ಏಕಾದಶ ಈ ಸಂಸ್ಕೃತ ಪದದ ಅರ್ಥ ಹನ್ನೊಂದು(11). ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಈ ಏಕಾದಶಿಗೆ ಸಾಕ್ಷಾತ್ ಶ್ರೀಹರಿಯೇ ಅಭಿಮಾನಿ ದೇವರು. ಆ ಕಾರಣಕ್ಕೆ ಈ ದಿನವನ್ನು ‘ಹರಿದಿನ’ ಎಂತಲೂ ಕರೆಯುವರು. ಒಂದು ಮಾಸದಲ್ಲಿ ಎರಡು ಏಕಾದಶಿಗಳಿರುತ್ತವೆ. ಅಮವಾಸ್ಯೆಯ ನಂತರ ಬರುವ ಏಕಾದಶಿಯನ್ನು ಶುಕ್ಲ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಹಾಗೆಯೇ ಹುಣ್ಣಿಮೆ ಬರುವ ಏಕಾದಶಿಯನ್ನು ಕೃಷ್ಣ ಪಕ್ಷದ ಏಕಾದಶಿ ಎಂದು ಕರೆಯಲಾಗುತ್ತದೆ. ಈ ದಿನದಂದು ಯಾವ ಆಹಾರವನ್ನೂ ಸೇವಿಸದೆ, ಉಪವಾಸ ಮಾಡುವ ಸಂಪ್ರದಾಯವಿದೆ. ಈ ದಿನ ಆಹಾರವನ್ನು ತ್ಯಜಿಸಿ ದೇವರ ಧ್ಯಾನದಲ್ಲಿ ತೊಡಗಿದರೆ ವಿಶೇಷ ಫಲ ದೊರೆಯುತ್ತದೆ ಎಂಬುದು ನಿಯಮ. ಈ ದಿನದಂದು ಕೆಲವರು ಅನ್ನವನ್ನು ಮಾತ್ರ ತ್ಯಜಿಸಿ ಉಪವಾಸ ಆಚರಿಸಿದರೆ, ಮತ್ತೆ ಕೆಲವರು ಹನಿ ನೀರನ್ನೂ ಕುಡಿಯದೆ, ನಿರಾಹಾರ ವ್ರತವನ್ನು ಆಚರಿಸುತ್ತಾರೆ. ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಮಾರನೆಯ ದಿನ ಅಂದರೆ ದ್ವಾದಶಿಯಂದು ಬೆಳಿಗ್ಗೆ 9 ಘಂಟೆಯೊಳಗಾಗಿ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.  ಕೆಲವರು ಏಕಾದಶಿಯಂದು ಮೌನ ವ್ರತ ಸಹ ಆಚರಿಸುತ್ತಾರೆ.

2023 – 2024ರ ಏಕಾದಶಿ ತಿಥಿಗಳು:

