ದೀಪಾವಳಿ – ShriLahari.Com https://shrilahari.com Information Site About - Healthy Tips, Culture, Rituals, Food Recipes, Tour Place Etc Mon, 28 Oct 2024 18:44:16 +0000 en-US hourly 1 https://wordpress.org/?v=6.6.2 https://shrilahari.com/wp-content/uploads/cropped-shrilahari-logo-512x512-1-80x80.png ದೀಪಾವಳಿ – ShriLahari.Com https://shrilahari.com 32 32 199826199 ದೀಪಾವಳಿಗೂ ಮುನ್ನ ಆಚರಿಸುವ ನೀರು ತುಂಬುವ ಹಬ್ಬ https://shrilahari.com/%e0%b2%a6%e0%b3%80%e0%b2%aa%e0%b2%be%e0%b2%b5%e0%b2%b3%e0%b2%bf-%e0%b2%a8%e0%b3%80%e0%b2%b0%e0%b3%81-%e0%b2%a4%e0%b3%81%e0%b2%82%e0%b2%ac%e0%b3%81%e0%b2%b5-%e0%b2%b9%e0%b2%ac%e0%b3%8d%e0%b2%ac/ https://shrilahari.com/%e0%b2%a6%e0%b3%80%e0%b2%aa%e0%b2%be%e0%b2%b5%e0%b2%b3%e0%b2%bf-%e0%b2%a8%e0%b3%80%e0%b2%b0%e0%b3%81-%e0%b2%a4%e0%b3%81%e0%b2%82%e0%b2%ac%e0%b3%81%e0%b2%b5-%e0%b2%b9%e0%b2%ac%e0%b3%8d%e0%b2%ac/#respond Sun, 27 Oct 2024 15:39:18 +0000 https://shrilahari.com/?p=14170 ShriLahari.Com

ದೀಪಾವಳಿಗೂ ಮುನ್ನ ಆಚರಿಸುವ ನೀರು ತುಂಬುವ ಹಬ್ಬ

ದೀಪಾವಳಿ ಸಮಯದಲ್ಲಿ ನೀರು ತುಂಬುವ ಹಬ್ಬ ಆಚರಿಸುವ ಸಂಪ್ರದಾಯವಿದೆ. ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳಲ್ಲಿ ಇದೂ ಒಂದು. ಆಶ್ವಯುಜ ಮಾಸದ ಕೃಷ್ಣ ಪಕ್ಷದ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದನ್ನು ಗಂಗೆ ಕಳಸ ಪೂಜೆ ಎಂದೂ ಕರೆಯಲಾಗುತ್ತದೆ. ಈ ಹಬ್ಬವನ್ನು ದೀಪಾವಳಿಗೂ ಒಂದು ದಿನದ ಮೊದಲು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ನೀರು ತುಂಬುವ ಹಬ್ಬವೆಂದು ಕರೆದರೆ, ಉತ್ತರ ಭಾರತದಲ್ಲಿ ಇದನ್ನು ಧನತೇರಸ್‌ ಅಥವಾ ಧನತ್ರಯೋದಶಿ ಎಂದು ಕರೆಯಲಾಗುತ್ತದೆ. ನೀರು ತುಂಬುವ ಹಬ್ಬ ಆಚರಿಸುವ ವಿಧಾನ: ಈ ದಿನದಂದು ಸಂಧ್ಯಾಕಾಲದಲ್ಲಿ ಸ್ನಾನಗ್ರಹವನ್ನು ಸ್ವಚ್ಛಗೊಳಿಸಿ ನಂತರ ಸ್ನಾನಗ್ರಹದಲ್ಲಿರುವ ನೀರು ಸಂಗ್ರಹದ ಬಾಂಡಗಳನ್ನು (ಪಾತ್ರೆ) ತೊಳೆದು, ಸುತ್ತಲೂ ರಂಗೋಲಿ ಅಥವಾ ಮಂಡಲವನ್ನು ಬಿಡಿಸಿ ಹೂವು ಪತ್ರಗಳಿಂದ ಅಲಂಕರಿಸಿ ಹಣತೆಯಲ್ಲಿ ದೀಪವನ್ನು ಹಚ್ಚಿಟ್ಟು ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು || ಭಾಗೀರಥೀಂ ಆವಾಹಯಾಮಿ | ಎಂಬ ಮಂತ್ರವನ್ನು ಹೇಳುತ್ತಾ ಬಾವಿಯಿಂದ ನೀರನ್ನು ತಂದು

The post ದೀಪಾವಳಿಗೂ ಮುನ್ನ ಆಚರಿಸುವ ನೀರು ತುಂಬುವ ಹಬ್ಬ first appeared on ShriLahari.Com and is written by admin

