ಕರಾವಳಿಯಲ್ಲಿ (ತುಳುನಾಡು) ಮಾಡುವ ವಿಶೇಷ ತಿಂಡಿಯಲ್ಲಿ ಎರೆ ಅಪ್ಪ ಕೂಡ ಒಂದಾಗಿದೆ. ತುಳುವಿನಲ್ಲಿ ಇದನ್ನು ಎಲೆ ಅಪ್ಪ ಎಂದು ಹೇಳುತ್ತಾರೆ. ಈ ಎರೆ ಅಪ್ಪವನ್ನು ವಿಶೇಷವಾಗಿ ಕರಾವಳಿಯಲ್ಲಿ ದೀಪಾವಳಿಯ ಮುನ್ನ ಬರುವ ನೀರು ತುಂಬುವ ಹಬ್ಬದಲ್ಲಿ ಇದನ್ನು ನೈವೇದ್ಯಕ್ಕೆ ಸಮರ್ಪಣೆ ಮಾಡುತ್ತಾರೆ.
ಎರೆ ಅಪ್ಪ ಮಾಡಲು ಬೇಕಾಗುವ ಸಾಮಗ್ರಿಗಳು:
- ಅಕ್ಕಿ: 1 ಪಾವು
- ಪುಡಿ ಮಾಡಿದ ಬೆಲ್ಲ: 3/4 ಪಾವು
- ತೆಂಗಿನ ಕಾಯಿ ತುರಿ: 1/4 ಪಾವು (ಒತ್ತಿ ಹಾಕಬಾರದು)
- ಮೆಂತೆ : 1 ಟಿ. ಚಮಚ
- ನೀರು : 200ಮಿಲಿ
- ಎಣ್ಣೆ : ಕಾಯಿಸಲು 1/4 ಲೀಟರ್
ಎರೆ ಅಪ್ಪ ಮಾಡುವ ವಿಧಾನ:
ಅಕ್ಕಿ ಮತ್ತು ಮೆಂತೆಯನ್ನು ಜೊತೆಗೆ 1 ಗಂಟೆ ನೆನೆಸಿಡಿ. ಅಳತೆ ನೀರಿನಲ್ಲಿ ಬೆಲ್ಲ ಹಾಕಿ, ಅದು ಕರಗುವಷ್ಟು ಬಿಸಿ ಮಾಡಿ ನಂತರ ಸೋಸಿಕೊಳ್ಳಿ. ಆರಿದ ಬಳಿಕ ಮಿಕ್ಸಿಗೆ ಹಾಕಿ ಅದರ ಜೊತೆಗೆ ತೊಳೆದ ಅಕ್ಕಿ, ಮೆಂತೆ, ತೆಂಗಿನ ತುರಿ ಹಾಕಿ ನುಣ್ಣಗೆ ರುಬ್ಬಿ, ಪಾತ್ರೆಗೆ ಹಾಕಿ 1 ಗಂಟೆ ಬಿಡಿ. ಬಾಣಲೆಯಲ್ಲಿ ಎಣ್ಣೆ ಇಟ್ಟು ಕಾದ ಬಳಿಕ ಉರಿಯನ್ನು ಮಂದ ಮಾಡಿ ಎಣ್ಣೆಗೆ ಚಿಕ್ಕ ಸೌಟಿನಲ್ಲಿ 1 ಸೌಟು ಹಿಟ್ಟು ಹಾಕಿ 2 ಬದಿಯನ್ನು ಚೆನ್ನಾಗಿ ಬೇಯಿಸಿ. ತುಳುವಿನಲ್ಲಿ ಎರೆ ಅಪ್ಪವನ್ನು ಎಲೆ ಅಪ್ಪ ಎಂದು ಕರೆಯುತ್ತಾರೆ.