ನಾರಾಯಣ ನಿನ್ನ ನಾಮದ ಸ್ಮರಣೆಯ – Narayana Ninna Namada Smaraneya Lyrics

0Shares

Lyrics In Kannada:

ರಚನೆ: ಪುರಂದರದಾಸರು

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವು ಎನ್ನ ನಾಲಿಗೆಗೆ ಬರಲಿ || ಪ ||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟು ಇರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ || ೧ ||

ಕನಸಿನೊಳಾಗಲಿ ಕಳವಳಿಕಾಗಲಿ
ಮನಸು ಕೆಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ನಾಮದ ಸ್ಮರಣೆಯು
ಮನಸಿನೊಳಗೆ ಒಮ್ಮೆ ನೆನೆಸುವ ಹಾಗೆ || ೨ ||

ಸಂತತ ಹರಿ ನಿನ್ನ ಸಾಸಿರ ನಾಮವ
ಅಂತರಂಗದೊಳು ಒಳಗಿರಿಸಿ
ಎಂತೋ ಶ್ರೀ ಪುರಂದರ ವಿಠ್ಠಲ ರಾಯನ
ಅಂತ್ಯ ಕಾಲದಲ್ಲಿ ಚಿಂತಿಸೋ ಹಾಂಗೆ || ೩ ||


Lyrics In English:

Composer: Purandara Dasaru

Narayana ninna namada smaraneya
saramrutavu enna naligege barali || pa ||

Kastadallirali utkrusttadallirali
estadaru matigettu irali
krishna krishna endu shishtaru peluva
ashtakshara maha mantrada namava || 1 ||

Kanasinolagali kalavalikagali
manasu kettiirali munidirali
janakajapati ninna namada smaraneyu
manasinolage omme nenesuva hage || 2 ||

Santata hari ninna sasira namava
antarangadolu olagirisi
ento shri purandara vittala rayana
antya kaladalli cintiso hange || 3 ||

Sung By (ಗಾಯಕರು):  Shambhavi Rao (ಶಾಂಭವಿ ರಾವ್)

0Shares
See also  ಕಾಪಾಡು ಶ್ರೀ ಸತ್ಯನಾರಾಯಣ - Kapadu Shri Satyanarayana Lyrics

Leave a Reply

error: Content is protected !!