋಹಿಸುತ್ತ ಮುರಹರನ ರಾಣಿಯು
ಸಂಪತ್ತು ಕೊಡಲಿಕ್ಕೆ ವೆಂಕಟೇಶನ ಸಹಿತ || ೧ ||

ಪ್ರತಿ ದಿನ ಸಂಜೆಯಲ್ಲಿ
ಶ್ರೀ ಮಹಾಲಕ್ಷ್ಮಿ ನಗುತ ಕುಳಿತಿರಲು |
ಭೂಸುರರೆಲ್ಲಾ ಸೇರಿ ಸಾಸಿರ ನಾಮ ಪಾಡಿ
ವರವ ನೀಡುವಳು ತಾಯಿ ವಾಸುದೇವನ ಸಹಿತ || ೨ ||

ಕನಕವಾಯಿತು ಮಂದಿರ ಜನನಿ ಬರಲು
ಜಯ ಜಯ ಜಯವೆನ್ನಿರೋ |
ಸನಕಾದಿ ಮುನಿಗಳ ಸೇವೆಯನು ಸ್ವೀಕರಿಸಿ
ಕನಕವಲ್ಲಿಯು ತನ್ನ ಕಾಂತನ ಕೂಡಿಕೊಂಡು || ೩ ||

ಉಟ್ಟ ಪೀತಾಂಬರವು ಹೊಳೆಯುತ್ತಾ
ತೊಟ್ಟ ಕಂಕಣ ಕೈಪಿಡಿಯುತ್ತಾ  |
ಸೃಷ್ಟಿಗೊಡೆಯಾ ನಮ್ಮ ಪುರಂದರವಿಠಲನ
ಪಟ್ಟದ ಅರಸಿ ನಮಗೆ ಇಷ್ಟಾರ್ಥ ಕೊಡಲಿಕೆಂದು || ೪ ||

Click here for English lyrics

ಗಾಯಕರು: ಯು ಶಾಂತ

0Shares
See also  ಬಂದಾ ಮನ್ಮಾನಸಕೆ ಶ್ರೀಹರಿ - ಸಾಹಿತ್ಯ

No Responses

Leave a Reply

error: Content is protected !!