ಚೈತ್ರ ಮಾಸ

ದಿನಾಂಕ

ವಾರ

ಪಕ್ಷ

ಏಕಾದಶಿ ತಿಥಿ

 01 ಏಪ್ರಿಲ್ 2023ಶನಿವಾರಶುಕ್ಲ ಪಕ್ಷಕಾಮದಾ
16 ಏಪ್ರಿಲ್ 2023ಆದಿತ್ಯವಾರಕೃಷ್ಣಪಕ್ಷವರೂಥಿನಿ 

ವೈಶಾಖ ಮಾಸ

01 ಮೇ 2023ಸೋಮವಾರ ಶುಕ್ಲ ಪಕ್ಷಮೋಹಿನೀ
15 ಮೇ 2023ಸೋಮವಾರ  ಕೃಷ್ಣಪಕ್ಷಅಪರಾ

ಜ್ಯೇಷ್ಠ ಮಾಸ

31 ಮೇ 2023ಬುಧವಾರಶುಕ್ಲ ಪಕ್ಷನಿರ್ಜಲಾ
14 ಜೂನ್ 2023ಬುಧವಾರ ಕೃಷ್ಣಪಕ್ಷಯೋಗಿನೀ

ಆಷಾಢ ಮಾಸ

29 ಜೂನ್ 2023ಗುರುವಾರ ಶುಕ್ಲ ಪಕ್ಷಶಯನೀ
13 ಜುಲೈ 2023ಗುರುವಾರ ಕೃಷ್ಣಪಕ್ಷಕಾಮಿಕಾ

ಅಧಿಕ ಶ್ರಾವಣ ಮಾಸ

29 ಜುಲೈ2023ಶನಿವಾರ ಶುಕ್ಲ ಪಕ್ಷ ಕಮಲಾ
12 ಆಗಸ್ಟ್ 2023ಶನಿವಾರ ಕೃಷ್ಣಪಕ್ಷ ಪದ್ಮಾ

ನಿಜ ಶ್ರಾವಣ ಮಾಸ

27 ಆಗಸ್ಟ್ 2023ಆದಿತ್ಯವಾರ ಶುಕ್ಲ ಪಕ್ಷಪವಿತ್ರಾ
10 ಸೆಪ್ಟೆಂಬರ್ 2023ಆದಿತ್ಯವಾರ ಕೃಷ್ಣಪಕ್ಷಅಜಾ

ಭಾದ್ರಪದ ಮಾಸ

26 ಸೆಪ್ಟೆಂಬರ್ 2023ಮಂಗಳವಾರಶುಕ್ಲ ಪಕ್ಷಪಾರ್ಶ್ವಪರಿವರ್ತಿನೀ
10 ಅಕ್ಟೋಬರ್ 2023ಮಂಗಳವಾರ ಕೃಷ್ಣಪಕ್ಷಇಂದಿರಾ

ಆಶ್ವಯುಜ ಮಾಸ

25 ಅಕ್ಟೋಬರ್ 2023ಬುಧವಾರ ಶುಕ್ಲ ಪಕ್ಷಪಾಶಾಂಕುಶಾ
09 ನವಂಬರ್ 2023ಗುರುವಾರ ಕೃಷ್ಣಪಕ್ಷರಮಾ

ಕಾರ್ತೀಕ ಮಾಸ

23 ನವಂಬರ್ 2023ಗುರುವಾರ ಶುಕ್ಲ ಪಕ್ಷದೇವಪ್ರಬೋಧಿನೀ
09 ಡಿಸೆಂಬರ್ 2023ಶನಿವಾರಕೃಷ್ಣಪಕ್ಷಉತ್ಪತ್ತಿಕಾ

ಮಾರ್ಗಶಿರ ಮಾಸ

23 ಡಿಸೆಂಬರ್ 2023ಶನಿವಾರಶುಕ್ಲ ಪಕ್ಷಮೋಕ್ಷದಾ
07 ಜನವರಿ 2024ಆದಿತ್ಯವಾರಕೃಷ್ಣಪಕ್ಷಸಫಲಾ

ಪುಷ್ಯ(ಪೌಷ) ಮಾಸ

21 ಜನವರಿ 2024ಆದಿತ್ಯವಾರ ಶುಕ್ಲ ಪಕ್ಷಪುತ್ರದಾ
06 ಫೆಬ್ರವರಿ 2024ಮಂಗಳವಾರ ಕೃಷ್ಣಪಕ್ಷಷಟ್ತಿಲಾ

ಮಾಘ ಮಾಸ

20 ಫೆಬ್ರವರಿ 2024ಮಂಗಳವಾರ ಶುಕ್ಲ ಪಕ್ಷಜಯಾ
07 ಮಾರ್ಚ್ 2024ಗುರುವಾರ ಕೃಷ್ಣಪಕ್ಷವಿಜಯಾ

ಫಾಲ್ಗುಣ ಮಾಸ

20 ಮಾರ್ಚ್ 2024ಬುಧವಾರ ಶುಕ್ಲ ಪಕ್ಷಆಮಲಕೀ
05 ಏಪ್ರಿಲ್ 2024ಶುಕ್ರವಾರ ಕೃಷ್ಣಪಕ್ಷಪಾಪಮೋಚನೀ

ಚೈತ್ರ ಮಾಸ

19 ಏಪ್ರಿಲ್ 2024ಶುಕ್ರವಾರ ಶುಕ್ಲ ಪಕ್ಷಕಾಮದಾ