ಸೋಜುಗದ ಸೂಜು ಮಲ್ಲಿಗೆ – ಸಾಹಿತ್ಯ

0Shares

ರಚನೆ: —-

ಮಾದೇವ ಮಾದೇವ
ಮಾದೇವ ಮಾದೇವ
ಮಾ_ದೇ_ವ ಮಾದೇವ

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ || ಪ ||

ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ || ೧ ||

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ||

ತಪ್ಪಾಲೆ ಬೆಳಗಿವಿನೀ ತುಪ್ಪವ ಕಾಯಿಸ್ವ್ನಿ
ಕಿತ್ತಾಳೆ ಹಣ್ಣ ತಂದೀವ್ನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದೀವ್ನಿ ಮಾದಪ್ಪ
ಕಿತ್ತಾಡಿ ಬರುವೆ ಪರಸೆಗೆ ಮಹಾದೇವ ನಿಮ್ಗೆ || ೨ ||

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ||

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಮಾದೇವ ನೀವೇ, ಮಾದೇವ ನೀವೇ, ಮಾದೇವ ನೀವೆ |

ಬೆಟ್ಟತ್ಕೊಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ಮಾದೇವ ಗತಿ ಎಂದು ಮಾದೇವ ನೀವೆ
ಬೆಟ್ಟದ್ಮಾದೇವ ಗತಿ ಎಂದು ಅವರಿನ್ನೂ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ || ೩ ||

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ||

ಉಚ್ಛೆಳ್ಳು ಹೂವಂಗೆ ಹೆಚ್ಚ್ಯವೋ ನಿನ್ನ ಪರುಸೆ
ಹೆಚ್ಚಳಗಾರ ಮಾದಯ್ಯ, ಮಾದಯ್ಯ ನೀನೆ
ಹೆಚ್ಚಳಗಾರ ಮಾದಯ್ಯ ಏಳುಮಲೈಯ
ಹೆಚ್ಚೇವು ಕೌದಳ್ಳಿ ಕಣಿವೆಲಿ ಮಾದೇವ ನಿಮ್ಮ || ೪ ||

ಸೋಜುಗದ ಸೂಜು ಮಲ್ಲಿಗೆ
ಮಾದೇವ ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ ||

ಮಾದೇವ
ಸೋಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ ಆ ಆ ಆ…
ಸೋಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೋಜುಗದ ಸೂಜು ಮಲ್ಲಿಗೆ
ಮಾದೇವ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ
ಸೋಜುಗದ ಸೂಜು ಮಲ್ಲಿಗೆ
ಮಂಡೆ ಮ್ಯಾಲೆ ದುಂಡು ಮಲ್ಲಿಗೆ
ಮಾದೇವ, ಮಾದೇವ

Click here for English Lyrics

0Shares

Leave a Reply

error: Content is protected !!