ರಚನೆ: ವಾದಿರಾಜರು
ಗೋವಿಂದ ಗೋಪಾಲ ಗೋಪಿಕಾ ವಲ್ಲಭ
ಗೋವರ್ಧನೋದ್ಧಾರಕ ಗೋವರ್ಧನೋದ್ಧಾರಕ || ಪ ||
ನಾರಾಯಣ ಅಚ್ಯುತ ನರ ಮೃಗ ರೂಪಾ,
ಶ್ರೀಪತಿ ಶೌರಿ ಹರಿ |
ವಾರಿಜೋದ್ಭವ ವಂದ್ಯಾ ವಂದಿತ ಚರಿತ್ರಾ,
ಪುರಮರ್ಧನ ಮಿತ್ರ ಪರಮ ಪವಿತ್ರ || ೧ ||
ಗರುಡಗಮನ ತುರಗ ಕಲ್ಯಾಣ |
ಗುಣಗಣ ನಿರುಪಮಾ ಲಾವಣ್ಯ ನಿರ್ಮಲ
ಶರಣ್ಯ ಪರಮ ಮುನಿವರೆಣ್ಯ
ಭಕ್ತಲೋಕ ಕಾರುಣ್ಯ || ೨ ||
ಇನಾ ಶಶಿ ಲೋಚನಾ ಇಂದೂ ನಿಭಾನಾ
ನಿರುತಾ ಕುಂಡಲ ನಾಥನ
ಕನಕಮಯ ವಸನ ಘನ ಪಾಪ ನಾಶನ
ನಿರುತಾ ಕುಂಡಲ ನಾಥ ವೇಣುನಾಥ ಹಯವದನ || ೩ ||