ಆನಂದ ಆನಂದ ಮತ್ತೆ ಪರಮಾನಂದ – ಸಾಹಿತ್ಯ

0Shares

ರಚನೆ: ವಿಜಯದಾಸರು

ಆನಂದ ಆನಂದ ಮತ್ತೆ ಪರಮಾನಂದ || ಪ ||
ಆ ನಂದನ ಕಂದ ಒಲಿಯೆ ಏನಂದದೆ ವೇದವೃಂದಾ || ಅ.ಪ ||

ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವಗೆ || ೧ ||

ಜಲ ಕಾಷ್ಠ ಶೈಲ ಗಗನ ನೆಲ ಪವಕ ವಾಯು ತರು
ಫಲ ಪುಷ್ಪ ಬಳ್ಳಿಗಳೊಳಗೆ ಹರಿ ವ್ಯಾಪ್ತನೆಂದರಿತವಗೆ || ೨ ||

ತಾರೋ ಬಾರೋ ಬೀರೊ ಸಾರೊ ಮಾರೊ ಹಾರೊ ಹೋರೊ ಹೀರೊ
ಸೇರೋ ಯಾರೋ ತೋರೊ ಎಂಬುದು ಹರಿಯ ಪ್ರೇರಣೆ ಎಂದರಿತವಗೆ || ೩ ||

ಪೋಪುದು ಬರುತಿಪ್ಪುದು ಮತ್ತೆ ಕೋಪ ಶಾಂತ ಮಾಡುವುದು
ರೂಪು ಲಾವಣ್ಯ ಹರಿಯ ವ್ಯಾಪಾರ ಎಂದರಿತವೆಗೆ || ೪ ||

ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಶುದ್ಧ ವಿಜಯವಿಠಲನ್ನ ಪೊಂದಿ ಕೊಂಡಾಡುವವಗೆ || ೫ ||

Click here for English Lyrics

ಗಾಯಕರು: ಯು ಶಾಂತ

0Shares
See also  ರಾಮ ಭಜನೆ ಮಾಡೋ - ಸಾಹಿತ್ಯ

No Responses

Leave a Reply

error: Content is protected !!