ಕೃಷ್ಣ ನೀ ಬೇಗನೇ ಬಾರೋ – ಸಾಹಿತ್ಯ

0Shares

ರಚನೆ: ಪುರಂದರದಾಸರು

ಕೃಷ್ಣ ನೀ ಬೇಗನೇ ಬಾರೋ || ಪ ||
ಬೇಗನೆ ಬಾರೋ ಮುಖವನ್ನು ತೋರೋ || ಅ.ಪ ||

ಕಾಲಾಲಂದುಗೆ ಗೆಜ್ಜೆ ನೀಲದ ಭಾವುಲಿ
ನೀಲವರ್ಣನೆ ನಾಟ್ಯವಾಡುತ್ತ ಬಾರೋ || ೧ ||

ಉಡಿಯಲ್ಲಿ ಉಡುಗೆಜ್ಜೆ ಬೆರಳಲ್ಲಿ ಉಂಗುರ
ಕೊರಳಲ್ಲಿ ಹಾಕಿದ ವೈಜಯಂತಿಮಾಲ || ೨ ||

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು
ಪೂಸಿದ ಶ್ರೀಗಂಧ ಮೈಯೊಳು ಗಮ್ಮ || ೩ ||

ತಾಯಿಗೆ ಬಾಯಲ್ಲಿ ಜಗವನ್ನು ತೋರಿದ
ಜಗದೋದ್ಧಾರಕ ನಮ್ಮ ಉಡುಪಿ ಶ್ರೀ ಕೃಷ್ಣ || ೪ ||

0Shares
See also  ಸದಾ ಎನ್ನ ಹೃದಯದಲ್ಲಿ - Sadaa Enna Hrudayadalli Lyrics

Leave a Reply

error: Content is protected !!