ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ – ಉಡುಪಿ

0Shares

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಇತಿಹಾಸ

ಶ್ರೀ ಚಂದ್ರಮೌಳೀಶ್ವರ ದೇವರು ಉಡುಪಿ

ಶ್ರೀ ಅನಂತೇಶ್ವರ ದೇವರ ಎದುರುಗಡೆಯೇ ಪೂರ್ವದಿಕ್ಕಿನಲ್ಲಿರುವ ಪುಟ್ಟ ದೇವಾಲಯವೇ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ. ಈ ದೇವಾಲಯವು ಪುರಾತನವಾದರೂ ಇದರ ಬಗ್ಗೆ ಹೆಚ್ಚಿನ ಐತಿಹಾಸಿಕ ವಿವರಗಳು ದೊರೆತಿಲ್ಲ.

ಬಳಕೆಯಲ್ಲಿರುವ ಒಂದು ಐತಿಹ್ಯ ಹೀಗಿದೆ. ಉಡುಪಿಯ ಕೇಂದ್ರದಿಂದ ಸುಮಾರು ಅರ್ದ ಕಿ.ಮೀ ದೂರದಲ್ಲಿ ಅಬ್ಜಾರಣ್ಯ(ಪ್ರಸ್ತುತ ಪೂರ್ಣಪ್ರಜ್ಞ ಕಾಲೇಜು)ಎಂಬ ಬನವೊಂದಿದೆ. ಅಲ್ಲಿ ಒಂದು ಪುಷ್ಕರಣಿಯೂ ಇದೆ. ಇಲ್ಲಿ ಚಂದ್ರ ತಪಸ್ಸು ಮಾಡಿದನಂತೆ. ಅದಕ್ಕೆಂದೆ ಈ ಸ್ಥಳಕ್ಕೆ ಅಬ್ಜಾರಣ್ಯ ಎಂದು ಹೆಸರಿಸಲಾಯಿತಂತೆ. ಚಂದ್ರನ ತಪಸ್ಸಿಗೆ ಮೆಚ್ಚಿ ಒಲಿದ ಶಿವ ತಾಣವೇ ಚಂದ್ರಮೌಳೀಶ್ವರನ ದೇವಾಲಯ. ಹೀಗೆಂದು ಒಂದು ನಂಬಿಕೆ ಇಲ್ಲಿ ಪ್ರಚಲಿತವಾಗಿದೆ.

ಚಂದ್ರಮೌಳೀಶ್ವರ ದೇವಾಲಯ ಗಾತ್ರದಲ್ಲಿ ಅನಂತೇಶ್ವರ ದೇವಸ್ಥಾನಕ್ಕಿಂತ ಚಿಕ್ಕದು. ಹಿಂದಿನ ಕಾಲದಲ್ಲಿ ಈ ದೇವಸ್ಥಾನವನ್ನು “ಮೂಡು ದೇವಾಲಯ”(ಮಹೇಂದ್ರ ದಿಗಾಲಯ)ಎಂದು ಕರೆಯುತ್ತಿದ್ದರು ಎಂದು ಮಧ್ವವಿಜಯದಿಂದ ತಿಳಿದುಬರುತ್ತದೆ. ಗ್ರಾಮದ ಪ್ರಧಾನ ದೇವಸ್ಥಾನವಾಗಿದ್ದ ಶ್ರೀ ಅನಂತೇಶ್ವರಕ್ಕಿಂತ ಮೂಡು ದಿಕ್ಕಿನಲ್ಲಿರುವುದರಿಂದ ಈ ಹೆಸರು ಬಂತು.

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿ ಸ್ವಾಗತ ಗೋಪುರ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಸ್ವಾಗತ ಗೋಪುರ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿ ಮುಂಭಾಗ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಮುಂಭಾಗ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಉಡುಪಿ ಒಳಾಂಗಣ

ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ ಒಳಾಂಗಣ

ಇಂದಿಗೂ ಸ್ವಾಮೀಜಿಯವರು ಪರ್ಯಾಯಕ್ಕೆ ಕೂಡುವ ಮುನ್ನ ಚಂದ್ರಮೌಳೀಶ್ವರನ ದರ್ಶನ ಮಾಡಿ ಅನಂತರ ಶ್ರೀ ಅನಂತೇಶ್ವರ ದೇವರ ದರ್ಶನ ಮಾಡಿ, ನಂತರ ಶ್ರೀಕೃಷ್ಣ ದರ್ಶನ ಮಾಡುವ ಸಂಪ್ರದಾಯ ಇಂದಿಗೂ ನಡೆದುಬಂದಿದೆ.

0Shares
See also  ಉಡುಪಿ ಪರ್ಯಾಯ ಉತ್ಸವ

Leave a Reply

error: Content is protected !!