You are currently viewing ಯಾರೇ ರಂಗನ ಕರೆಯ ಬಂದವರು – ಸಾಹಿತ್ಯ

ಯಾರೇ ರಂಗನ ಕರೆಯ ಬಂದವರು – ಸಾಹಿತ್ಯ

0Shares

ರಚನೆ: ಪುರಂದರದಾಸರು

ಯಾರೇ ರಂಗನ ಕರೆಯ ಬಂದವರು
ಯಾರೇ ರಂಗನ ಕರೆಯ ಬಂದವರು |
ಯಾರೇ ಕೃಷ್ಣನ ಕರೆಯ ಬಂದವರು || ಪ ||

ಯಾರೇ ರಂಗನ | ಯಾರೇ ಕೃಷ್ಣನ |
ಕರೆಯ ಬಂದವರು ||
ಗೋಪಾಲಕೃಷ್ಣನ ಪಾಪವಿನಾಶನ |
ಈ ಪರಿಯಿಂದಲೀ ಕರೆಯ ಬಂದವರು || ೧ ||

ವೇಣು ವಿನೋದನ ಪ್ರಾಣ ಪ್ರಿಯನ |
ಜಾಣೆಯರರಸನ ಕರೆಯ ಬಂದವರು || ೨ ||

ಕರಿರಾಜವರದನ ಪರಮ ಪುರುಷನ |
ಪುರಂದರವಿಠಲನ ಕರೆಯ ಬಂದವರು || ೩ ||

Click here for English Lyrics

0Shares
See also  ಬಾರೋ ಕೃಷ್ಣಯ್ಯ - ಸಾಹಿತ್ಯ

Shrinidhi Rao

Shrinidhi Rao is a Mechanical Design Engineer and part-time blogger from Belmar, Karnataka. Passionate about writing, he shares insights on various topics, combining creativity with technical expertise.

Leave a Reply