ಆಡುತ ಬಾರಮ್ಮ – ಸಾಹಿತ್ಯ

0Shares

ರಚನೆ: —-

ಆಡುತ ಬಾರಮ್ಮ ನಲಿ ನಲಿದಾಡುತ ಬಾರಮ್ಮ || ಪ ||
ಆಡುತ ವರಗಳ ನೀಡುತ ದಯೆಯಿಂದ |
ಆಡುತ ನಮ್ಮ ಲಕ್ಷ್ಮಿ ನಡುಮನೆಗಿಂದು || ಅ.ಪ ||

ಹೆಜ್ಜೆಯನಿಡುತಾಲಿ | ವಜ್ರದ ವೈದನ ಕಾಲಲ್ಲಿ |
ಸಜ್ಜನರ ಕೈ ಸೇವೆಗೊಳ್ಳುತ |
ಗೆಜ್ಜೆ ಕಾಲ್ಗಳ ಗಿಲಿ ಗಿಲಿ ಗಿಲಿ ಎಂದು || ೧ ||

ಕಂಕಣ ಕೈಯಲ್ಲಿ | ತಿರುವುತ ವಂಕಿಯ ತೋಳಲ್ಲಿ |
ಪಂಕಜ ಮುಖಿಯೊಳೆ ಸಂಭ್ರಮದಿಂದಲಿ |
ಕಂಕಣ ಹಾರ ಕಿಣಿ ಕಿಣಿ ಕಿಣಿ ಎಂದು || ೨ ||

ವರಕೋಲಾಪುರದಿ | ನೆಲೆಸಿಹ ಪಂಚಗಂಗೆಯಲ್ಲಿ
ಭಕ್ತರ ಕರದಿಂದ ಸೇವೆಗೊಳ್ಳುತ |
ವರನರಸಿಂಹನ ಅರಸಿ ಮಹಾಲಕ್ಷ್ಮಿ || ೩ ||

Click here for English lyrics

ಗಾಯಕರು: ಶ್ರೀನಿಧಿ ರಾವ್

0Shares
See also  ಪ್ರಾಣದೇವ ನೀನಲ್ಲದೆ - Pranadeva Neenallade Lyrics

Leave a Reply

error: Content is protected !!