ಕಲಿಯುಗದಲ್ಲಿ ದಾಸರ ಕೀರ್ತನೆ ಪ್ರಾಮುಖ್ಯತೆ

1Shares

ಕಲಿಯುಗದಲ್ಲಿ ದಾಸರ ಕೀರ್ತನೆ ಪ್ರಾಮುಖ್ಯತೆ

ಕಲಿಯುಗದಲ್ಲಿ ದಾಸರ ಕೀರ್ತನೆಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡುತ್ತಿದ್ದಾರೆ ಎಂದರೆ, ನಮಗೆ ಯಾವುದೇ ಗ್ರಂಥಗಳು ಸಂಸ್ಕೃತದಲ್ಲಿರುವುದರಿಂದ ಅದನ್ನು ಓದಿ ಅರ್ಥಮಾಡಿಕೊಳ್ಳುವ ಜ್ಞಾನ ಇರುವ ಜನ ತುಂಬಾ ಕಡಿಮೆ ಮತ್ತು ಸಮಯವೂ ಕಡಿಮೆ. ದಾಸರ ಕೀರ್ತನೆ ನಮ್ಮ ಗ್ರಂಥಗಳಲ್ಲಿರುವ ಸಾರವನ್ನು ಆಡು ಭಾಷೆಯಲ್ಲಿ ನಮಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ. ಆದ್ದರಿಂದ ನಾವು ಈ ಹಾಡನ್ನು ಸುಲಭವಾಗಿ ಅರ್ಥಮಾಡಿಕೊಂಡು ಭಾವನೆಯಿಂದ ಹಾಡಬಹುದಾಗಿದೆ. ನಮಗೆ ಯಾವುದೇ ಒಂದು ಭಕ್ತಿ, ಭಾವವು ಬರಬೇಕಾದರು ಅದರ ಅರ್ಥ ತಿಳಿದಾಗ ಮಾತ್ರ ಭಾವನೆ ಬರುತ್ತದೆ. ನಾವು ಸಂಸ್ಕೃತ ಶ್ಲೋಕಗಳನ್ನು, ಸ್ತೋತ್ರಗಳನ್ನು ಓದುತ್ತೇವೆ ಆದರೆ ಅದು ಅರ್ಥವಾಗದ ಕಾರಣ ಭಾವನೆ ಬರುವುದಿಲ್ಲ. ದಾಸರ ಕೀರ್ತನೆಯಲ್ಲಿ ನಮಗೆ ಸುಲಭವಾಗಿ ಅರ್ಥವಾಗುವ ಹಾಗೆ ಹೇಳಿದ್ದರಿಂದ ನಮಗೆ ಹಾಡುವಾಗ ಶ್ರದ್ದೆ ಮತ್ತು ಭಕ್ತಿ ಬರುತ್ತದೆ.

ಪುರಂದರ ದಾಸ

ದಾಸರು ಕೀರ್ತನೆಯಲ್ಲಿ “ಕಲಿಯುಗದಲ್ಲಿ ಹರಿನಾಮವ ನೆನೆದರೆ ಕುಲಕೋಟಿಗಳು ಉದ್ಧರಿಸುವವು” ಎಂದು ಹೇಳಿದ್ದಾರೆ. ಯಾಕೆ ಹೇಳಿದ್ದಾರೆ ಎಂದರೆ ಭಕ್ತಿ, ಶ್ರದ್ದೆ ಇಲ್ಲದೆ ನೀವು ಎಷ್ಟು ಶ್ಲೋಕಗಳನ್ನು, ಸ್ತೋತ್ರಗಳನ್ನು ಹಾಗೂ ನಾಮಗಳನ್ನು ಹೇಳಿದರು ಪ್ರಯೋಜನವಿಲ್ಲ. ನಿಮಗೆ ಅದು ಅರ್ಥವಾದರೆ ಮಾತ್ರ ಭಾವನೆ ಬರುವುದು, ನಿಮಗೆ ಅರ್ಥವಾಗದೇ ನೀವು ಎಷ್ಟು ಸ್ತೋತ್ರಗಳು ಹೇಳಿದರು ಫಲಿತಾಂಶ ಶೂನ್ಯ. ಅದೇ ನೀವು ದಾಸರ ಕೀರ್ತನೆಗಳನ್ನು ಹೇಳಿದರೆ ಸುಲಭವಾಗಿ ಭಾವನೆ ಜೊತೆ ಭಕ್ತಿ ಕೂಡ ಬರುತ್ತದೆ. ಅದರಿಂದ ನಮಗೆ ಬರೀ ಭಕ್ತಿ ಭಾವ ಅಲ್ಲದೆ ನಮಗೆ ವಾಸ್ತವಿಕವಾಗಿ ಎಲ್ಲಾ ರೀತಿಯಲ್ಲೂ ಜೀವನವನ್ನು ನಡೆಸಲು ಮಾರ್ಗದರ್ಶನವನ್ನು ತೋರಿಸುತ್ತದೆ. ಈ ದಾಸರ ಕೀರ್ತನೆಯಲ್ಲಿ ಎಲ್ಲಾ ಭಾವನೆಯ ಹಾಡುಗಳಿವೆ. ನೀವು ಯಾವ ಒಂದು ಭಾವದಲ್ಲಿರಿ, ಸಂತೋಷದಲ್ಲಿರಿ ಅದಕ್ಕೆ ಸರಿಯಾಗಿರುವ ಹಾಡುಗಳನ್ನು ದಾಸರು ಬರೆದಿದ್ದಾರೆ. ಈ ದಾಸರ ಕೀರ್ತನೆಯಲ್ಲಿ ಸಾವಿರಾರು ಹಾಡುಗಳಿವೆ. ಅದರಲ್ಲಿ ನಮಗೆ ಬೇಕಾಗುವಂತಹ ಹಾಡುಗಳು ನಮಗೆ ಸಿಗುತ್ತದೆ. ಇದರಲ್ಲಿ ನಮಗೆ ಮಾರ್ಗದರ್ಶನ ಮಾಡುವಂತಹ ಹಾಡುಗಳು ಕೂಡ ಇವೆ.

