0Shares

ರಚನೆ: ಪುರಂದರದಾಸರು

ಹರಿ ಕುಣಿದ ನಮ್ಮ ಹರಿ ಕುಣಿದ || ಪ ||
ಹರಿ ಕುಣಿದಾ ನಮ್ಮ ಹರಿ ಕುಣಿದಾ || ಅ.ಪ ||

ಅಕಳಂಕ ಚರಿತ ಮಕರ ಕುಂಡಲಧರ
ಸಕಲರ ಪಾಲಿಪ ಹರಿಕುಣಿದ || ೧ ||

ಅರಳೆಲೆ ಮಾಗಾಯಿ ಕೊರಳ ಮುತ್ತಿನ ಸರ
ತರಳೆಯರೊಡಗೂಡಿ ಹರಿಕುಣಿದ || ೨ ||

ಅಂದುಗೆ ಅರಳೆಲೆ ಬಿಂದುಲಿ ಬಾಪುರಿ
ಚಂದದಿ ನಲಿವುತ ಹರಿಕುಣಿದ || ೩ ||

ಉಟ್ಟ ಪಟ್ಟೆಯ ದಟ್ಟಿ ಇಟ್ಟಕಾಂಚಿಯದಾಮ
ದಿಟ್ಟಮಲ್ಲರ ಗಂಡ ಹರಿಕುಣಿದ || ೪ ||

ಪರಮ ಭಾಗವತರ ಕೇರಿಯೊಳಾಡುವ
ಪುರಂದರವಿಠಲ ಹರಿಕುಣಿದ || ೫ ||

0Shares

ನಿಮ್ಮದೊಂದು ಉತ್ತರ