You are currently viewing ಶರಣು ಸಿದ್ಧಿ ವಿನಾಯಕ – ಸಾಹಿತ್ಯ

ಶರಣು ಸಿದ್ಧಿ ವಿನಾಯಕ – ಸಾಹಿತ್ಯ

0Shares

ರಚನೆ: ಪುರಂದರದಾಸರು

ಶರಣು ಸಿದ್ಧಿ ವಿನಾಯಕ
ಶರಣು ವಿದ್ಯಾಪ್ರದಾಯಕ
ಶರಣು ಪಾರ್ವತಿ ತನಯ ಮೂರುತಿ
ಶರಣು ಮೂಷಿಕ ವಾಹನ
ಶರಣು ಶರಣು || ಪ ||

ನಿಟಿಲ ನೇತ್ರನೆ ದೇವಿಸುತನೆ
ನಾಗಭೂಷಣ ಪ್ರೀಯನೇ
ತಟಿಲ್ಲತಾಂಕಿತ ಕೋಮಲಾಂಗನೆ
ಕರ್ಣಕುಂಡಲ ಧಾರನೆ || ೧ ||

ಬಟ್ಟ ಮುತ್ತಿನ ಪದಕಹಾರನೆ
ಬಾಹುಹಸ್ತ ಚತುಷ್ಟನೆ
ಇಟ್ಟ ತೊಡುಗೆಯ ಹೇಮ ಕಂಕಣ
ಪಾಶ ಅಂಕುಶ ಧಾರನೆ || ೨ ||

ಕುಕ್ಷಿ ಮಹಾಲಂಬೋದರನೆ
ಇಕ್ಷು ಚಾಪನ ಗೆಲಿದನೇ
ಪಕ್ಷಿವಾಹನ ಶ್ರೀ ಪುರಂದರ
ವಿಠಲನ ನಿಜ ದಾಸನೆ || ೩ ||

Click here for English Lyrics

ಗಾಯಕರು: ಸುನಿತಾ

0Shares
See also  ಚೆಲುವ ಚೆನ್ನಿಗ ನಮ್ಮ - ಸಾಹಿತ್ಯ

Shrinidhi Rao

Shrinidhi Rao is a Mechanical Design Engineer and part-time blogger from Belmar, Karnataka. Passionate about writing, he shares insights on various topics, combining creativity with technical expertise.

This Post Has One Comment

Leave a Reply