ಶರಣು ಸಿದ್ಧಿ ವಿನಾಯಕ – ಸಾಹಿತ್ಯ

0Shares

ರಚನೆ: ಪುರಂದರದಾಸರು

ಶರಣು ಸಿದ್ಧಿ ವಿನಾಯಕ
ಶರಣು ವಿದ್ಯಾಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ
ಶರಣು ಶರಣು || ಪ ||

ನಿಟಿಲ ನೇತ್ರನೆ ದೇವಿಸುತನೆ
ನಾಗಭೂಷಣ ಪ್ರೀಯನೇ
ತಟಿಲ್ಲತಾಂಕಿತ ಕೋಮಲಾಂಗನೆ
ಕರ್ಣಕುಂಡಲ ಧಾರನೆ || ೧ ||

ಬಟ್ಟ ಮುತ್ತಿನ ಪದಕಹಾರನೆ
ಬಾಹುಹಸ್ತ ಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ
ಪಾಶ ಅಂಕುಶ ಧಾರನೆ || ೨ ||

ಕುಕ್ಷಿ ಮಹಾಲಂಬೋದರನೆ
ಇಕ್ಷು ಚಾಪನ ಗೆಲಿದನೇ
ಪಕ್ಷಿವಾಹನ ಶ್ರೀ ಪುರಂದರ
ವಿಠಲನ ನಿಜ ದಾಸನೆ || ೩ ||

Click here for English Lyrics

ಗಾಯಕರು: ಸುನಿತಾ

Audio Player
0Shares
See also  ನಾರಾಯಣ ನಿನ್ನ ನಾಮದ ಸ್ಮರಣೆಯ - Narayana Ninna Namada Smaraneya Lyrics

No Responses

Leave a Reply

error: Content is protected !!