Site icon ShriLahari.Com

ಲಕ್ಷ್ಮಿ ಜಯಂತಿಯ ಮಹತ್ವ

ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ.  ಸಕಲೈಷ್ವರ್ಯಕ್ಕು ಅಧಿದೇವತೆಯಾದ ಲಕ್ಷ್ಮಿ ಜಯಂತಿಯನ್ನು ಫಾಲ್ಗುಣ ಮಾಸದ ಹುಣ್ಣಿಮೆಯಂದು ಆಚರಿಸುತ್ತಾರೆ. ಫಾಲ್ಗುಣ ಮಾಸದಲ್ಲಿ ಉತ್ತರಫಲ್ಗುಣಿ ನಕ್ಷತ್ರದಲ್ಲಿ ಹುಣ್ಣಿಮೆಯ ದಿವಸ ಸಮುದ್ರ ಮಂಥನದ ಸಮಯದಲ್ಲಿ ಶ್ರೀ ಲಕ್ಷ್ಮಿ ದೇವಿಯು ಕ್ಷೀರಸಾಗರದಿಂದ ಆವಿರ್ಭವಿಸಿದಳೆಂದು ಹೇಳುವರು.

ಫಾಲ್ಗುಣ ಪೂರ್ಣಿಮೆಯ ದಿನವು ಹೆಚ್ಚಾಗಿ ಉತ್ತರ ಫಾಲ್ಗುಣಿ ನಕ್ಷತ್ರದೊಂದಿಗೆ ಹೊಂದಿಕೆಯಾಗುತ್ತದೆ ಎಂಬುದನ್ನು ಗಮನಿಸುವುದು ಗಮನಾರ್ಹವಾಗಿದೆ. ಹಾಗಾಗಿ ಉತ್ತರ ಫಾಲ್ಗುಣ ದಿನವೂ ಲಕ್ಷ್ಮಿ ಜಯಂತಿಯೊಂದಿಗೆ ಸಂಬಂಧ ಹೊಂದಿದೆ. ಲಕ್ಷ್ಮಿ ಜಯಂತಿಯನ್ನು ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುತ್ತದೆ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಇದು ಕಡಿಮೆ ಪ್ರಸಿದ್ಧವಾಗಿದೆ.

ಈ ದಿನ ಶ್ರೀ ಸೂಕ್ತ ಅಥವಾ ಮಹಾಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಸಹಿತ ಷೋಡಶೋಪಚಾರ ಯುಕ್ತವಾಗಿ ಲಕ್ಷ್ಮಿದೇವಿಯ ಆರಾಧನೆಯನ್ನು ಅನನ್ಯ ಭಕ್ತಿಯಿಂದ ಮಾಡುವುದರಿಂದ ಭಕ್ತರ ಮನೋಕಾಮನೆಗಳು ಈಡೇರುತ್ತದೆ.

ಲಕ್ಷ್ಮಿ ಜಯಂತಿ ಆಚರಣೆ ದಿನ ಮತ್ತು ಸಮಯ: 2023

ಹುಣ್ಣಿಮೆ ತಿಥಿಯು 2023 ಮಾರ್ಚ್ ತಿಂಗಳ 6 ಹಾಗೂ ಅದರ 7 ನೇ ತಾರೀಖು ಎರಡೂ ದಿವಸವೂ ಇದೆ. ಆದರೆ  ಲಕ್ಷ್ಮಿ ಜಯಂತಿಯನ್ನು 7ನೇ ತಾರೀಖು ಸಾಯಂಕಾಲ 6:11 ರ ಒಳಗೆ ಆಚರಿಸಬೇಕು.

 

Exit mobile version