ನಮಗೆ ತಿಳಿದಿದೆ ಈ ಸಂಗೀತಕ್ಕೆ ಎಷ್ಟೋ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು. ನಾವು ಈ ದಾಸರ ಕೀರ್ತನೆಗಳನ್ನು ಸಂಗೀತ ರಾಗ ರೂಪದ ಮೂಲಕ ಹಾಡುವುದರಿಂದ ಎಷ್ಟೋ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ಹಾಗೂ ಮಾನಸಿಕವಾಗಿ ನೆಮ್ಮದಿಯನ್ನು ತಂದುಕೊಳ್ಳಬಹುದು. ಈಗಿನ ವೇಗವಾದ ಬದುಕು ಹಾಗೂ ಎಲ್ಲೆಲ್ಲೂ ಒತ್ತಡದ ಜೀವನವಾಗಿರುವುದರಿಂದ ಸಮಯ ಅಭಾವ ಇರುವ ಕಾರಣ ಕನಿಷ್ಠ ಪಕ್ಷ ನಾವು ಹಾಡದಿದ್ದರು, ನಾಲ್ಕು ದಾಸರ ಹಾಡು ಕೇಳಿದರು ನಮಗೆ ಜೀವನದಲ್ಲಿ ಎಷ್ಟೋ ಸಮಾಧಾನ ಸಿಗಬಹುದು. ಅದಕ್ಕೆ ಕಲಿಯುಗದಲ್ಲಿ ದಾಸರ ಕೀರ್ತನೆಗೆ ತುಂಬಾ ಪ್ರಾಮುಖ್ಯತೆ. ಕೆಲವು ಸ್ತೋತ್ರಗಳನ್ನು ಮತ್ತು ಮಂತ್ರಗಳನ್ನು ಹೇಳಲು ಅದರದ್ದೇ ಆದ ಕೆಲವು ನಿಯಮಗಳಿವೆ, ಅದೇ ರೀತಿಯಲ್ಲಿ ಹೇಳಬೇಕು ಇಲ್ಲವಾದಲ್ಲಿ ಅದರ ಫಲಿತಾಂಗಳು ವಿಪರೀತಕ್ಕೂ ಕೂಡ ಹೋಗಬಹುದು. ಆದರೆ ದಾಸರ ಕೀರ್ತನೆಯನ್ನು ಹೀಗೆ ಹೇಳಬೇಕು, ಇದೆ ರಾಗದಲ್ಲಿ ಹೇಳಬೇಕು ಎಂದು ಯಾವ ನಿಯಮವೂ ಕೂಡ ಇಲ್ಲ. ಇದನ್ನು ನೀವು ಯಾವ ಸಮಯದಲ್ಲಾದರೂ, ಎಲ್ಲಾದರೂ ಹಾಡಬಹುದು. ಇದಕ್ಕೆ ನಿಯಮಗಳಿಲ್ಲ. ಅದರಿಂದ ನಮ್ಮ ಈಗಿನ ಸಮಯ ಅಭಾವಕ್ಕೆ ಈ ದಾಸರ ಕೀರ್ತನೆಗಳು ನಮಗೆ ತುಂಬಾ ಸಹಾಯ ಮಾಡುತ್ತದೆ. ನಮಗೆ ಇರುವ ಕಡಿಮೆ ಸಮಯದಲ್ಲಿ ಹೆಚ್ಚು ಫಲವನ್ನು, ಜ್ಞಾನವನ್ನು ನೀಡುವಲ್ಲಿ ಈ ದಾಸರ ಪದಗಳು ತುಂಬಾ ಯಶಸ್ವಿಯಾಗಿದೆ.

See also  ಬಂದಾ ಮನ್ಮಾನಸಕೆ ಶ್ರೀಹರಿ - ಸಾಹಿತ್ಯ
1Shares

Leave a Reply

error: Content is protected !!