]]>
ShriLahari.Com

ದೀಪಾವಳಿಗೂ ಮುನ್ನ ಆಚರಿಸುವ ನೀರು ತುಂಬುವ ಹಬ್ಬ

ದೀಪಾವಳಿ ಸಮಯದಲ್ಲಿ ನೀರು ತುಂಬುವ ಹಬ್ಬ ಆಚರಿಸುವ ಸಂಪ್ರದಾಯವಿದೆ. ಬಹಳ ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳಲ್ಲಿ ಇದೂ ಒಂದು. ಆಶ್ವಯುಜ ಮಾಸದ ಕೃಷ್ಣ ಪಕ್ಷದ ಶುದ್ಧ ತ್ರಯೋದಶಿಯಂದು ನೀರು ತುಂಬುವ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದನ್ನು ಗಂಗೆ ಕಳಸ ಪೂಜೆ ಎಂದೂ ಕರೆಯಲಾಗುತ್ತದೆ. ಈ ಹಬ್ಬವನ್ನು ದೀಪಾವಳಿಗೂ ಒಂದು ದಿನದ ಮೊದಲು ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು ನೀರು ತುಂಬುವ ಹಬ್ಬವೆಂದು ಕರೆದರೆ, ಉತ್ತರ ಭಾರತದಲ್ಲಿ ಇದನ್ನು ಧನತೇರಸ್‌ ಅಥವಾ ಧನತ್ರಯೋದಶಿ ಎಂದು ಕರೆಯಲಾಗುತ್ತದೆ.

ದೀಪಾವಳಿ ನೀರು ತುಂಬುವ ಹಬ್ಬ

ನೀರು ತುಂಬುವ ಹಬ್ಬ ಆಚರಿಸುವ ವಿಧಾನ:

ಈ ದಿನದಂದು ಸಂಧ್ಯಾಕಾಲದಲ್ಲಿ ಸ್ನಾನಗ್ರಹವನ್ನು ಸ್ವಚ್ಛಗೊಳಿಸಿ ನಂತರ ಸ್ನಾನಗ್ರಹದಲ್ಲಿರುವ ನೀರು ಸಂಗ್ರಹದ ಬಾಂಡಗಳನ್ನು (ಪಾತ್ರೆ) ತೊಳೆದು, ಸುತ್ತಲೂ ರಂಗೋಲಿ ಅಥವಾ ಮಂಡಲವನ್ನು ಬಿಡಿಸಿ ಹೂವು ಪತ್ರಗಳಿಂದ ಅಲಂಕರಿಸಿ ಹಣತೆಯಲ್ಲಿ ದೀಪವನ್ನು ಹಚ್ಚಿಟ್ಟು

ನೀರು ಸಂಗ್ರಹದ ಬಾಂಡ

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಭಾಗೀರಥೀಂ ಆವಾಹಯಾಮಿ |
ಎಂಬ ಮಂತ್ರವನ್ನು ಹೇಳುತ್ತಾ ಬಾವಿಯಿಂದ ನೀರನ್ನು ತಂದು ಪಾತ್ರೆಗೆ ಜಲಪೂರಣ ಮಾಡಬೇಕು.(ಅರ್ಥ: ಪವಿತ್ರ ಸಪ್ತನದಿಗಳಾದ ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧೂ, ಕಾವೇರಿಯರೇ, ದಯವಿಟ್ಟು ನಾನು ಸ್ನಾನ ಮಾಡುತ್ತಿರುವ ಈ ನೀರಿನಲ್ಲಿ ಸಮ್ಮಿಲಿತಗೊಳ್ಳಿ ( ಸಮ್ಮಿಲಿತಗೊಂಡು ನನ್ನನ್ನು ಪವಿತ್ರಗೊಳಿಸಿ )

“ಪ್ರಸೀದ ಭಗವನ್ ಆಗಚ್ಚಾಗಚ್ಛ ಭಗವಂತಂ ಗಂಗಾಜನಕಂ ತ್ರಿವಿಕ್ರಮಂ ಅಸ್ಮಿನ್ ಕಲಶೇ ಆವಾಹಯಾಮಿ”
ಎಂದು ಅಕ್ಷತೆ ಹೂವನ್ನು ಹಾಕಿ ಹಳದಿ ಕುಂಕುಮ ಗಳಿಂದ ಪೂಜಿಸಬೇಕು. ನಂತರ ನೈವೇದ್ಯವನ್ನು ಮಾಡಿ, ನೀರಾಜನವನ್ನು ಸಮರ್ಪಿಸಿ, ಪೂಜೆಯನ್ನು ಮಾಡಬೇಕು. ದಕ್ಷಿಣ ಕರ್ನಾಟಕದಲ್ಲಿ (ಉಡುಪಿ, ಮಂಗಳೂರು) ನೈವೇದ್ಯಕ್ಕೆ ಎಲೆ ಅಪ್ಪ(ತುಳುವಿನಲ್ಲಿ ಎಲೆ ಅಪ್ಪ)ವನ್ನು ಮಾಡಿ ನೈವೇದ್ಯಕ್ಕೆ ಇಡುತ್ತಾರೆ.

The post ದೀಪಾವಳಿಗೂ ಮುನ್ನ ಆಚರಿಸುವ ನೀರು ತುಂಬುವ ಹಬ್ಬ first appeared on ShriLahari.Com and is written by admin

]]>
https://shrilahari.com/%e0%b2%a6%e0%b3%80%e0%b2%aa%e0%b2%be%e0%b2%b5%e0%b2%b3%e0%b2%bf-%e0%b2%a8%e0%b3%80%e0%b2%b0%e0%b3%81-%e0%b2%a4%e0%b3%81%e0%b2%82%e0%b2%ac%e0%b3%81%e0%b2%b5-%e0%b2%b9%e0%b2%ac%e0%b3%8d%e0%b2%ac/feed/ 0 14170