ರಚನೆ: ಪುರಂದರದಾಸರು
ಏನ್ ಸವಿ ಏನ್ ಸವಿ ಹರಿನಾಮ
ಮನಸು ತೃಪ್ತಿಯಾಗ್ವದು ಪ್ರೇಮ || ಪ ||
ಜನರಿಗೆ ತಿಳಿಯದು ಇದರ್ ಮಹಿಮ
ಘನ್ನ ಮಹಿಮ ವಿಷ್ಣು ಸಾಸಿರ್ ನಾಮ || ಅ.ಪ ||
ಪ್ರಹ್ಲಾದಗೊಲಿದ ಹರಿನಾಮದಿಂದ
ಅಲಲಲಲಲ ಧ್ರುವ ರಾಜೇಂದ್ರ
ಫಲ್ಗುಣಗೆ ಫಲಿಸಿತು ಹೆಚ್ಚೆಂದು
ರಾಮ್ ರಾಮ್ ರಾಮ್ ರಾಮ್ ಸರ್ವ ಜಗಕೂ || ೧ ||
ರಕ್ಷಣೆಯ ಮಾಡುವುದು ಹರಿನಾಮ
ಮೋಕ್ಷ ಪದವಿ ಕೊಡುವುದು ನೇಮ
ಕೃಷ್ಣ ಕೃಷ್ಣ ಶ್ರೀಹರಿ ಸರ್ವೋತ್ತಮ
ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮ || ೨ ||
ಹರಿ ಹರಿ ಹರಿಸ್ಮರಣೆ ಮಾಡಬೇಕು
ಹರ ಹರ ಹರ ಎಂದು ಅನ್ನಬೇಕು
ವೇದಗಳು ಸಾರುತಿವೆ ಇವು ನಾಲ್ಕು
ಪುರಂದರವಿಠಲನೆ ಸರ್ವ ಜಗಕೂ || ೩ ||
