ರಚನೆ: —
ಚೆಲುವ ಚೆನ್ನಿಗ ನಮ್ಮ ಮುದ್ದು ಘನಶ್ಯಾಮ
ನಿನ್ನೊಲವು ತುಂಬಿದ ಸದನಾ
ಆನಂದಧಾಮಾ ಘನಶ್ಯಾಮ || ಪ ||
ಹಾಲುಗೆನ್ನೆಯೆ ನಿನ್ನ ವದನಾರವಿಂದ
ತಳತಳಿಸುವ ಕಪ್ಪು ಕಂಗಳಿಂದ |
ಪರವಶನಾದೆನು ನಾ ಮುದದಿಂದ |
ಆಡುತ್ತ ಓಡುತ್ತ ಬಾ ಮುದ್ದು ಕಂದಾ
ಘನಶ್ಯಾಮ ಘನಶ್ಯಾಮ ಘನಶ್ಯಾಮ || ೧ ||
ನೀಲವರ್ಣನೆ ನಿನ್ನ ನಗೆ ಮುಖ ಚಂದ |
ನಿನ್ನೆ ಮೊನ್ನೆಯ ನಿನ್ನ ನುಡಿ ಇನ್ನು ಅಂದ |
ನಗುವಾ ನಗಿಸುವಾ |
ನಿನ್ನಾಟದಿಂದ ಎನ್ನೆದೆ ತುಂಬಿದೆ ಮುದ್ದಿನ ಕಂದ
ಘನಶ್ಯಾಮ ಘನಶ್ಯಾಮ ಘನಶ್ಯಾಮ || ೨ ||
No Responses