0Shares

ರಚನೆ: —-

ಕಾಪಾಡು ಶ್ರೀ ಸತ್ಯನಾರಾಯಣ |
ನಾರಾಯಣ ಸತ್ಯನಾರಾಯಣ || ಪ ||

ನಾರಾಯಣ ಲಕ್ಷ್ಮಿನಾರಾಯಣ |
ಪನ್ನಗ ಶಯನ ಪಾವನ ಚರಣ ||
ನಂಬಿದೆ ನಿನ್ನಾ | ಕಾಪಾಡು ಶ್ರೀ ಸತ್ಯನಾರಾಯಣ || ೧ ||

ಮನವೆಂಬ ಮಂಟಪ ಬೆಳಕಾಗಿದೆ |
ಹರಿನಾಮದ ಮಂತ್ರವೇ ತುಂಬಿದೆ ||
ಎಂದೆಂದು ಸ್ಥಿರವಾಗಿ ನೀನಿಲ್ಲಿರೊ |
ನಮ್ಮಲ್ಲಿ ಒಂದಾಗಿ ಉಸಿರಾಗಿರು || ೨ ||

ನನಗಾಗಿ ಏನನ್ನು ನಾ ಬೇಡೆನು |
ಧನಕನಕ ಬೇಕೆಂದು ನಾ ಕೇಳೆನು ||
ಈ ಮನೆಯು ನೀನಿರುವ ಗುಡಿಯಾಗಲಿ |
ಸುಖ ಶಾಂತಿ ನೆಮ್ಮದಿಯ ನೆಲೆಯಾಗಲಿ || ೩ ||

ಕಣ್ಣೀರ ಅಭಿಷೇಕ ನಾ ಮಾಡಿದೆ |
ಕರುಣಾಳು ನೀ ಎನ್ನ ಕಾಪಾಡಿದೆ ||
ಬರಿದಾದ ಮಡಿಲನ್ನು ನೀ ತುಂಬಿದೆ |
ನಾ ಕಾಣದಾನಂದ ನೀ ನೀಡಿದೆ || ೪ ||

Click here for English Lyrics

0Shares

ನಿಮ್ಮದೊಂದು ಉತ್ತರ

This Post Has One Comment