ದೇಹದ ತೂಕ ಹೆಚ್ಚಾದರೆ ಮನುಷ್ಯನಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ. ಅದರಲ್ಲಿ ವಿಶೇಷವಾಗಿ ಬೊಜ್ಜು, ಮಧುಮೇಹ, ರಕ್ತದ ಒತ್ತಡ ಕಂಡು ಬರಬಹುದು. ಆರೋಗ್ಯದಲ್ಲಿ ಏರುಪೇರು ಉಂಟಾದರೆ ಅದರ ನೇರ ಪರಿಣಾಮ ದೇಹದ ತೂಕದ ಮೇಲೆ ಆಗುತ್ತದೆ.
ಅನಾರೋಗ್ಯಕರ ವಾತಾವರಣದಲ್ಲಿ ವ್ಯಾಯಾಮ ಮಾಡಲು ಸಹ ಆಗುವುದಿಲ್ಲ. ಇದರಿಂದ ತೊಂದರೆ ಆಗುವುದು ಸತ್ಯ. ಈ ಲೇಖನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ದೇಹದ ತೂಕ ಕಡಿಮೆ ವಿಧಾನಗಳನ್ನು ನೋಡೋಣ.
- ಬೆಳಿಗ್ಗೆ ಎದ್ದ ತಕ್ಷಣ ಅರ್ಧ ನಿಂಬೆಯನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ. ಗೋಧಿಯ ತಿಂಡಿ ತಿಂದರೆ ಉತ್ತಮ. ಒಣ ಚಪಾತಿ ಒಳ್ಳೆಯದು.
- ಮಧ್ಯಾಹ್ನದ ಊಟಕ್ಕೂ ಮೊದಲು ಹಸಿವಾದರೆ ಕಿತ್ತಳೆ, ಅನನಾಸು ಅಥವಾ ಕ್ಯಾರೆಟ್ಟಿನ ಜ್ಯೂಸ್ ಕುಡಿಯಿರಿ. ಸಕ್ಕರೆ ಹಾಕದಿದ್ದರೆ ಉತ್ತಮ. ಕೇವಲ ಹಣ್ಣಿನ ರಸ ತೆಗೆದು ಕುಡಿಯಿರಿ.
- ಮಧ್ಯಾಹ್ನ ಊಟಕ್ಕೆ ಹಸಿ ತರಕಾರಿಗಳ ಸಲಾಡ್ ತಿನ್ನಿ. ಕ್ಯಾರೆಟ್, ಸೌತೆಕಾಯಿ, ಕ್ಯಾಬೇಜ್, ಟೋಮೇಟೋಗಳನ್ನು ಹಸಿಯಾಗಿ ಬಳಸಬಹುದು. ಅನ್ನ ಉಣ್ಣಬೇಡಿ. ಒಣ ಚಪಾತಿ ಒಳ್ಳೆಯದು. ಮಸಾಲೆ ಪದಾರ್ಥಗಳನ್ನು ಚಪಾತಿ ಜತೆಗೆ ತಿನ್ನಬೇಡಿ. ಸಲಾಡ್‌ಗಳೋ, ದಾಲ್‌ಗಳನ್ನೋ ಬಳಸಬಹುದು.
- ಮಧ್ಯಾಹ್ನ ಊಟವಾದ ನಂತರ ಮಜ್ಜಿಗೆ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಅದಕ್ಕೆ ಸ್ವಲ್ಪ ಶುಂಠಿಯನ್ನೂ ಸೇರಿಸಬಹುದು.
- ನಡು ಮಧ್ಯಾಹ್ನ ಅಥವಾ ಸಂಜೆಯಾಗುತ್ತಾ ಬಂದಾಗ ಎಳೆನೀರು ಉತ್ತಮ. ಇಲ್ಲವಾದರೆ ಲೆಮೆನ್ ಟೀ ಕುಡಿಯಿರಿ. ಅಥವಾ ತಾಜಾ ತರಕಾರಿ ಸೂಪ್ ಕೂಡಾ ಕುಡಿಯಬಹುದು.